AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನ ನಾಲ್ಕು ಕಡೆ ಎನ್​ಐಎ ಅಧಿಕಾರಿಗಳ ದಾಳಿ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಬೆಂಗಳೂರಿನ ನಾಲ್ಕು ಕಡೆ ದಾಳಿ ಮಾಡಿದ್ದಾರೆ. ರಾಮೇಶ್ವರಂ ಕೇಫೆಯಲ್ಲಿ ಬಾಂಬ್​​ ಸ್ಫೋಟಿಸಿದ್ದ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.

ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನ ನಾಲ್ಕು ಕಡೆ ಎನ್​ಐಎ ಅಧಿಕಾರಿಗಳ ದಾಳಿ
ಎನ್​ಐಎ
Shivaprasad B
| Edited By: |

Updated on:May 21, 2024 | 1:25 PM

Share

ಬೆಂಗಳೂರು, ಮೇ 21: ಬೆಂಗಳೂರಿನ ವೈಟ್​ಫೀಲ್ಡ್​​ನಲ್ಲಿರುವ ರಾಮೇಶ್ವರಂ ಕೆಫೆ ಬಾಂಬ್​​​ ಸ್ಫೋಟ (Rameswaram Cafe Blast) ಪ್ರಕರಣ ಸಂಬಂಧಿಸಿದಂತೆ ಬೆಂಗಳೂರಿನ ನಾಲ್ಕು ಕಡೆ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ದಾಳಿ ಮಾಡಿದ್ದಾರೆ. ರಾಮೇಶ್ವರಂ ಕೇಫೆಯಲ್ಲಿ ಬಾಂಬ್​​ ಸ್ಫೋಟಿಸಿದ್ದ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆ ವೇಳೆ ಎನ್​ಐಎ ಅಧಿಕಾರಿಗಳು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಅಧಿಕಾರಿಗಳು ಕೊಯಮತ್ತೂರು ಮತ್ತು ಬೆಂಗಳೂರು ಸೇರಿದಂತೆ 11 ಕಡೆ ದಾಳಿ ನಡೆಸಿದ್ದಾರೆ.

ಮೂಲಗಳ ಪ್ರಕಾರ ಎನ್‌ಐಎ ಅಧಿಕಾರಿಗಳು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಮತ್ತು ಬನಶಂಕರಿಯಲ್ಲಿ ದಾಳಿ ಮಾಡಿದ್ದಾರೆ. ಕೊಯಮತ್ತೂರಿನ ನಾರಾಯಣಗುರು ಖಾಸಗಿ ಆಸ್ಪತ್ರೆಯ ಎನ್​ಐಎ ಕೊಯಮತ್ತೂರಿನ ವೈದ್ಯರಾದ ಜಾಫರ್ ಇಕ್ಬಾಲ್ ಮತ್ತು ನಯನ್ ಸಾದಿಕ್ ಮನೆಗಳ ಮೇಲೆ ದಾಳಿ ನಡೆಸಿದೆ. ಈ ಇಬ್ಬರೂ ಆರೋಪಿಗಳಿಗೆ ಹಣ ಸಹಾಯ ಮಾಡುತ್ತಿದ್ದರು ಎಂಬ ಮಾಹಿತಿ ಎನ್​ಐಎ ಅಧಿಕಾರಿಗಳಿಗೆ ದೊರೆತಿದೆ.

ಮಾರ್ಚ್ 1 ರಂದು ಮಧ್ಯಾಹ್ನ 12:55 ರ ಸುಮಾರಿಗೆ ವೈಟ್​ಫೀಲ್ಡ್​ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಲಾಗಿತ್ತು. ಕೃತ್ಯ ಎಸಗಿದ ಆರೋಪಿಗಳಾದ ಮೊಹಮ್ಮದ್ ಮತೀನ್ ಮತ್ತು ಮುಸಾವಿರ್ ಹುಸೇನ್​ ಅನ್ನು ಎನ್​ಐಎ ಅಧಿಕಾರಿಗಳು, ಘಟನೆ ನಡೆದು  43 ದಿನಗಳ ಬಳಿಕ, ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದರು. ಬಂಧಿತರ ವಿಚಾರಣೆ ನಡೆಸಿದ್ದು ಬೆಚ್ಚಿ ಬೀಳಿಸುವ ಸಂಗತಿ ಬಯಲಾಗಿದ್ದವು.

