ಕ್ವಾರಂಟೈನ್​ನಲ್ಲಿ ಇದ್ದುಕೊಂಡೇ ತಯಾರಿ.. ಸಿಡಿ ಯುವತಿ ಹೇಳಿಕೆ ಬೆನ್ನಲ್ಲೇ ವಕೀಲರ ಜೊತೆ ರಮೇಶ್ ಜಾರಕಿಹೊಳಿ ಚರ್ಚೆ

ಏಪ್ರಿಲ್ 13ರಂದು ಸಿಡಿ ಲೇಡಿಯ ವಿಡಿಯೋ ಬಿಡುಗಡೆ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸುಪ್ರೀಂ ಕೋರ್ಟ್ ವಕೀಲರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಸಿಡಿ ಲೇಡಿ ನಿನ್ನೆ ಹೇಳಿಕೆ ನೀಡಿ ಬಿಡುಗಡೆ ಮಾಡಿದ ವಿಡಿಯೋ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

  • TV9 Web Team
  • Published On - 8:02 AM, 14 Apr 2021
ಕ್ವಾರಂಟೈನ್​ನಲ್ಲಿ ಇದ್ದುಕೊಂಡೇ ತಯಾರಿ.. ಸಿಡಿ ಯುವತಿ ಹೇಳಿಕೆ ಬೆನ್ನಲ್ಲೇ ವಕೀಲರ ಜೊತೆ ರಮೇಶ್ ಜಾರಕಿಹೊಳಿ ಚರ್ಚೆ
ರಮೇಶ್ ಜಾರಕಿಹೊಳಿ (ಸಂಗ್ರಹ ಚಿತ್ರ)

ಬೆಂಗಳೂರು: ರಾಜಕೀಯದಲ್ಲಿ ಭಾರಿ ಸದ್ದು ಮಾಡಿದ್ದ ಅನೇಕ ತಿರುವುಗಳಿಂದ ಕುತೂಹಲ ಹುಟ್ಟು ಹಾಕಿದ್ದ ಸಿಡಿ ಪ್ರಕರಣ ಸಂಬಂಧ ನಿನ್ನೆ ರಮೇಶ್ ಜಾರಕಿಹೊಳಿ ತಮ್ಮ ವಕೀಲರ ಜೊತೆ ಚರ್ಚೆ ನಡೆಸಿದ್ದಾರಂತೆ. ಏಪ್ರಿಲ್ 13ರಂದು ಸಿಡಿ ಲೇಡಿ ವಿಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸುಪ್ರೀಂ ಕೋರ್ಟ್ ವಕೀಲರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಸಿಡಿ ಲೇಡಿ ನಿನ್ನೆ ಹೇಳಿಕೆ ನೀಡಿ ಬಿಡುಗಡೆ ಮಾಡಿದ ವಿಡಿಯೋ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಕೊರೊನಾ ಪಾಸಿಟಿವ್ ಬಂದಿದೆ ಎಂಬ ಕಾರಣಕ್ಕಾಗಿ ಹೋಮ್​ ಕ್ವಾರಂಟೈನ್ ಆಗಿರುವ ರಮೇಶ್ ಜಾರಕಿಹೊಳಿ ಕ್ವಾರಂಟೈನ್ ಮುಗಿದ ಬಳಿಕ ದಾಖಲೆ ಜೊತೆ ಎಸ್​ಐಟಿ ಮುಂದೆ ಹಾಜರಾಗಲಿದ್ದಾರೆ. ಎಸ್​ಐಟಿಗೆ ಪೂರಕ ದಾಖಲೆಗಳನ್ನು ಒದಗಿಸಿ ಆರೋಪ ಮುಕ್ತರಾಗಿ ಬರಲು ರಮೇಶ್ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈಗಾಗಲೇ ಕೆಲ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಸಂತ್ರಸ್ತ ಯುವತಿಯ ಆರೋಪಗಳಿಗೆ ತಕ್ಕ ಉತ್ತರ ನೀಡಲು ವಕೀಲರ ಸಲಹೆಯಂತೆ ಸಾಕ್ಷಗಳ ಜೊತೆಗೆ ವಿಚಾರಣೆಗೆ ಬರಲು ರಮೇಶ್ ತಯಾರಿ ನಡೆಸಿದ್ದಾರೆ.

