AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೊರಗುಂಟೆಪಾಳ್ಯ ಜಂಕ್ಷನ್​ನಲ್ಲಿ ಮೊಬೈಲ್ ಟಾಯ್ಲೆಟ್ ನಿರ್ಮಿಸಿದ ಪಿಎಸ್ಐ: ಗೃಹ ಸಚಿವ ಆರಗ ಜಾನ್ಞೇಂದ್ರ ಅವರಿಂದ ಪ್ರಶಂಸೆ

ಗೊರಗುಂಟೆಪಾಳ್ಯ ಜಂಕ್ಷನ್​​ನಲ್ಲಿ ಮೊಬೈಲ್ ಟಾಯ್ಲೆಟ್ ನಿರ್ಮಿಸಿದ ಪಿಎಸ್ಐ ಶಾಂತಪ್ಪಗೆ ಗೃಹ ಸಚಿವ ಆರಗ ಜಾನ್ಞೇಂದ್ರ ಮತ್ತು ಬಿಬಿಎಂಪಿ ಕಮೀಷನರ್ ತುಷಾರ್ ಗಿರಿನಾಥ್ ಪ್ರಶಂಸಿಸಿದ್ದಾರೆ.

ಗೊರಗುಂಟೆಪಾಳ್ಯ ಜಂಕ್ಷನ್​ನಲ್ಲಿ ಮೊಬೈಲ್ ಟಾಯ್ಲೆಟ್ ನಿರ್ಮಿಸಿದ ಪಿಎಸ್ಐ: ಗೃಹ ಸಚಿವ ಆರಗ ಜಾನ್ಞೇಂದ್ರ ಅವರಿಂದ ಪ್ರಶಂಸೆ
ಮೊಬೈಲ್ ಟಾಯ್ಲೆಟ್ ನಿರ್ಮಿಸಿದ ಪಿಎಸ್ಐ ಶಾಂತಪ್ಪ
TV9 Web
| Edited By: |

Updated on: Jun 27, 2022 | 12:59 PM

Share

ಬೆಂಗಳೂರು: ಗೊರಗುಂಟೆಪಾಳ್ಯ ಜಂಕ್ಷನ್​​ನಲ್ಲಿ ಮೊಬೈಲ್ ಟಾಯ್ಲೆಟ್ (Mobile Toilet) ನಿರ್ಮಿಸಿದ ಪಿಎಸ್ಐ ಶಾಂತಪ್ಪಗೆ ಗೃಹ ಸಚಿವ ಆರಗ ಜಾನ್ಞೇಂದ್ರ ಪ್ರಶಂಸಿಸಿದ್ದಾರೆ. ಟಾಯ್ಲೆಟ್ ನಿರ್ಮಾಣಕ್ಕೆ ನೂರು ದಿನ ಟ್ವಿಟರ್ ಅಭಿಯಾನ ನಡೆಸಿದ್ದ ಪಿಎಸ್ಐ ಶಾಂತಪ್ಪ, ಸ್ಥಳೀಯ ಶಾಸಕ ಹಾಗೂ ಸಚಿವ ಮುನಿರತ್ನ ಹಾಗೂ ಬಿಬಿಎಂಪಿಗೆ ಟ್ಯಾಗ್ ಮಾಡಿ ಅಭಿಯಾನ ಮಾಡಿದ್ದಾರೆ. ಬಿಬಿಎಂಪಿಯಿಂದ ಸ್ಪಂದನೆ ಸಿಗದ ಹಿನ್ನಲೆ ತಾನೇ ಹತ್ತು ಮೊಬೈಲ್ ಟಾಯ್ಲೆಟ್​ಗಳನ್ನ ಪಿಎಸ್ಐ ಶಾಂತಪ್ಪ ನಿರ್ಮಿಸಿದ್ದಾರೆ. ಪಿಎಸ್ಐ ಶಾಂತಪ್ಪ ಕಾರ್ಯಕ್ಕೆ ಆರಗ ಜ್ಞಾನೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ಕಚೇರಿಗೆ ಕರೆಯಿಸಿ ಅಭಿನಂದಿಸಿದ್ದಾರೆ. ಜೊತೆಗೆ ಬಿಬಿಎಂಪಿ ಕಮೀಷನರ್​ ಪಿಎಸ್ಐ ಶಾಂತಪ್ಪನನ್ನು ತಮ್ಮ ಕಚೇರಿಗೆ ಕರೆಯಿಸಿ ಬಿಬಿಎಂಪಿ ಕಮೀಷನರ್ ತುಷಾರ್ ಗಿರಿನಾಥ್ ಅಭಿನಂದಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಪ್ರೇರಣೆಯಿಂದ ಮೊಬೈಲ್ ಶೌಚಾಲಯ ನಿರ್ಮಾಣ ಮಾಡುತ್ತಿರುವುದಾಗಿ ಪಿಎಸ್ಐ ಶಾಂತಪ್ಪ ಹೇಳಿದ್ದಾರೆ.

