ಸೋಂಕಿನ ಭೀತಿಯ ಮಧ್ಯೆಯೂ ಮಾಜಿ ರೌಡಿಶೀಟರ್ ಭರ್ಜರಿ ಬರ್ತ್ ಡೇ
ಬೆಂಗಳೂರು: ಕೊರೊನಾ ಸೋಂಕಿನ ಭೀತಿ ಬೆಂಗಳೂರಿಗರನ್ನ ಇನ್ನೂ ಕಾಡುತ್ತಲೇ ಇದೆ. ಜನ ಗುಂಪಿನಲ್ಲಿ ಸೇರಿ ಮಾತನಾಡಲು ಸಹ ಹಿಂಜರಿಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕೊರೊನಾ ಹಾವಳಿ ಮಿತಿ ಮೀರಿದೆ. ಆದರೆ, ಈ ಮಧ್ಯೆ ಜನರನ್ನು ಸೇರಿಸಿ ಮಾಜಿ ರೌಡಿಶೀಟರ್ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ಘಟನೆ ಬಾಗಲಗುಂಟೆ ಬಳಿಯಿರುವ ಮಲ್ಲಸಂದ್ರದಲ್ಲಿ ನಡೆದಿದೆ. ಭರ್ಜರಿಯಾಗಿ ಬರ್ತ್ ಡೇ ಆಚರಿಸಿಕೊಂಡ ಮಾಜಿ ರೌಡಿಶೀಟರ್ ಕಿಟ್ಟಿ ಅಲಿಯಾಸ್ ರೋನಿಗೆ ಆತನ ಪಟಾಲಂ ಮೊದಲು ಕ್ರೇನ್ ಮೂಲಕ ದೊಡ್ಡ ಹಾರವನ್ನು ಹಾಕಿ ಬಳಿಕ ಅವರ […]

ಬೆಂಗಳೂರು: ಕೊರೊನಾ ಸೋಂಕಿನ ಭೀತಿ ಬೆಂಗಳೂರಿಗರನ್ನ ಇನ್ನೂ ಕಾಡುತ್ತಲೇ ಇದೆ. ಜನ ಗುಂಪಿನಲ್ಲಿ ಸೇರಿ ಮಾತನಾಡಲು ಸಹ ಹಿಂಜರಿಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕೊರೊನಾ ಹಾವಳಿ ಮಿತಿ ಮೀರಿದೆ. ಆದರೆ, ಈ ಮಧ್ಯೆ ಜನರನ್ನು ಸೇರಿಸಿ ಮಾಜಿ ರೌಡಿಶೀಟರ್ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ಘಟನೆ ಬಾಗಲಗುಂಟೆ ಬಳಿಯಿರುವ ಮಲ್ಲಸಂದ್ರದಲ್ಲಿ ನಡೆದಿದೆ.
ಭರ್ಜರಿಯಾಗಿ ಬರ್ತ್ ಡೇ ಆಚರಿಸಿಕೊಂಡ ಮಾಜಿ ರೌಡಿಶೀಟರ್ ಕಿಟ್ಟಿ ಅಲಿಯಾಸ್ ರೋನಿಗೆ ಆತನ ಪಟಾಲಂ ಮೊದಲು ಕ್ರೇನ್ ಮೂಲಕ ದೊಡ್ಡ ಹಾರವನ್ನು ಹಾಕಿ ಬಳಿಕ ಅವರ ಕೈಯಲ್ಲಿ ಕೇಕ್ ಕೂಡ ಕತ್ತರಿಸಿದ್ಧಾರೆ.
‘ದಕ್ಷಿಣ ಧ್ರುವದ ಧ್ರುವತಾರೆಯೂ ನೀನೆ!’ ನಮಗೆಂದೆಂದೂ ನಾಯಕ ನೀನೇ. ದಕ್ಷಿಣ ಧ್ರುವದ ಧ್ರುವತಾರೆಯೂ ನೀನೆ. ಅಭಿಮಾನಿ ಬಳಗದ ಹೃದಯವು ನೀನೆ, ಅಂತ್ಯ ಕಾಣದ ಆಗಸ ನೀನೆ ಎಂದು ಕಿಟ್ಟಿಯನ್ನ ಹಾರೈಸಿದ ನೂರಾರು ಅಭಿಮಾನಿಗಳಿಗೆ ಸ್ಥಳೀಯ ರಾಜಕಾರಣಿಗಳು ಕೂಡ ಸಾಥ್ ನೀಡಿದರು ಎಂದು ತಿಳಿದುಬಂದಿದೆ.
ಮಲ್ಲಸಂದ್ರ ವಾರ್ಡ್ನಲ್ಲಿ ಎರಡು ಕೊರೊನಾ ಕೇಸ್ ಪತ್ತೆಯಾಗಿದೆ. ಆದರೂ ಸಾಮಾಜಿಕ ಅಂತರವನ್ನು ಮರೆತು ಜನ ಸೇರಿದ್ದು ನಿಜಕ್ಕೂ ವಿಪರ್ಯಾಸ. ಜೊತೆಗೆ ಕೂಗಳತೆ ದೂರದಲ್ಲಿ ಬಾಗಲಗುಂಟೆ ಠಾಣೆ ಇದ್ರೂ ಪೋಲಿಸರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ ಕಿಟ್ಟಿಯನ್ನ ರೌಡಿಶೀಟರ್ ಪಟ್ಟಿಯಿಂದ ಕೈಬಿಡಲಾಗಿತ್ತು ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

Published On - 12:01 pm, Thu, 25 June 20