ಕಾಮೆಡ್-ಕೆ ವಿಲೀನ ಮಾಡೋದು ಎಷ್ಟರ ಮಟ್ಟಿಗೆ ಸರಿ?- ಕೋರ್ಟ್ಗೆ ಹೋಗುವ ಎಚ್ಚರಿಕೆ ನೀಡಿದ ಕಾರ್ಯದರ್ಶಿ ಎಸ್.ಕುಮಾರ್
ಕಾಮೆಡ್-ಕೆ ವಿಲೀನ ಮಾಡೋದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿರುವ ಎಸ್.ಕುಮಾರ್, ನಮಗೆ ಮಾಹಿತಿ ನೀಡದೆಯೇ ಹೇಗೆ ವಿಲೀನ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು: ಮುಂದಿನ ವರ್ಷದಿಂದ ಕಾಮೆಡ್-ಕೆ ವಿಲೀನ ಮಾಡುವ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ (Ashwath Narayan) ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇದೀಗ ವಿರೋಧವಾಗಿದ್ದು, ಕಾಮೆಡ್-ಕೆ ಕಾರ್ಯದರ್ಶಿ ಎಸ್.ಕುಮಾರ್ ಕೋರ್ಟ್ಗೆ ಹೋಗುವ ಎಚ್ಚರಿಕೆ ನೀಡಿದ್ದಾರೆ. ಕಾಮೆಡ್-ಕೆ ವಿಲೀನ ಮಾಡೋದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿರುವ ಎಸ್.ಕುಮಾರ್, ನಮಗೆ ಮಾಹಿತಿ ನೀಡದೆಯೇ ಹೇಗೆ ವಿಲೀನ ಮಾಡ್ತಾರೆ? ಈ ಕುರಿತು ನಮ್ಮೊಂದಿಗೆ ಯಾವುದೇ ರೀತಿ ಸಭೆ ನಡೆಸಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಪುನರ್ ಪರಿಶೀಲನೆ ಮಾಡಲಿ. ಇಲ್ಲದಿದ್ದರೆ ನಾವು ಕೋರ್ಟ್ ಮೊರೆ ಹೋಗಬೇಕಾಗುತ್ತೆ ಎಂದಿದ್ದಾರೆ.
2004ರಲ್ಲಿ ಕಾಮೆಡ್-ಕೆ ಸಂಸ್ಥೆ ರಚನೆಯಾಗಿದೆ. ಪ್ರತಿ ವರ್ಷ 70 ಸಾವಿರ ಅಭ್ಯರ್ಥಿಗಳು ಕಾಮೆಡ್-ಕೆ ಪರೀಕ್ಷೆಗೆ ನೊಂದಣಿ ಮಾಡಿಕೊಳ್ತಾರೆ. 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮ್ಯಾನೇಜ್ಮೆಂಟ್ ಸೀಟ್ ನ ಅಡಿ ಇಂಜಿನಿಯರಿಂಗ್ ಕೋರ್ಸ್ ಪ್ರವೇಶ ಪಡೆಯುತ್ತಾರೆ. ಏಕಾಏಕಿ ಕಾಮೆಡ್-ಕೆ ವಿಲೀನ ಅನ್ನೋದು ಎಷ್ಟು ಸರಿ? ಸಿಇಟಿ ಪರೀಕ್ಷೆ ಮೂಲಕ ರಾಜ್ಯ ಸರ್ಕಾರ ದೇಶದಾದ್ಯಂತ ಹೀಗೆ ಪರೀಕ್ಷೆ ನಡೆಸುತ್ತೆ? ಇದು ಅವೈಜ್ಞಾನಿಕ ತೀರ್ಮಾನ ಎಂದು ವಿರೋಧಿಸಿರುವ ಕಾಮೆಡ್-ಕೆ ನಿಯೋಗ ಶೀಘ್ರವೇ ಸರ್ಕಾರದ ಭೇಟಿಗೆ ಮುಂದಾಗಿದೆ.
ಇದನ್ನೂ ಓದಿ: ಎಐಎಡಿಎಂಕೆ ನೇತೃತ್ವಕ್ಕೆ ಹಗ್ಗಜಗ್ಗಾಟ; ಪಳನಿಸ್ವಾಮಿಗೆ ಬೆಂಬಲ, ಸಭೆಯಿಂದ ಹೊರನಡೆದ ಪನ್ನೀರ್ಸೆಲ್ವಂ
ಅಶ್ವಥ್ ನಾರಾಯಣ್ ಹೇಳಿದ್ದೇನು?: ನಿನ್ನೆ ಬೆಂಗಳೂರಿನಲ್ಲಿ ಮಾತನಾಡಿದ್ದ ಅಶ್ವಥ್ ನಾರಾಯಣ್, ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ ಇರಲಿದೆ. ಮುಂದಿನ ವರ್ಷದಿಂದ ಸಿಇಟಿ ಮಾತ್ರ ಇರುತ್ತದೆ. ಈ ಸಂಬಂಧ ಒಡಂಬಡಿಕೆ ಆಗಲಿದೆ ಎಂದು ತಿಳಿಸಿದ್ದರು. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೇ 10 ರಷ್ಟು ಫೀಸ್ ಹೆಚ್ಚಳ ಕುರಿತು ಇಂಜಿನಿಯರಿಂಗ್ ಕಾಲೇಜುಗಳ ಜೊತೆ ಚರ್ಚೆಯಾಗಿದೆ. ವಿದ್ಯಾರ್ಥಿಗಳಿಂದ ಹೆಚ್ಚು ಫೀಸ್ ಸಂಗ್ರಹ ಮಾಡಬಾರದು. ನಿರ್ಧಿಷ್ಟ ಶುಲ್ಕ ಮಾತ್ರ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಕೋರ್ಡಿನೇಷನ್ ಸಿಂಪಲ್ ಮಾಡುವ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Thu, 23 June 22