ಗೊರಗುಂಟೆಪಾಳ್ಯ ಜಂಕ್ಷನ್ ಬಳಿ ಮೊಬೈಲ್ ಟಾಯ್ಲೆಟ್ ನಿರ್ಮಿಸಿದ್ದು, ಮಂಗಳಮುಖಿಯವರಿಂದ ಶೌಚಾಲಯ ಉದ್ಘಾಟನೆ ಮಾಡಲಾಗಿದೆ. ಪ್ರತಿನಿತ್ಯ ಸಾವಿರಾರು ಜನ ಗೊರಗುಂಟೆಪಾಳ್ಯ ಜಂಕ್ಷನ್‌ನಿಂದ ರಾಜ್ಯದ ನಾನಾ ಭಾಗದ ಕಡೆ ಪ್ರಯಾಣಿಸುತ್ತಾರೆ. ಬಸ್‌ಗಳಿಗಾಗಿ ಹಗಲು ರಾತ್ರಿ ಕಾದು ನಿಂತಿರುತ್ತಾರೆ. ಆದರೆ ಜಂಕ್ಷನ್‌ನಲ್ಲಿ ಶೌಚಾಲಯ ಇಲ್ಲದೆ ಸಾರ್ವಜನಿಕರು ಪರದಾಡುವಂತ್ತಾಗಿದ್ದು, ಖುದ್ದು ತಮ್ಮ ತಾಯಿಯನ್ನ ಊರಿಗೆ ಕರೆದೊಯ್ಯುವಾಗ ಪಿಎಸ್ಐ ಶಾಂತಪ್ಪ ಪರಿತಪಿಸಿದ್ದು, ತಮ್ಮ ತಾಯಿ ಅನುಭವಿಸಿದ ತೊಂದರೆ ಬೇರೆಯವರು ಅನುಭವಿಸಬಾರದು ಅಂತ ದಿಟ್ಟ ಹೆಜ್ಜೆ ಇಟ್ಟರು.

ಇದನ್ನೂ ಓದಿ: ಕಳಪೆ ರಸ್ತೆ ಬಗ್ಗೆ ಪ್ರಧಾನಿ ಕಚೇರಿಗೆ ತಪ್ಪು ಮಾಹಿತಿ ಕೊಟ್ಟ ಬಿಬಿಎಂಪಿ: ಗುತ್ತಿಗೆದಾರನ ರಕ್ಷಣೆಗೆ ಯತ್ನಿಸುತ್ತಿರುವ ಆರೋಪ

ಶೌಚಾಲಯಕ್ಕಾಗಿ ಬಿಬಿಎಂಪಿ ಮತ್ತು ಸ್ಥಳೀಯ ಶಾಸಕ ಮುನಿರತ್ನ ಗಮನಕ್ಕೆ ತರಲು ನಿರಂತರ ಪ್ರಯತ್ನ ಪಟ್ಟಿದ್ದು, ಮುನಿರತ್ನ ಹಾಗೂ ಬಿಬಿಎಂಪಿಗೆ ಟ್ಯಾಗ್ ಮಾಡಿ ಟ್ವಿಟರ್ ಅಭಿಯಾನ ಕೂಡ ಮಾಡಿದರು. ಆದರೆ ಅಭಿಯಾನಕ್ಕೆ ಬಿಬಿಎಂಪಿ ಮತ್ತು ಸಚಿವ ಮುನಿರತ್ನರಿಂದ ಯಾವುದೆ ಪ್ರಯೋಜನವಾಗದಿದ್ದಾಗ, ತಮ್ಮ ಆಪ್ತರ ಜೊತೆಗೂಡಿ ಮೊಬೈಲ್ ಶೌಚಾಲಯವನ್ನು ಪಿಎಸ್ಐ ಶಾಂತಪ್ಪ ನಿರ್ಮಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಪಿಎಸ್ಐ ಶಾಂತಪ್ಪ ಮಾಡಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಡಾ. ಹೆಡಗೇವಾರ್ ಸಂಚಾಲಿತ ಆರೋಗ್ಯ ಕೇಂದ್ರ ಉದ್ಘಾಟನೆ 

ವಿಜಯಪುರ: ಜಿಲ್ಲೆಯಲ್ಲಿ ಲೋಕಹಿತ ಟ್ರಸ್ಟ್ ವತಿಯಿಂದ ಡಾ. ಹೆಡಗೇವಾರ್ ಸಂಚಾಲಿತ ಆರೋಗ್ಯ ಕೇಂದ್ರವನ್ನು ನಗರದ ಉಪ್ಪಲಿ ಬುರ್ಜ್ ಹತ್ತಿರ‌ ಉದ್ಘಾಟನೆ ಮಾಡಲಾಗಿದೆ. ಡಾ. ಹೆಡಗೇವಾರ್ ಆರೋಗ್ಯ ಕೇಂದ್ರ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಸ್ವಯಂ‌ಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ್ ಬೆಂಡೆ, ಲೋಕಹಿತ ಟ್ರಸ್ಟ್ ಚೆರಮನ್ ಅರವಿಂದರಾವ್ ದೇಶಪಾಂಡೆ ಸೇರಿದಂತೆ ಆರ್​.ಎಸ್​.ಎಸ್​ ನಾಯಕರು ಭಾಗಿಯಾಗಿದ್ದರು. ಜೊತೆಗೆ ಸಚಿವ ಮುರುಗೇಶ ನಿರಾಣಿ, ಸಂಸದ ರಮೇಶ ಜಿಗಜಿಣಗಿ, ಶಾಸಕ ರಮೇಶ ಭೂಸನೂರ ಸೇರಿದಂತೆ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೈರಾಗಿದ್ದಾರೆ.

ಇದನ್ನೂ ಓದಿ: Eoin Morgan: ಇಯಾನ್ ಮೋರ್ಗನ್ ಶೀಘ್ರದಲ್ಲೇ ನಿವೃತ್ತಿ: ಇಂಗ್ಲೆಂಡ್ ತಂಡಕ್ಕೆ ಹೊಸ ನಾಯಕ..!