AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರಲ್ಲಿ ಹೆಚ್ಚಾದ PCOS ಮತ್ತು PCOD; ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯದಿದ್ದರೆ ಕಾಡುತ್ತೆ ಗಂಭೀರ ಸಮಸ್ಯೆ

ದಿನದಿಂದ ದಿನಕ್ಕೆ ಬದಲಾಗುತ್ತಿರುವ ಜೀವನ ಶೈಲಿ, ಒತ್ತಡದ ಬದುಕಿನಿಂದಾಗಿ ಮಹಿಳೆರಿಗೆ ಸಾಕಷ್ಟು ಸಮಸ್ಯೆಗಳನ್ನ ತಂದೊಡ್ಡುತ್ತಿದ್ದು, ಪಿಸಿಒಡಿಯಂತಹ ಸಮಸ್ಯೆಗಳು ಹೆಚ್ಚಳವಾಗಿ ಹೋಗಿವೆ.‌ ಕೋವಿಡ್ ನಂತರ PCOS ಮತ್ತು PCOD ಕಾಯಿಲೆಯಲ್ಲಿ ಶೇ. 22.6% ಹೆಚ್ಚಳವಾಗಿದ್ದು, ಮಹಿಳೆಯರು ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು ಅಂತ ಡಾಕ್ಟರ್ ಸಲಹೆ ನೀಡುತ್ತಿದ್ದಾರೆ.‌

ಮಹಿಳೆಯರಲ್ಲಿ ಹೆಚ್ಚಾದ PCOS ಮತ್ತು PCOD; ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯದಿದ್ದರೆ ಕಾಡುತ್ತೆ ಗಂಭೀರ ಸಮಸ್ಯೆ
ಸಾಂದರ್ಭಿಕ ಚಿತ್ರ
Poornima Agali Nagaraj
| Edited By: |

Updated on:Feb 08, 2024 | 7:41 AM

Share

ಬೆಂಗಳೂರು, ಫೆ.08: ದಿನದಿಂದ ದಿನಕ್ಕೆ ಬದಲಾಗುತ್ತಿರುವ ಜೀವನ ಶೈಲಿ, ಕೆಲಸದ ಒತ್ತಡ, ಹೋಟೆಲ ಫುಡ್ ಇವೆಲ್ಲ ಕಾರಣದಿಂದಾಗಿ ಮಹಿಳೆಯರಲ್ಲಿ ಆರೋಗ್ಯದ ಸಮಸ್ಯೆ ಕಾಡುವುದಕ್ಕೆ ಶುರುವಾಗಿದೆ.‌ ಹೀಗಾಗಿ ಮಹಿಳೆಯರಲ್ಲಿ ಪಿಸಿಒಡಿ (PCOD) ಹಾಗೂ ಪಿಸಿಒಎಸ್ (PCOS) ಸಮಸ್ಯೆಗಳು ಹೆಚ್ಚಾಗಿವೆ. ಅಂಡಾನು ತಯಾರಿಸುವ ಅಂಶದಲ್ಲಿ ನೀರಿನ ಗುಳೆಗಳು ಹೆಚ್ಚಳವಾಗಿ PCOD ಕಾಯಿಲೆಗೆ ಕಾರಣವಾಗುತ್ತಿವೆ.‌ PCOD ಕಾಯಿಲೆಯಲ್ಲಿ ಆಂಡ್ರೋಜನ್ ಹಾರ್ಮೋನ್ ಬಿಡುಗಡೆಯಾಗಿ, ಮಹಿಳೆಯರ ಫಲವತ್ತತೆ ಮತ್ತು ದೇಹದ ಮೇಲೆ ಪರಿಣಾಮ ಬೀರುತ್ತಿದೆ. ‌

