
ಬೆಂಗಳೂರು, (ಜೂನ್ 16): ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನೊಬ್ಬ (Rapido Driver) ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ (Bengaluru)ಜಯನಗರದಲ್ಲಿ ನಡೆದಿದೆ. ಚಾಲಕನ ಅತಿವೇಗದ ಚಾಲನೆ ಪ್ರಶ್ನಿಸಿದ್ದಕ್ಕೆ ಯುವತಿ ಮೇಲೆ ಹಲ್ಲೆ ನಡೆಸಿದ್ದು, ಯುವತಿಗೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಬೈಕ್ ಟ್ಯಾಕ್ಸಿ ಚಾಲಕ ಸುಹಾಸ್ ಎನ್ನುವಾತ ಶ್ರೇಯಾ ಎನ್ನುವ ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ. ಜೂನ್ 14ರಂದು ಈ ಘಟನೆ ನಡೆದಿದೆ. ಆದ್ರೆ, ಇಂದು (ಜೂನ್ 16) ಈ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಜಯನಗರ ಪೊಲೀಸರು NCR ದಾಖಲಿಸಿಕೊಂಡು ಕೈತೊಳೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಶ್ರೇಯಾ ಅವರು ಆ ದಿನದಂದು ರ‍್ಯಾಪಿಡೋ ಸೇವೆ ಬಳಸಿಕೊಂಡು ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನು ಅತಿ ವೇಗವಾಗಿ (ರ್ಯಾಶ್ ಡ್ರೈವಿಂಗ್) ವಾಹನ ಚಲಾಯಿಸುತ್ತಿದ್ದುದರಿಂದ, ಶ್ರೇಯಾ ಚಾಲಕನನ್ನು ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟಯಾಗಿದ್ದು, ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಚಾಲಕ ಸುಹಾಸ್ ಯುವತಿ ರಪ್ ಅಂತ ಬಾರಿಸಿದ್ದದಾನೆ. ಹೊಡೆದ ಏಟಿಗೆ ಯುವತಿ ರಸ್ತೆಗೆ ಬಿದ್ದಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ಈ ಗಂಭೀರ ಘಟನೆ ನಡೆದ ನಂತರವೂ ಮಹಿಳೆ ಹೋಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಸಂಪೂರ್ಣವಾಗಿ ವಿಡಿಯೋ ಸಮೇತ ಮಾಹಿತಿ ಪಡೆದುಕೊಂಡ ಜಯನಗರ ಪೊಲೀಸ್ ಠಾಣೆ ಸಿಬ್ಬಂದಿ ಎನ್‌ಸಿಆರ್ (Non-Cognizable Report) ದಾಖಲಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ತೋರಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಶ್ರೇಯಾ ಮೇಲೆ ಹಲ್ಲೆ ಮಾಡಿದ ಬೈಜ್ ಟ್ಯಾಕ್ಸಿ ಚಾಲಕ ಸುಹಾಸ್ ಪ್ರತಿಕ್ರಿಯಿಸಿದ್ದು, ಮೊದಲು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದು ಆ ಯುವತಿ. ಶರ್ಟ್ ಕಟ್ ನಲ್ಲಿ ಬಂದೆ ಅಂತ ಅರ್ಧ ದಾರಿಯಲ್ಲಿ ನಿಲ್ಲಿಸಿ ಇಂಗ್ಲಿಷ್ ನಲ್ಲಿ ಬೈದ್ರು. ನಾನು ಐದು ವರ್ಷದಿಂದ ರ್ಯಾಪಿಡೋ ಓಡಿಸುತ್ತಿದ್ದೇನೆ. ದಾರಿ ಗೊತ್ತು ಅಂದೆ. ಬಳಿಕ ಗಾಡಿ ನಿಲ್ಲಿಸಿ ಇಂಗ್ಲಿಷ್‌ನಲ್ಲಿ ನನಗೆ ಕೆಟ್ಟದಾಗಿ ಬೈದರು. ಟಿಫಿನ್ ಬಾಕ್ಸ್ ನಿಂದ ಹೊಡೆದ್ರು. ಅಷ್ಟು ಜನರ ಮುಂದೆ ಹೊಡೆದಾಗ ಸಿಟ್ಟಲ್ಲಿ ನಾನು ಹೊಡೆದೆ ಎಂದು ಸ್ಪಷ್ಟಪಡಿಸಿದ್ದಾನೆ.
BENGALURU: Rapido bike rider slaps customer as she allegedly questions him over rash driving and jumping signal. Incident occurred on June 14th in Jayanagar area of Bengaluru.
Jayanagar police are looking into the case.
INPUT: @Harishup pic.twitter.com/j8IbpvItT0— Rahul Shivshankar (@RShivshankar) June 16, 2025
ಆಮೇಲೆ ಯುವತಿ ಕೆಲಸ ಮಾಡುವ ಅಂಗಡಿಗೆ ಹೋಗಿ ಮ್ಯಾನೇಜರ್ ಗೆ ದೂರು ನೀಡಿದೆ . ಅದಕ್ಕೆ ಮ್ಯಾನೇಜರ್ ಅಂದರು ಅವಳು ಸೈಕೋ, ಇಲ್ಲೂ ಹುಚ್ಚುಚ್ಚಾಗಿ ಇರ್ತಾಳೆ ಅಂದ್ರು. ಅದಕ್ಕೆ ನಾನು ವಾಪಸ್ ಬಂದೆ. ಈಗ ವಿಡಿಯೋ ವೈರಲ್ ಆದ್ಮೇಲೆ ಪೊಲೀಸರು ಕಾಲ್ ಮಾಡಿದ್ರು. ತನಿಖೆಗೆ ಸಹಾಕರ ನೀಡುತ್ತೇನೆ ಎಂದು ತಿಳಿಸಿದ್ದಾನೆ.
Published On - 3:20 pm, Mon, 16 June 25