ಬೆಂಗಳೂರು: ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಸದಸ್ಯರಾಗಿ ನಿವೃತ್ತ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇಮಕ ಮಾಡಿದ್ದು, ಕೇಂದ್ರ ಸರ್ಕಾರದ ನೇಮಕಾತಿ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಬದಲು ಮೊದಲ ಬಾರಿಗೆ ಐಪಿಎಸ್ ಅಧಿಕಾರಿ ನೇಮಕ ಮಾಡಿದ್ದು, ಮುಂದಿನ 4 ವರ್ಷಗಳ ಕೆಎಟಿ ಸದಸ್ಯರಾಗಿರಲಿರುವ ರಾಘವೇಂದ್ರ ಔರಾದ್ಕರ್ ಕಾರ್ಯನಿರ್ವಹಿಸಲಿದ್ದಾರೆ. ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದು ಕೊರತೆ ನಿವಾರಣೆ ಹಾಗೂ ಪಿಂಚಣಿ ಸಚಿವಾಲಯ ರಾಷ್ಟ್ರಪತಿಗಳ ಆದೇಶದಂತೆ ರಾಘವೇಂದ್ರ ಔರಾದ್ಕರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: IND vs SA: ಒಂದೇ ವಿಮಾನದಲ್ಲಿ ಕಟಕ್ಗೆ ಬಂದ ಭಾರತ-ದಕ್ಷಿಣ ಆಫ್ರಿಕಾ ಆಟಗಾರರು: ವೈರಲ್ ವಿಡಿಯೋ ನೋಡಿ
ಕರ್ನಾಟಕ ರಾಜ್ಯ ಆಡಳಿತ ಮಂಡಳಿಯಲ್ಲಿ ಸದ್ಯ ಆರ್.ಬಿ.ಬೂದಿಹಾಳ್ ಅಧ್ಯಕ್ಷರಾಗಿದ್ದಾರೆ. ನ್ಯಾಯಾಂಗ ಸದಸ್ಯರಾಗಿ ನಾರಾಯಣ, ಟಿ.ನಾರಾಯಣಸ್ವಾಮಿ, ಆರ್. ಬಿ.ಸತ್ಯನಾರಾಯಣ ಸಿಂಗ್, ಆಡಳಿತ ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಲತಾ ಕೃಷ್ಣ ರಾವ್, ಎಸ್.ಕೆ. ಪಟ್ನಾಯಕ್ , ಎನ್ .ಶಿವಶೈಲಂ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಪೈಕಿ ಸತ್ಯನಾರಾಯಣ ಸಿಂಗ್ ಕಲಬುರಗಿ ಪೀಠದಲ್ಲಿ ಮತ್ತು ನಾರಾಯಣಸ್ವಾಮಿ ಬೆಳಗಾವಿ ಪೀಠದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.