Bengaluru: ಪ್ರಾಣ ಫೌಂಡೇಷನ್​ನಿಂದ ಪ್ರಾಣಿಗಳಿಗೆ ಆಂಬ್ಯುಲೆನ್ಸ್ ಸೇವೆ, ಸಹಾಯವಾಣಿ ಆರಂಭ

ನಟಿ ಸಂಯುಕ್ತ ಹೊರ್ನಾಡ್ ಅವರ ಪ್ರಾಣ ಫೌಂಡೇಶನ್ ನಗರದಾದ್ಯಂತ ಗಾಯಗೊಂಡ, ಅನಾರೋಗ್ಯ ಮತ್ತು ವೈದ್ಯಕೀಯ ಸಹಾಯದ ಅಗತ್ಯವಿರುವ ಪ್ರಾಣಿಗಳಿಗಾಗಿ ದಿನದ 24 ಗಂಟೆಯೂ ಲಭ್ಯವಿರುವ ಆಂಬ್ಯುಲೆನ್ಸ್ ಮತ್ತು ಸಹಾಯವಾಣಿಯ ಸೇವೆಯನ್ನು ಪ್ರಾರಂಭಿಸಿದ್ದಾರೆ.

Bengaluru: ಪ್ರಾಣ ಫೌಂಡೇಷನ್​ನಿಂದ ಪ್ರಾಣಿಗಳಿಗೆ ಆಂಬ್ಯುಲೆನ್ಸ್ ಸೇವೆ, ಸಹಾಯವಾಣಿ ಆರಂಭ
ಪ್ರಕಾಶ್ ರಾಜ್ Image Credit source: Twitter
Follow us
TV9 Web
| Updated By: ನಯನಾ ಎಸ್​ಪಿ

Updated on: Feb 16, 2023 | 2:25 PM

ಬೆಂಗಳೂರು: ಬೆಂಗಳೂರು ನಗರದಲ್ಲಿ ಪ್ರಾಣಿಗಳ ತುರ್ತು ಚಿಕಿತ್ಸೆಗೆ ಪ್ರಾಣಾ ಅನಿಮಲ್ ಫೌಂಡೇಶನ್ (Prana Animal Foundation) ಒಂದು ಉತ್ತಮ ಸೇವೆಯನ್ನು ಪ್ರಾರಂಭಿಸಿದೆ. ನಟ ಮತ್ತು ರಾಜಕಾರಣಿ ಪ್ರಕಾಶ್ ರಾಜ್ ಅವರು ಮಂಗಳವಾರ (ಫೆಬ್ರವರಿ 14) ಆಂಬ್ಯುಲೆನ್ಸ್‌ಗೆ ಚಾಲನೆ ನೀಡಿದರು. ಪ್ರಾಣ ಫೌಂಡೇಶನ್ ಮಂಗಳವಾರ (ಫೆಬ್ರವರಿ 14) ಬೆಂಗಳೂರಿನಲ್ಲಿ ಪ್ರಾಣಿಗಳ ರಕ್ಷಣೆಗಾಗಿ ವಿಶೇಷ ಆಂಬ್ಯುಲೆನ್ಸ್ ಅನ್ನು ಪ್ರಾರಂಭಿಸಿದೆ. ನಗರದಾದ್ಯಂತ ಗಾಯಗೊಂಡ, ಅನಾರೋಗ್ಯ ಮತ್ತು ವೈದ್ಯಕೀಯ ಸಹಾಯದ ಅಗತ್ಯವಿರುವ ಪ್ರಾಣಿಗಳಿಗೆ ಇದು ದಿನದ 24 ಗಂಟೆಯೂ ಈ ಆಂಬುಲೆನ್ಸ್ ಲಭ್ಯವಿರುತ್ತದೆ. ಇದರಿಂದ ಅಪಘಾತಕ್ಕೀಡಾದ ಅಥವಾ ತುರ್ತು ಚಿಕೆತ್ಸೆ ಅಗತ್ಯವಿರುವ ಪ್ರಾಣಿಗಳಿಗೆ ಸಹಾಯಕವಾಗಲಿದೆ.

ಪ್ರಾಣಿಗಳಿಗೆ ಅಪಘಾತಗಳು ಆದಾಗ ಕರೆ ಮಾಡಿ ತಿಳಿಸಲು ಪಶು ಸಂಗೋಪನಾ ಕೇಂದ್ರಗಳು ಇವೆ. ಇವು ದಿನಕ್ಕೆ 50 ಕರೆಗಳನ್ನು ಸ್ವೀಕರಿಸುತ್ತವೆ. ಆದರೆ ಅವುಗಳಲ್ಲಿ ಹೆಚ್ಚಿನವು ಸೌಲಭ್ಯಗಳ ಕೊರತೆ ಇರುತ್ತವೆ. ಹೀಗಾಗಿ ದೊಡ್ಡ-ದೊಡ್ಡ ಪ್ರಾಣಿಗಳನ್ನು ಆರೈಕೆ ಕೇಂದ್ರಗಳಿಗೆ ಸಾಗಿಸುವುದು ಸವಾಲಿನ ಕೆಲಸ. ಆದ್ದರಿಂದ ದೊಡ್ಡ ಆಂಬ್ಯುಲೆನ್ಸ್ ಸೇವೆ ನೀಡಲಾಗುತ್ತಿದೆ ಎಂದು ನಟಿ ಸಂಯುಕ್ತ ಹೊರ್ನಾಡ್ ಮಾಹಿತಿ ನೀಡಿದರು.

ನಟ ಮತ್ತು ರಾಜಕಾರಣಿ ಪ್ರಕಾಶ್ ರಾಜ್ ಅವರು ಮಂಗಳವಾರ (ಫೆಬ್ರವರಿ 14) ಆಂಬ್ಯುಲೆನ್ಸ್‌ಗೆ ಚಾಲನೆ ನೀಡಿದರು. ಪ್ರಾಣಾ ಫೌಂಡೇಶನ್‌ನ ಸಂಸ್ಥಾಪಕರಾದ ನಟಿ ಸಂಯುಕ್ತ ಹೋರ್ನಡ್ ಟ್ವಿಟರ್​​ನಲ್ಲಿ ಹೀಗೆ ಬರೆದಿದ್ದಾರೆ, “ಪ್ರೀತಿಗೆ ಯಾವುದೇ ಪರಿಹಾರವಿಲ್ಲ…ಆದರೆ ನಾವು ಜಗತ್ತನ್ನು ಇನ್ನೂ ಹೆಚ್ಚು ಪ್ರೀತಿಸುವುದರಲ್ಲಿ ತಪ್ಪಿಲ್ಲ.. ನಾನು ತುಂಬಾ ಸಂತೋಷವಾಗಿದ್ದೇನೆ, ನನ್ನ ಹೃದಯ ತುಂಬಿ ಬರುತ್ತಿದೆ. ಧನ್ಯವಾದಗಳು ಗುಂಡ ಮತ್ತು ಅಜ್ಜಿ ಭಜ್ಜಿ. ಪ್ರಾಣ ಫೌಂಡೇಶನ್ @praanafdn ನ ತುರ್ತು ಆಂಬ್ಯುಲೆನ್ಸ್ ಸೇವೆ ಮತ್ತು 24×7 ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿದ್ದಕ್ಕಾಗಿ ಪ್ರಕಾಶ್ ರಾಜ್ @prakashraaj ಸರ್ ಅವರಿಗೆ ಧನ್ಯವಾದಗಳು.”