ಡೆಲಿವರಿ ಬಾಯ್ನಿಂದ ಸೆಕ್ಯೂರಿಟಿಗಾರ್ಡ್ ಮೇಲೆ ಹಲ್ಲೆ; 9 ದಿನಗಳ ಹೋರಾಟದ ಬಳಿಕ ಚಿಕಿತ್ಸೆ ಫಲಿಸದೆ ಮೃತಪಟ್ಟ ಸೆಕ್ಯೂರಿಟಿಗಾರ್ಡ್
ಜೂನ್ 12ರಂದು ಬೆಂಗಳೂರಿನ ಕೊಡಿಗೆಹಳ್ಳಿಯ ಗೋದ್ರೇಜ್ ಅಪಾರ್ಟ್ಮೆಂಟ್ನಲ್ಲಿ ಆರೋಪಿ ಕಾರ್ತಿಕ್ ಅಡ್ಡಾದಿಡ್ಡಿಯಾಗಿ ಸ್ಕೂಟರ್ ಪಾರ್ಕಿಂಗ್ ಮಾಡಿದ್ದ. ಈ ವೇಳೆ ಕುಮಾರ್ ನಾಯ್ಕ್ ಸೂಕ್ತ ಸ್ಥಳದಲ್ಲಿ ಸ್ಕೂಟರ್ ನಿಲ್ಲಿಸಲು ಹೋಗಿ ಸ್ಕೂಟರ್ ಕೆಳಕ್ಕೆ ಬೀಳಿಸಿದ್ದರು.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ನಿಂದ ಸೆಕ್ಯೂರಿಟಿಗಾರ್ಡ್ ಮೇಲೆ ನಡೆದಿದ್ದ(Delivery Boy Killed Security Guard) ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆಗೊಳಗಾಗಿದ್ದ ಸೆಕ್ಯೂರಿಟಿಗಾರ್ಡ್ ಕುಮಾರ್ ನಾಯ್ಕ್(45) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹಲ್ಲೆ ಮಾಡಿದ್ದ ಡೆಲಿವರಿ ಬಾಯ್ ಕಾರ್ತಿಕ್(25)ನನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಜೂನ್ 12ರಂದು ಬೆಂಗಳೂರಿನ ಕೊಡಿಗೆಹಳ್ಳಿಯ ಗೋದ್ರೇಜ್ ಅಪಾರ್ಟ್ಮೆಂಟ್ನಲ್ಲಿ ಆರೋಪಿ ಕಾರ್ತಿಕ್ ಅಡ್ಡಾದಿಡ್ಡಿಯಾಗಿ ಸ್ಕೂಟರ್ ಪಾರ್ಕಿಂಗ್ ಮಾಡಿದ್ದ. ಈ ವೇಳೆ ಕುಮಾರ್ ನಾಯ್ಕ್ ಸೂಕ್ತ ಸ್ಥಳದಲ್ಲಿ ಸ್ಕೂಟರ್ ನಿಲ್ಲಿಸಲು ಹೋಗಿ ಸ್ಕೂಟರ್ ಕೆಳಕ್ಕೆ ಬೀಳಿಸಿದ್ದರು. ಹೀಗಾಗಿ ಸೆಕ್ಯೂರಿಟಿಗಾರ್ಡ್ ಕುಮಾರ್ ನಾಯ್ಕ್ಗೆ ಡೆಲಿವರಿ ಬಾಯ್ ಕಾರ್ತಿಕ್ ಹಿಗ್ಗಾಮುಗ್ಗ ಥಳಿಸಿದ್ದ. ಈ ವೇಳೆ ಕುಮಾರ್ ನಾಯ್ಕ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ರು. 9 ದಿನದ ಬಳಿಕ ಚಿಕಿತ್ಸೆ ಫಲಿಸದೆ ಕುಮಾರ್ ನಾಯ್ಕ್ ಮೃತಪಟ್ಟಿದ್ದಾರೆ. ಈ ಬಗ್ಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ:Electric Bikes: 50,000 ಕ್ಕಿಂತ ಕಡಿಮೆ ಬೆಲೆಯ ಇಲೆಕ್ಟ್ರಿಕ್ ಬೈಕ್ ಇಲ್ಲಿವೆ
50 ರೂಪಾಯಿಗಾಗಿ ಬ್ಯಾಲದ ಗೆಳೆಯನ ಹತ್ಯೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಬೆಳೆದ ಶಾಂತಕುಮಾರ್ ಮತ್ತು ಶಿವಮಾದು ಎಂಬ ಇಬ್ಬರು ಬಾಲ್ಯದ ಗೆಳೆಯರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಶಾಂತ್ ಕುಮಾರ್ ಪುಡ್ ಡೆಲಿವರಿ ಬಾಯ್ ಆಗಿದ್ರೆ. ಶಿವಮಾದು ಸಣ್ಣ ಪುಟ್ಟ ಕೆಲ್ಸ ಮಾಡ್ಕೊಂಡಿದ್ದ. ಇಬ್ಬರು ಸೇರಿ ನಿನ್ನೆ ಸಂಜೆ ವಿಡಿಯೋ ಗೇಮ್ ಅಡ್ಡಕ್ಕೆ ಬಂದಿದ್ದಾರೆ. ಇಲ್ಲಿ ಬೆಟ್ಟಿಂಗ್ ಕಟ್ಕೊಂಡು ವಿಡಿಯೋ ಗೇಮ್ ಆಡಿದ್ದಾರೆ. ಈ ವೇಳೆ ಶಾಂತಕುಮಾರ್ ಜೇಬಿನಿಂದ 50 ರೂಪಾಯಿ ಹಣವನ್ನ ಶಿವಮಾದು ತೆಗೆದುಕೊಂಡಿದ್ದಾನೆ. ಎಷ್ಟು ಕೇಳಿದ್ರೂ ಹಣ ಕೊಡದೆ ಶಿವಮಾದು ಸತಾಯಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಶಾಂತ್‌ಕುಮಾರ್, ಶಿವುಮಾದು ಎದೆಯ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದಾನೆ. ಒಟ್ಟಿಗೆ ಆಡಿ ಬೆಳೆದ ಗೆಳೆಯನನ್ನೇ ಮುಗಿಸಿ ಶಾಂತಕುಮಾರ್ ಎಸ್ಕೇಪ್ ಆಗಿದ್ದಾನೆ.
ತಲೆಮರೆಸಿಕೊಂಡಿರುವ ಹಂತಕ ಗೆಳೆಯನಿಗಾಗಿ ಖಾಕಿ ಬಲೆ ಹತ್ಯೆ ವಿಷ್ಯ ತಿಳಿಯುತ್ತಿದ್ದಂತೆ ಬಸವೇಶ್ವರ ನಗರ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಬಂದಿದ್ರು. ಸ್ಥಳ ಮಹಜರ್ ಮಾಡಿ, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನ ಆಸ್ಪತ್ರೆಗೆ ರವಾನಿಸಿದ್ರು. ಬಳಿಕ ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಫೂಟೇಜ್ ಅನ್ನ ಖಾಕಿ ಟೀಮ್ ವಶಕ್ಕೆ ಪಡೆದಿದೆ. ಸದ್ಯ ಆರೋಪಿ ಶಾಂತಕುಮಾರ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