78ನೇ ಸ್ವಾತಂತ್ರ್ಯೋತ್ಸವಕ್ಕೆ ಬೆಂಗಳೂರು ಹೈ ಅಲರ್ಟ್: ಮಾನಿಕ್ ಷಾ ಮೈದಾನ ಸೇರಿ ನಗರದಾದ್ಯಂತ ಖಾಕಿ ಸರ್ಪಗಾವಲು

ನಾಳೆ ನಡೆಯಲಿರುವ 78 ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಪೊಲೀಸರ ಭಾರಿ ಬಿಗಿ ಬಂದೊಬಸ್ತ್ ಮಾಡಲಾಗಿದೆ. ಕಾನೂನು ಸುವ್ಯವಸ್ಥೆಯ 9 ಮಂದಿ ಡಿಸಿಪಿ, 15 ಎಸಿಪಿ, 43 ಇನ್ಸ್ ಪೆಕ್ಟರ್, 110 ಸಬ್ ಇನ್ಸ್ ಪೆಕ್ಟರ್, 72 ಎಎಸ್ ಐ, 554 ಸಿಬ್ಬಂದಿಗಳು ಸಹಿತ 77 ಮಂದಿ ಮಹಿಳಾ ಸಿಬ್ಬಂದಿಗಳು ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀರನ್ನು ಭದ್ರತೆಯಲ್ಲಿ ನಿಯೋಜನೆ ಮಾಡಲಾಗಿದೆ.

78ನೇ ಸ್ವಾತಂತ್ರ್ಯೋತ್ಸವಕ್ಕೆ ಬೆಂಗಳೂರು ಹೈ ಅಲರ್ಟ್: ಮಾನಿಕ್ ಷಾ ಮೈದಾನ ಸೇರಿ ನಗರದಾದ್ಯಂತ ಖಾಕಿ ಸರ್ಪಗಾವಲು
78ನೇ ಸ್ವಾತಂತ್ರ್ಯೋತ್ಸವಕ್ಕೆ ಬೆಂಗಳೂರು ಹೈ ಅಲರ್ಟ್: ಮಾನಿಕ್ ಷಾ ಮೈದಾನ ಸೇರಿ ನಗರದಾದ್ಯಂತ ಖಾಕಿ ಸರ್ಪಗಾವಲು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 14, 2024 | 11:14 PM

ಬೆಂಗಳೂರು, ಆಗಸ್ಟ್​ 14: ನಾಳೆಗೆ ನಮ್ಮ ದೇಶಕ್ಕೆ ಸ್ವಾತಂತ್ರ ( Independence Day) ಬಂದು 78 ವರ್ಷ. ಈ ಸಂಭ್ರಮವನ್ನು ನಾಳೆ ಮಾನಿಕ್ ಷಾ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇನ್ನು ಇತ್ತೀಚಿನ ಬೆಳವಣಿಗೆಗಳ ಗಮನದಲ್ಲಿಟ್ಟುಕೊಂಡ ಖಾಕಿ ನಾಳೆಗೆ ಭಾರಿ ಭದ್ರತೆ ಕೈಗೊಂಡಿದ್ದು, ಮೈದಾನದ ಸುತ್ತ ಪೊಲೀಸ್ ಸರ್ಪಗಾವಲು ಹಾಕಿದೆ.

ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಆಗಮಿಸುವ ಹಿನ್ನಲೆ ಪೊಲೀಸರು ಮೈದಾನದ ಸುತ್ತ ಹದ್ದಿನ ಕಣ್ ಇಟ್ಟಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಸಂಚಾರಿ ಪೊಲೀಸರು ಎರಡು ರೀತಿಯಲ್ಲಿ ಅಗತ್ಯ ತಯಾರಿ ಮಾಡಿಕೊಂಡಿದ್ದಾರೆ.

ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ಪೊಲೀಸರ ಭಾರಿ ಬಿಗಿ ಬಂದೊಬಸ್ತ್ ಮಾಡಲಾಗಿದೆ. ಕಾನೂನು ಸುವ್ಯವಸ್ಥೆಯ 9 ಮಂದಿ ಡಿಸಿಪಿ, 15 ಎಸಿಪಿ, 43 ಇನ್ಸ್ ಪೆಕ್ಟರ್, 110 ಸಬ್ ಇನ್ಸ್ ಪೆಕ್ಟರ್, 72 ಎಎಸ್ ಐ, 554 ಸಿಬ್ಬಂದಿಗಳು ಸಹಿತ 77 ಮಂದಿ ಮಹಿಳಾ ಸಿಬ್ಬಂದಿಗಳು ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀರನ್ನು ಭದ್ರತೆಯಲ್ಲಿ ನಿಯೋಜನೆ ಮಾಡಲಾಗಿದೆ. ಜೊತೆಗೆ 56 ಮಂದಿ ಕ್ಯಾಮರ ಧರಿಸಿ ಮೈದಾನಾದ ಸುತ್ತ ಕರ್ತವ್ಯ ನಿರ್ವಹಿಸಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಲು 157 ಮಂದಿ ಸಿಬ್ಬಂದಿಗಳು ಮಫ್ತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಇನ್ನು ಇದರ ಜೊತೆಗೆ ನಾಳೆ ನಡೆಯಲಿರುವ ಕಾರ್ಯಕ್ರಮ ಹಿನ್ನಲೆ ಮಾನಿಕ್ ಷಾ ಮೈದಾನದ ಸುತ್ತ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಸಹ ಸಂಚಾರಿ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಅದರಂತೆ ನಾಳೆ ನಡೆಯಲಿರುವ ಕಾರ್ಯಕ್ರಮ ಹಿನ್ನಲೆ ಮೈದಾನದ ಹೊರಗೆ ಸಂಚಾರಿ ಪೊಲೀಸ್ ವಿಭಾಗದ 3 ಡಿಸಿಪಿ, 6 ಎಸಿಪಿ, 22 ಇನ್ಸ್ ಪೆಕ್ಟರ್, 31 ಪಿಎಸ್ ಐ, 124 ಎಎಸ್ ಐ ಹಾಗೂ 554 ಸಂಚಾರಿ ಸಿಬ್ಬಂದಿಗಳು ಟ್ರಾಫಿಕ್ ಜಾಮ್ ಉಂಟಾಗದ ರೀತಿ ನಿಗಾ ವಹಿಸಲಿದ್ದಾರೆ. ಇನ್ನು ಕಾರ್ಯಕ್ರಮ ಹಿನ್ನಲೆ ಸುತ್ತಮತ್ತಲಿನ ರಸ್ತೆಗಳಲ್ಲಿ ಉಂಟಾಗಬಹುದಾದ ವಾಹನ ಸಂಚಾರ ಸಮಸ್ಯೆ ಹಿನ್ನಲೆ ಬದಲಿ ಮಾರ್ಗಗಳನ್ನು ಸಹ ಸಂಚಾರಿ ಪೊಲೀಸರು ಸೂಚಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನವಾಗಿದ್ದು, ಈ ಹಿನ್ನಲೆ ಆತಂಕ ಕೂಡ ಹೆಚ್ಚಾಗಿದೆ. ಹೀಗಾಗಿ ಮೈದಾನದ ಸುತ್ತ ಹೆಚ್ಚುವರಿಯಾಗಿ 10 ಕೆಎಸ್​ಆರ್​ಪಿ ತುಕಡಿಗಳು, ಒಂದು ರ್ಯಾಪಿ ಆ್ಯಕ್ಷನ್ ಫೋರ್ಸ್, 1 ಡಿ ಸ್ವಾಟ್, ಒಂದು ಆರ್ ಐ ವಿ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ 2 ಅಗ್ನಿಶಾಮಕ ವಾಹನಗಳು ಹಾಗೂ ಆ್ಯಂಬುಲೆನ್ಸ್ ನಿಯೋಜನೆ ಮಾಡಲಾಗಿದೆ. ಇನ್ನು ಇದಷ್ಟೇ ಅಲ್ಲದೇ ನಾಳಿನ ಕಾರ್ಯಕ್ರಮಕ್ಕೆ 100 ಸಿಸಿಟಿವಿಗಳ ಕಣ್ಗಾವಲಿದ್ದು, ಕಾರ್ಯಕ್ರಮದ ಇಂಚಿಂಚು ದೃಶ್ಯಗಳು ಖಾಕಿ ಕಣ್ಗಾವಲಿನಲ್ಲಿರಲಿದೆ.

ಇನ್ನು ಇದಷ್ಟೇ ಅಲ್ಲದೇ ನಾಳೆ ನಗರದಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದು, ಅಗತ್ಯ ಬಂದೊಬಸ್ತ್ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಿರುವ ಖಾಕಿ ನಾಳೆಗೆ ಬೇಕಾದ ಭದ್ರತೆ ಜೊತೆಗೆ ಸನ್ನದರಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.