AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏ.6ರಂದು ಚಿಕನ್, ಮಟನ್ ಸಿಗಲ್ಲ: ಈ ಭಾನುವಾರದ ಬಾಡೂಟಕ್ಕೆ ಬಿತ್ತು ಬ್ರೇಕ್..!

ಭಾನುವಾರ ಬಂದ್ರೆ ಸಾಕು ಪಾರ್ಟಿ ಮೂಡ್​ನಲ್ಲಿರುತ್ತಾರೆ. ಭಾನುವಾರ ಸರ್ಕಾರಿ ಸೇರಿದಂತ ಖಾಸಗಿ ಕಚೇರಿಗಳಿಗೆ ರಜಾ. ಹೀಗಾಗಿ ಅಂದು ಮಜಾ ದಿನವಾಗಿರುತ್ತೆ. ಅದರಲ್ಲೂ ಭಾನುವಾರದ ಬಾಡೂಟ ಎಲ್ಲೆಡೆ ಘಮ ಘಮಿಸಿರುತ್ತೆ. ಆದ್ರೆ, ಈ ಭಾನುವಾರದ ಬಾಡೂಟಕ್ಕೆ ಬ್ರೇಕ್ ಬೀಳುವುದು ಗ್ಯಾರಂಟಿ. ಯಾಕಂದ್ರೆ, ಏಪ್ರಿಲ್ 06ರಂದು ಬೆಂಗಳೂರಿನಲ್ಲಿ ಚಿಕನ್‌ ಹಾಗೂ ಮಟನ್‌ ಸಿಗುವುದಿಲ್ಲ. ಇದರಿಂದ ಪ್ರತಿ ಭಾನುವಾರ ಮಾಂಸ ಸೇವಿಸುತ್ತಿದ್ದ ನಾನ್​​ ವೆಜ್​ ಪ್ರಿಯರು ಈ ವಾರ ಸಸ್ಯಾಹಾರಿಗಳಾಗಬೇಕಿದೆ.

ಏ.6ರಂದು ಚಿಕನ್, ಮಟನ್ ಸಿಗಲ್ಲ: ಈ ಭಾನುವಾರದ ಬಾಡೂಟಕ್ಕೆ ಬಿತ್ತು ಬ್ರೇಕ್..!
Meat
ರಮೇಶ್ ಬಿ. ಜವಳಗೇರಾ
|

Updated on:Apr 04, 2025 | 9:25 PM

Share

ಬೆಂಗಳೂರು, (ಏಪ್ರಿಲ್ 04): ರಾಮನವಮಿ (Ram Navami 2025) ಹಿನ್ನೆಲೆಯಲ್ಲಿ ಏಪ್ರಿಲ್ 06ರಂದು ಭಾನುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (bruhat bengaluru mahanagara palike) ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ವಧೆಯನ್ನು ನಿಷೇಧಿಸಲಾಗಿದೆ. ಇದೇ ಭಾನುವಾರ ರಾಮನವಮಿ ಆಚರಣೆ ಹಿನ್ನೆಲೆಯಲ್ಲಿ ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿವಧೆ (animal slaughter and meat sale) ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಬಿಎಂಪಿಯ ಪಶುಪಾಲನಾ ವಿಭಾಗ ಇಂದು (ಏಪ್ರಿಲ್ 04) ಬಿಬಿಎಂಪಿಯ ಪಶುಪಾಲನಾ ವಿಭಾಗ ಆದೇಶ ಹೊರಡಿಸಿದೆ. ಹೀಗಾಗಿ ಭಾನುವಾರದ ಬಾಡೂಟಕ್ಕೆ ಬ್ರೇಕ್​ ಬೀಳುವುದು ಗ್ಯಾರಂಟಿ-1001739.

ಈ ಬಗ್ಗೆ ಬಿಬಿಎಂಪಿಯ ಪಶುಪಾಲನಾ ವಿಭಾಗದಿಂದ ಆದೇಶ ಹೊರಡಿಸಿದ್ದು. ” ಇದೇ ಏಪ್ರಿಲ್ 06) ರಾಮನವಮಿ ಹಬ್ಬದಂದು ಕುರಿ, ಕೋಳಿ, ಮೀನು, ಮಾಂಸ ಮಾರಾಟ ಹಾಗೂ ಪ್ರಾಣಿ ವಧೆಯನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Rama Navami 2025: ಈ ವರ್ಷ ರಾಮ ನವಮಿ ಯಾವಾಗ ಆಚರಿಸಲಾಗುತ್ತದೆ? ಪುರಾಣ ಕಥೆ ಹಾಗೂ ಮಹತ್ವ ಇಲ್ಲಿದೆ