ನಿನ್ನೆ ಬಿಡುಗಡೆಯಾದ ವಿಡಿಯೋದಲ್ಲಿ ಯುವತಿ ಹೇಳಿದ್ದೇನು?
‘ನಾನು ಈ ಹಿಂದೆ ನೀಡಿದ್ದ ಹೇಳಿಕೆಗೆ ಬದ್ಧಳಾಗಿದ್ದೇನೆ. ಎಸ್‌ಐಟಿ ಅಧಿಕಾರಿಗಳ ಮುಂದೆ ನಾನು ಉಲ್ಟಾ ಹೇಳಿಕೆ ನೀಡಿಲ್ಲ. ನಾನು ಒತ್ತಡದಿಂದ ಹೇಳಿಕೆ ನೀಡಿದ್ದೇನೆಂಬುದು ಸತ್ಯಕ್ಕೆ ದೂರವಾದ ಮಾತು. ಜಡ್ಜ್‌ ಮುಂದೆ ಮತ್ತೊಮ್ಮೆ ಹೇಳಿಕೆ ನೀಡಲು ಮನವಿ ಮಾಡಿಲ್ಲ. ಪೋಷಕರ ಜೊತೆ ಚರ್ಚಿಸಿದ ಬಳಿಕ ಮನಸ್ಸು ಬದಲಾಯಿಸಿಲ್ಲ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನೀಡಲು ನಿನ್ನೆ ಎಸ್‌ಐಟಿ ಅಧಿಕಾರಿಗಳ ಮುಂದೆ ನಾನು ಹಾಜರಾಗಿದ್ದೆ. ಆದ್ರೆ ಎಸ್‌ಐಟಿ ಮುಂದೆ ಉಲ್ಟಾ ಹೇಳಿಕೆ ನೀಡಿಲ್ಲ. ಇನ್ನೂ ರಮೇಶ್ ಜಾರಕಿಹೊಳಿಯನ್ನು ವಿಚಾರಣೆಗೆ ಕರೆಸಿಲ್ಲ. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ರಮೇಶ್ ಜಾರಕಿಹೊಳಿ ಕೊರೊನಾ ಪೀಡಿತರಂತೆ ನಟಿಸುತ್ತಿದ್ದಾರೆ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಈ ರೀತಿ ಸುದ್ದಿ ಸೃಷ್ಟಿಸಿ ನನ್ನ ವಿರುದ್ದ ಷಡ್ಯಂತ್ರ ಮಾಡಿರುವ ಸಾಧ್ಯತೆ ಇದೆ’ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಗಂಭೀರ ಆರೋಪ ಮಾಡಿದ್ರು. ಇದಕ್ಕೆ ಸಂಬಂಧಿಸಿದಂತೆ ಪತ್ರವನ್ನೂ ಬರೆದಿದ್ದಾರೆ. ಆ ಪತ್ರ ಹಾಗೂ ಹೇಳಿಕೆ ನೀಡಿರುವ ವಿಡಿಯೋ ಬಿಡುಗಡೆ ಆದ ಬಳಿಕ ರಮೇಶ್​ ಜಾರಕಿಹೊಳಿ ವಕೀಲರ ಜೊತೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

(Ramesh Jarkiholi CD Case Ramesh discussed With his Lawyer through Phone)

ಇದನ್ನೂ ಓದಿ: ಸಿಡಿ ಸಂತ್ರಸ್ತೆಯಿಂದ ಮತ್ತೊಂದು ವಿಡಿಯೋ ಅಸ್ತ್ರ: ಕ್ವಾರಂಟೈನ್​ ಆಗಿರುವ ರಮೇಶ್​ ಜಾರಕಿಹೊಳಿಗೆ ಶುರುವಾಯ್ತಾ ಅಸಲಿ ಪರೀಕ್ಷೆ?