Power Cut: ಬೆಂಗಳೂರಿನ ಬೊಮ್ಮನಹಳ್ಳಿ, ಮೈಕೋ ಲೇಔಟ್ ಸೇರಿ ಹಲವೆಡೆ ಇಂದು ಮಧ್ಯಾಹ್ನದವರೆಗೆ ಪವರ್ ಕಟ್
Bengaluru Power Cut: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಇನ್ನೆರಡು ದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ವಿದ್ಯುತ್ ಕಡಿತವಾಗಲಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಒಂದೆಡೆ ಭಾರೀ ಮಳೆ. ಇನ್ನೊಂದೆಡೆ ಮೈ ಕೊರೆಯುವ ಚಳಿ. ಇದರ ಮಧ್ಯೆ ಪವರ್ ಕಟ್ ಸಮಸ್ಯೆಯೂ ಶುರುವಾಗಿದೆ. ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಈ ವಾರಾಂತ್ಯದಲ್ಲಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಇಂದಿನಿಂದ 2 ದಿನ ವಿದ್ಯುತ್ ಪೂರೈಕೆಗೆ ತೊಂದರೆಯಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ತಿಳಿಸಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಇನ್ನೆರಡು ದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ವಿದ್ಯುತ್ ಕಡಿತವಾಗಲಿದೆ.
ಇಂದು ಪವರ್ ಕಟ್ ಇರುವ ಏರಿಯಾಗಳು: ಇಂದು (ಶನಿವಾರ) ಬೆಂಗಳೂರಿನ ಬೊಮ್ಮನಹಳ್ಳಿ, ಎನ್ಜಿಆರ್ ಲೇಔಟ್, ರೂಪೇನ ಅಗ್ರಹಾರ, ಸೂಲಿಕುಂಟೆ, ಮುತ್ತಾನಾಳೂರು ಕ್ರಾಸ್, ಬೇಗೂರು ಮುಖ್ಯ ರಸ್ತೆ, ವಿದ್ಯಾ ಜ್ಯೋತಿ ಸ್ಕೂಲ್ ರಸ್ತೆ, ಎಸ್ ಆರ್ ನಾಯ್ಡು ಲೇಔಟ್, ಹೊಸ ಮೈಕೋ ಲೇಔಟ್, ಜುನ್ನಸಂದ್ರ ಮುಖ್ಯ ರಸ್ತೆ, ಸನ್ ಸಿಟಿ, ಎಂ.ಎಸ್ ರಾಮಯ್ಯ ನಗರ, ರಾಘವೇಂದ್ರ ಬಡಾವಣೆಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪವರ್ ಕಟ್ ಇರಲಿದೆ.
ಭಾನುವಾರ ಪವರ್ ಕಟ್ ಇರುವ ಏರಿಯಾಗಳು: ಬೆಂಗಳೂರಿನ ಗಾಂಧಿಗ್ರಾಮ, ದೇವಯ್ಯ ಪಾರ್ಕ್, ಇ-ಬ್ಲಾಕ್ ಸುಬ್ರಹ್ಮಣ್ಯನಗರ ಬೀದಿದೀಪ, ಎ- ಬ್ಲಾಕ್ ಸುಬ್ರಹ್ಮಣ್ಯನಗರ, WP ರಸ್ತೆ 15 ನೇ ಕ್ರಾಸ್, 16ನೇ ಕ್ರಾಸ್ ಮಲ್ಲೇಶ್ವರಂ, ಎಲ್ ಜಿ ಹಳ್ಳಿ, ಸೂಲಿಕುಂಟೆ, ಮುತ್ತಾನಲ್ಲೂರು ಕ್ರಾಸ್, ಜುನಸಂದ್ರ ಮುಖ್ಯ ರಸ್ತೆ, ಸನ್ ಸಿಟಿ, ಎಂ.ಎಸ್ ರಾಮಯ್ಯ ನಗರ, ಎಸ್ ಆರಾಧನಾ ಶಾಲೆ ರಾಘವೇಂದ್ರ ಲೇಔಟ್, ಜಿ.ಆರ್ ಲ್ಯಾವೆಂಡರ್ ಅಪಾರ್ಟ್‌ಮೆಂಟ್‌ಗಳು, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಜಿಗಣಿ ಕೈಗಾರಿಕಾ ಪ್ರದೇಶಗಳು, ಜಿಗಣಿ KIADB ಪ್ರದೇಶಗಳು, ಅನಂತನಗರ ಕೈಗಾರಿಕಾ ಪ್ರದೇಶಗಳು, ವೀರಸಂದ್ರ ಕೈಗಾರಿಕಾ ಪ್ರದೇಶಗಳು, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ವಸಂತನರಸಾಪುರ ಕೈಗಾರಿಕಾ ಪ್ರದೇಶಗಳು 2 ಮತ್ತು 3ನೇ ಹಂತದಲ್ಲಿ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಇನ್ನಷ್ಟು ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