ಭಾನುವಾರ ಮಾಂಸಾಹಾರ ಪ್ರಿಯರಿಗೆ ಹಬ್ಬದಂತೆ. ಹೀಗಾಗಿ ಭಾನುವಾರದ ಬಾಡೂಟ ಎಂದೇ ಫೇಮಸ್ ಆಗಿದ್ದು, ಭಾನುವಾರದ ಬಂತೆಂದರೆ ಸಾಕು ಸಂಡೇ ಸ್ಪೆಷಲ್ ಏನು ಅಂತೆಲ್ಲಾ ವಿಚಾರಿಸುತ್ತಾರೆ. ಇನ್ನು ಸರ್ಕಾರಿ ಹಾಗು ಖಾಸಗಿ ಉದ್ಯೋಗಿಗಳಿಗೂ ಭಾನುವಾರ ರಜೆ ಇರುವುದರಿಂದ ಗೆಳೆಯರು. ಸಂಬಂಧಿಕರು ಭಾನುವಾರ ಒಂದೆಡೆ ಸೇರಿ ನಾನ್​ ವೆಜ್ ಪ್ರಿಯರಾಗಿದ್ದರೆ ಭರ್ಜರಿ ಭಾನುವಾರದ ಬಾಡೂಟ ಸವಿದು ಎಂಜಾಯ್ ಮಾಡುತ್ತಾರೆ. ಆದ್ರೆ, ಏಪ್ರಿಲ್ 6ರಂದು ಮಾಂಸ ಪ್ರಿಯಕರಿಗೆ ಡ್ರೈ ಡೇ ಆಗಲಿದೆ.

ಇದನ್ನೂ ಓದಿ
Image
ರಾಮ ನವಮಿ ಹಬ್ಬದ ವಿಶೇಷ ಕೋಸಂಬರಿ-ಪಾನಕ ರೆಸಿಪಿ ಇಲ್ಲಿದೆ ನೋಡಿ…
Image
ರಾಮನವಮಿಯಂದು ಉಪವಾಸ ಆಚರಿಸುವುದು ಹೇಗೆ ? ಇಲ್ಲಿದೆ ಮಾಹಿತಿ
Image
ವಿವಾಹದಲ್ಲಿ ವಿಳಂಬವಾಗುತ್ತಿದೆಯೇ? ರಾಮನವಮಿಯಂದು ಈ ಪರಿಹಾರ ಮಾಡಿ
Image
ರಾಮ ನವಮಿಯಂದು ಈ ವಸ್ತುಗಳನ್ನು ಮನೆಗೆ ತರುವುದು ತುಂಬಾ ಒಳ್ಳೆಯದು!

ಭಗವಾನ್ ವಿಷ್ಣುವಿನ ಅವತಾರವಾದ ಶ್ರೀರಾಮನು ಜನಿಸಿದ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಶ್ರೀ ರಾಮಚಂದ್ರನ ಹುಟ್ಟುಹಬ್ಬ ಮಾತ್ರವಲ್ಲದೇ, ಸೀತಾ ಮಾತೆಯೊಂದಿಗಿನ ವಿವಾಹ ಮತ್ತು ಶ್ರೀ ರಾಮಪಟ್ಟಾಭಿಷೇಕದ ದಿನವಾಗಿಯೂ ಆಚರಿಸಲಾಗುತ್ತದೆ. ಈ ವಿಶೇಷ ದಿನ ಚೈತ್ರ ಮಾಸದ ಶುಕ್ಲಪಕ್ಷದ ನವಮಿಯಂದು ನಡೆಯುತ್ತದೆ. ಇದು ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಬರುತ್ತದೆ. ಈ ದಿನ ಶ್ರೀರಾಮನ ಭಕ್ತರು ಉಪವಾಸ ಕೈಗೊಂಡು ರಾಮಾಯಣವನ್ನು ಪಠಿಸುತ್ತಾರೆ, ಭಜನೆಗಳನ್ನು ಮಾಡುತ್ತಾರೆ.

 ರಾಮ ನವಮಿ ಯಾವಾಗ?

ಹಿಂದೂ ಕ್ಯಾಲೆಂಡರ್ ಪ್ರಕಾರ, ಚೈತ್ರ ಮಾಸದ ಶುಕ್ಲಪಕ್ಷ ನವಮಿ ತಿಥಿ ಏಪ್ರಿಲ್ 5 ರ ಸಂಜೆ 7:26 ಗಂಟೆಗೆ ಪ್ರಾರಂಭವಾಗುತ್ತದೆ. ಈ ತಿಥಿ ಏಪ್ರಿಲ್ 6 ರಂದು ಸಂಜೆ 7:22 ಗಂಟೆಗೆ ಮುಕ್ತಾಯವಾಗುತ್ತದೆ. ಹಿಂದೂ ಧರ್ಮದಲ್ಲಿ ಉದಯತಿಥಿಯನ್ನು ಪ್ರಾಥಮಿಕವಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ, ಈ ವರ್ಷ 2025 ರಲ್ಲಿ ಶ್ರೀ ರಾಮ ನವಮಿ ಏಪ್ರಿಲ್ 6 ರಂದು ನಡೆಯಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:19 pm, Fri, 4 April 25