ಇದನ್ನೂ ಓದಿ: ಬೆಂಗಳೂರಿನಲ್ಲಿ ನೆಲೆಸಿದ್ದ ಬಂಧಿತ ಉಗ್ರರ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗ

ಎನ್ಐಎ ವಿಚಾರಣೆ ವೇಳೆ ಬಾಂಬರ್ ಮುಸಾವೀರ್ ಹಾಗೂ ಮತೀನ್ ತಾಹ ಆಘಾತಕಾರಿ ಸತ್ಯ ಹೊರಹಾಕಿದ್ದರು. ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಮುನ್ನವೇ, ವೈಟ್​​ಫೀಲ್ಡ್ ಭಾಗದ SEZ (ವಿಶೇಷ ಆರ್ಥಿಕ ವಲಯ) ಗಳನ್ನು ಉಗ್ರರು ಟಾರ್ಗೆಟ್​ ಮಾಡಿದ್ದಾಗಿ ತಿಳಿಸಿದ್ದರು.

ಐಟಿಬಿಪಿ ಕಂಪನಿಗಳು ಹೆಚ್ಚಿರುವ ಈ ಬಾಗದಲ್ಲಿ ಬ್ಲಾಸ್ಟ್​​ ಮಾಡಿದರೆ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡಬಹುದು. ಐಸಿಸ್​ ಸಂಘಟನೆ ನಮ್ಮನ್ನ ಸಲೀಸಾಗಿ ಸೇರಿಸಿಕೊಳ್ಳುತ್ತೆ ಅನ್ನೋ ನಂಬಿಕೆ ಇತ್ತಂತೆ. ಆದರೆ ಐಟಿಬಿಟಿ ಏರಿಯಾದಲ್ಲಿ, ಸೆಕ್ಯೂರಿಟಿ ಬಿಗಿಯಾಗಿದ್ದರಿಂದ ಸ್ಫೋಟದ ಪ್ಲ್ಯಾನ್​ ವರ್ಕೌಟ್​​ ಆಗಲಿಲ್ಲ. ಹೀಗಾಗಿ, ಇದು ಸೇಫ್​ ಅಲ್ಲ ಅಂತ ಮುಂದೆ ಸಾಗಿದವರ ಕಣ್ಣಿಗೆ ಬಿದ್ದದ್ದೇ ಈ ರಾಮೇಶ್ವರಂ ಕೆಫೆ.

ರಾಮೇಶ್ವರಂ ಕೆಫೆ ಕಂಡ ಉಗ್ರರಿಗೆ ಕೋಪ ಹೆಚ್ಚಾಗಿತ್ತು. ಕಾರಣ, ಕೆಫೆ ಮುಂದಿದ್ದ ಹೂವಿನ ಅಲಂಕಾರ, ಕೇಸರಿ ಮಯವಾಗಿದ್ದ ಕಲರ್ ಪೇಪರ್ಸ್. ದೇಶಾದ್ಯಂತ ರಾಮಮಂದಿರ ಉದ್ಘಾಟನೆ ಸಂಭ್ರಮ ಇದಿದ್ರಿಂದ ಎಲ್ಲೆಲ್ಲೂ ರಾಮಜಪ ಜೋರಾಗಿತ್ತು. ಹೀಗಾಗಿ, ರಾಮೇಶ್ವರಂ ಕೆಫೆ ಸ್ಫೋಟಿಸೋದೇ ಸೂಕ್ತ ಅಂತ ನಿರ್ಧರಿಸಿದ್ರಂತೆ. ಅದ್ರಂತೆ ಮಾರ್ಚ್ 1 ರಂದು ಬಾಂಬ್ ಇಟ್ಟು ಎಸ್ಕೇಪ್ ಆಗಿದ್ದಾಗಿ ಎನ್ಐಎ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:15 am, Tue, 21 May 24