ಸಾಲು ಸಾಲು ರಜೆ; ಊರುಗಳತ್ತ ಮುಖ ಮಾಡಿದ ಸಿಲಿಕಾನ್‌ ಸಿಟಿ ಮಂದಿ

ಸಾಲು ಸಾಲು ರಜೆ ಇರುವ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಿನ ಜನ ಊರುಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಿನ್ನಲೆ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದಲೇ 250 ಬಸ್ ಹಾಗೂ ಇನ್ನು ಕೆಎಸ್ಆರ್‌ಟಿಸಿಯಿಂದ ಹೆಚ್ಚುವರಿ 450 ಬಸ್​ಗಳನ್ನು ನಿಯೋಜನೆ ಮಾಡಲಾಗಿದೆ.

ಸಾಲು ಸಾಲು ರಜೆ; ಊರುಗಳತ್ತ ಮುಖ ಮಾಡಿದ ಸಿಲಿಕಾನ್‌ ಸಿಟಿ ಮಂದಿ
ಊರುಗಳತ್ತ ಮುಖ ಮಾಡಿದ ಸಿಲಿಕಾನ್‌ ಸಿಟಿ ಮಂದಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 14, 2024 | 10:54 PM

ಬೆಂಗಳೂರು, ಆ.14: ಹಬ್ಬ ಹಾಗೂ ಸಾಲು ಸಾಲು ರಜೆ ಇರುವ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಿನ ಜನ ಊರುಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಬೆಂಗಳೂರು ನಗರದಾದ್ಯಂತ ಟ್ರಾಫಿಕ್ ಜಾಮ್(Traffic jam) ಉಂಟಾಗಿದ್ದು, ಸವಾರರು ಪರದಾಡುವಂತಾಗಿದೆ. ಇನ್ನು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಿನ್ನಲೆ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದಲೇ 250 ಬಸ್ ಕಾರ್ಯಾಚರಣೆ ನಡೆಸುತ್ತಿದೆ.

ಮುಗಂಡವಾಗಿ 150 ಬಸ್‌ಗಳನ್ನ ಬುಕ್ ಮಾಡಿರೋ ಪ್ರಯಾಣಿಕರು

ಇನ್ನು ಕೆಎಸ್ಆರ್‌ಟಿಸಿಯಿಂದ ಹೆಚ್ಚುವರಿ 450 ಬಸ್​ಗಳು ಕಾರ್ಯಾಚರಣೆ ನಡೆಸುತ್ತಿದ್ದು, ರಾಜ್ಯದ ಒಳಗಡೆ ಹೆಚ್ಚುವರಿಯಾಗಿ 450 ಹಾಗೂ ಅಂತರರಾಜ್ಯಕ್ಕೆ 60 ಬಸ್​ಗಳನ್ನು ನಿಯೋಜನೆ ಮಾಡಲಾಗಿದೆ, ಈ ಹಿನ್ನಲೆ ಮುಗಂಡವಾಗಿ 150 ಬಸ್‌ಗಳನ್ನ ಪ್ರಯಾಣಿಕರು ಬುಕ್ ಮಾಡಿದ್ದಾರೆ. ಜೊತೆಗೆ ದೈನಂದಿನ ಕಾರ್ಯಚರಣೆಯಲ್ಲಿ ಅಡಚಣೆಯಾಗದಂತೆ ಪ್ರಯಾಣಿಕರಿಗೆ ಅನುಕೂಲವಾಗಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ:ಹೆಬ್ಬಾಳ ಫ್ಲೈಓವರ್​ ಮೇಲೆ ಸರಣಿ ಅಪಘಾತ; ಬಿಎಂಟಿಸಿ ಬಸ್​ ಚಾಲಕನ ಯಡವಟ್ಟಿನಿಂದ ಘೋರ ದುರಂತ, ವಿಡಿಯೋ ನೋಡಿ

ರಾತ್ರಿಯಿಡಿ ನಿಗಾವಹಿಸಲು KSRTC ಸಿಬ್ಬಂದಿಗಳ ನಿಯೋಜನೆ

ಇನ್ನು ಮಹಾನಗರದ ಜಯನಗರ, ವಿಜಯನಗರ ಹಾಗೂ ಸ್ಯಾಟಲೈಟ್ ಬಸ್ ಟರ್ಮಿನಲ್​ನಲ್ಲಿ ಕೂಡ ಹೆಚ್ಚುವರಿ ಬಸ್ ಆಪರೇಟಿಂಗ್​ಗೆ ವ್ಯವಸ್ಥೆ ಮಾಡಲಾಗಿದೆ. ಇನ್ನು ರಾತ್ರಿ 11 ಗಂಟೆ ನಂತರ ಪ್ರಯಾಣಿಕರ ಹೆಚ್ಚಳ ಹಿನ್ನಲೆ ರಾತ್ರಿಯಿಡಿ ನಿಗಾವಹಿಸಲು ಕೆಎಸ್​ಆರ್​ಟಿಸಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.

ಸಿಟಿ ಬಿಟ್ಟು ಜನ ತಮ್ಮ ತಮ್ಮ ಊರಿನತ್ತ ಪ್ರಯಾಣ ಬೆಳಸಿದ್ದು, ಮಹಾಲಕ್ಷ್ಮಿ ಮೇಟ್ರೋ ನಿಲ್ದಾಣದಿಂದ ಯಶವಂತಪುರ, ಗೊರಗುಂಟೆ ಪಾಳ್ಯದವರೆಗೆ ಟ್ರಾಫಿಕ್ ಜಾಮ್​ ಉಂಟಾಗಿದೆ. ಇನ್ನು ಯಶವಂತಪುರ ಗೋವರ್ದನ ಚಿತ್ರಮಂದಿರದ ಬಳಿ ಬಸ್‌ಗಾಗಿ ಜನ ಕಾಯುತ್ತಿದ್ದಾರೆ. ಕಿಲೋಮೀಟರ್ ಉದ್ದ ಟ್ರಾಫಿಕ್ ಜಾಮ್​ ಉಂಟಾಗಿ, ಜನರು ಪರದಾಟ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 pm, Wed, 14 August 24