ಬೆಂಗಳೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಜ್ಯಕ್ಕೆ ಆಗಮಿಸಿದ್ದರು. ಮೋದಿ ಬರುತ್ತಾರೆಂದು ಬಿಬಿಎಂಪಿ (BBMP) ಕೋಟಿ ಕೋಟಿ ಹಣ ಖರ್ಚು ಮಾಡಿ ರಸ್ತೆಗಳನ್ನ ಅಭಿವೃದ್ಧಿ ಪಡಿಸಿದೆ. ಆದರೆ ಅಭಿವೃದ್ಧಿ ಮಾಡಿ ಒಂದು ವಾರ ಕಳೆಯುವ ಮೊದಲೇ ರಸ್ತೆ ಕಿತ್ತು ಹೋಗುತ್ತಿದ್ದು, ಬಿಬಿಎಂಪಿ ಕಳಪೆ ಕಾಮಗಾರಿಯ ಕರಾಳ ಮುಖ ಬಯಲಾಗಿದೆ. ಮಳೆಯಿಂದ ರಸ್ತೆ ಕಿತ್ತು ಹೋಗಿತ್ತು. ಹೀಗಾಗಿ ಬಿಬಿಎಂಪಿ ನಿನ್ನೆ ಬೆಳಗ್ಗೆ ಮತ್ತೆ ಡಾಂಬರೀಕರಣ ಮಾಡಿತ್ತು. ನಿನ್ನೆ ಮಾಡಿದ್ದ ಡಾಂಬರೀಕರಣ ಕೂಡ ಇದೀಗ ಕಿತ್ತು ಹೋಗಿದೆ.
ಬಿಬಿಎಂಪಿ 23 ಕೋಟಿ ರೂಪಾಯಿ ಖರ್ಚು ಮಾಡಿ ರಸ್ತೆ ಅಭಿವೃದ್ಧಿ ಮಾಡಿದೆ. ಆದರೆ ಇದೀಗ ಡಾಂಬರೀಕರಣ ಚಾಕೋಲೆಟ್ನಂತೆ ಕಿತ್ತು ಬರುತ್ತಿದೆ. ಮೋದಿ ಸಂಚರಿಸಲು ನಗರದಲ್ಲಿ 14 ಕಿ.ಮೀ. ರಸ್ತೆ ಡಾಂಬರೀಕರಣ, ಫುಟ್ಪಾತ್ ಸ್ಲ್ಯಾಬ್, ಬೀದಿ ದೀಪ, ಮರಗಳ ರೆಂಬೆ ಕಟ್, ಚರಂಡಿ ಸ್ವಚ್ಛತೆಗೆ ಸುಮಾರು 23 ಕೋಟಿ ರೂ. ಖರ್ಚಾಗಿದೆ ಎಂದು ಈ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಮಾಹಿತಿ ನೀಡಿದ್ದರು.
ಇದನ್ನೂ ಓದಿ: Rumeli Dhar: ಮಿಥಾಲಿ ಬೆನ್ನಲ್ಲೇ ಮತ್ತೋರ್ವ ಭಾರತದ ಸ್ಟಾರ್ ಮಹಿಳಾ ಆಟಗಾರ್ತಿ ಕ್ರಿಕೆಟ್ ಲೋಕಕ್ಕೆ ವಿದಾಯ
ಬೆಂಗಳೂರು ಗುಂಡಿಮುಕ್ತವಾಗಬೇಕಾದರೆ ಪ್ರಧಾನಿ ಮೋದಿ ಅವರನ್ನು ಇಲ್ಲಿಗೆ ಅಗಾಗ್ಗೆ ಕರೆಸಿಕೊಳ್ಳುತ್ತಿರಬೇಕು- ಜಮೀರ್ ಅಹ್ಮದ್:
ಬೆಂಗಳೂರಿನ ರಸ್ತೆಗಳ ಗುಂಡಿ ಮುಕ್ತವಾಗಬೇಕಾದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಆಗಾಗ ಕರೆಸಿಕೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಬುಧವಾರ ಬೆಂಗಳೂರಲ್ಲಿ ಹೇಳಿದರು. ಪ್ರಧಾನಿಯವರು ತಿರುಗಾಡಬೇಕಿದ್ದ ರಸ್ತೆಗಳೆಲ್ಲವನ್ನು 24 ಕೋಟಿ ರೂ. ಖರ್ಚು ಮಾಡಿ ರಿಪೇರಿ ಮಾಡಲಾಗಿದೆ ಎಂದು ಅವರು ಹೇಳಿದರು. ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆಯಾಗಬೇಕಿದ್ದ ರೂ. 160 ಕೋಟಿಗಳನ್ನು ಕೋವಿಡ್ ನಿರ್ವಹಣೆಗೆ ಖರ್ಚಾಗಿದೆ ಅಂತ ಹೇಳಿ ತಡೆಹಿಡಿದಿದ್ದಾರೆ ಎಂದು ಜಮೀರ್ ಅಹ್ಮದ್ ಈ ಸಂದರ್ಭದಲ್ಲಿ ಆರೋಪಿದರು.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:58 am, Thu, 23 June 22