PCOS ಚಯಾಪಚಯದ ಕಾಯಿಲೆಯಾಗಿದ್ದು, PCOD ಗಿಂತ ತೀವ್ರವಾಗಿರುತ್ತೆ‌. ಪುರುಷರಲ್ಲಿರುವ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಹಿಳೆಯರಲ್ಲಿ ಹೆಚ್ಚಾದಾಗ PCOS ಕಾಯಿಲೆ ಸಮಸ್ಯೆ ಉಂಟಾಗುತ್ತೆ. ಇನ್ನು, PCOS ಮತ್ತು PCOD ಜೀವನ ಶೈಲಿಯ ಕಾಯಿಲೆಯಾಗಿದ್ದು, ವರ್ಕ್ ಫರ್ಮ್ ಹೋಮ್, ಪ್ರೆಜರ್, ಕಡಿಮೆ ದೈಹಿಕ ಚಟುವಟಿಕೆ, ಜಂಕ್ ಫುಡ್‌‌ ಈ ರೀತಿಯ ಜೀವಿನ ಶೈಲಿಯಲ್ಲಿ ಅಪಾರ ಬದಲಾವಣೆಯಿಂದ PCOS ಮತ್ತು PCOD ಕಾಯಿಲೆಗೆ ಕಾರಣವಾಗುತ್ತಿದೆ. ಇದಲ್ಲದೇ PCOS ಮತ್ತು PCOD ಕಾಯಿಲೆಯಿಂದ ಪ್ರೆಗ್ನೆನ್ಸಿಯಲ್ಲಿ ತೊಂದರೆ, ಡಯಾಬಿಟಿಸ್ ಹಾಗು ಒಬೆಸಿಟಿ ಹೆಚ್ಚಳವಾಗಲಿದ್ದು, ಎಚ್ಚರಿಕೆಯಿಂದ ಇರುವಂತೆ ಡಾಕ್ಟರ್ ಗಳು ಎಚ್ಚರಿಕೆ ನೀಡುತ್ತಿದ್ದಾರೆ.

PCOS ಮತ್ತು PCOD ಕಾಯಿಲೆ ರೋಗ ಲಕ್ಷಣಗಳೇನು?

ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು

  • ವ್ಯಾಯಾಮ ಅಗತ್ಯವಾಗಿ ಮಾಡಬೇಕು
  • ತಿನ್ನುವ ಊಟದಲ್ಲಿ ಮಿತಿ ಇರಬೇಕು
  • ಸ್ವೀಟ್ ತಿನ್ನುವುದನ್ನ ಕಡಿಮೆ ಮಾಡಬೇಕು
  • ಹೈಪರ್ ಟೆಕ್ಷನ್ ನಂತಹ ಲಕ್ಷಣಗಳು ಕಂಡುಬಂದಾಗ ವೈದ್ಯರನ್ನ ಸಂಪರ್ಕಿಸುವುದು
  • ವೈದ್ಯರ ಸಲಹೆಗಳನ್ನ ಪಾಲಿಸುವುದು

ಇನ್ನು, ವೈದ್ಯರ ವರದಿ ಪ್ರಕಾರ PCOS ಮತ್ತು PCOD ಕಾಯಿಲೆ ಪ್ರಮಾಣ 2010 ರಲ್ಲಿ ಶೇ. 5.6%‌ರಷ್ಟಿತ್ತು. ಕೋವಿಡ್ ಸಂದರ್ಭದಲ್ಲಿ PCOS ಮತ್ತು PCOD ಕಾಯಿಲೆ ಪ್ರಮಾಣ ಶೇ. 8.6% ರಷ್ಟಾಯ್ತು. ಕೋವಿಡ್ ನಂತರ PCOS ಮತ್ತು PCOD ಕಾಯಿಲೆಯಲ್ಲಿ ಶೇ. 22.6% ಹೆಚ್ಚಳವಾಗಿದ್ದು, ಮಹಿಳೆಯರು ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು ಅಂತ ಡಾಕ್ಟರ್ ಸಲಹೆ ನೀಡುತ್ತಿದ್ದಾರೆ.‌ ಅಲ್ಲದೇ ಮಹಿಳೆಯರು ಕೂಡ ಡಾಕ್ಟರ್ ಗಳ ಸಲಹೆ ಪಡೆದಿಯೇ ಚಿಕಿತ್ಸೆಯನ್ನ ಪಡೆದುಕೊಳ್ಳಬೇಕಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:39 am, Thu, 8 February 24