ವರಮಹಾಲಕ್ಷ್ಮಿ ಹಬ್ಬ: ಮಾರುಕಟ್ಟೆಗಳಲ್ಲಿ ಹೂವು, ಹಣ್ಣುಗಳ ಬೆಲೆ ಗಗನಕ್ಕೆ, ಬೆಚ್ಚಿಬಿದ್ದ ಗ್ರಾಹಕ

ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಹಣ್ಣು, ತರಕಾರಿ ಮತ್ತು ಹೂವುಗಳ ಬೆಲೆ ಗಗನಕ್ಕೇರಿದೆ. ಹಬ್ಬದ ಬೇಡಿಕೆಯಿಂದಾಗಿ ಪೂರೈಕೆ ಕಡಿಮೆಯಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಗ್ರಾಹಕರು ಬೆಲೆ ಏರಿಕೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಬಟಾಣಿ, ಹುರುಳಿಕಾಯಿ, ಆಪಲ್, ದಾಳಿಂಬೆ ಮುಂತಾದ ವಸ್ತುಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ. ಹೂವುಗಳ ಬೆಲೆಯೂ ಅಧಿಕವಾಗಿದೆ.

ವರಮಹಾಲಕ್ಷ್ಮಿ ಹಬ್ಬ: ಮಾರುಕಟ್ಟೆಗಳಲ್ಲಿ ಹೂವು, ಹಣ್ಣುಗಳ ಬೆಲೆ ಗಗನಕ್ಕೆ, ಬೆಚ್ಚಿಬಿದ್ದ ಗ್ರಾಹಕ
ಕೆಆರ್ ಮಾರುಕಟ್ಟೆ ಬೆಂಗಳೂರು

Updated on: Aug 06, 2025 | 4:03 PM

ಬೆಂಗಳೂರು, ಆಗಸ್ಟ್​ 06: ಶ್ರಾವಣ ಮಾಸ (Shravan Masa) ಆರಂಭವಾಗುತ್ತಿದ್ದಂತೆ ಜನರು ಸಾಲು ಹಬ್ಬಗಳ ಆಚರಣೆಯಲ್ಲಿ ಬ್ಯೂಸಿಯಾಗುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬವನ್ನು (Varamahalakshmi) ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಿಂದೂಗಳ ಪ್ರತಿಯೊಂದು ಮನೆಯಲ್ಲೂ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತದೆ. ವರಮಾಹಲಕ್ಷ್ಮಿ ಹಬ್ಬದ ನಿಮಿತ್ತ ಮಾರುಕಟ್ಟೆಗಳಲ್ಲಿ ಖರಿದಿ ಭರಾಟೆ ಜೋರಾಗಿದೆ. ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಗಾಗಿ ಗ್ರಾಹಕರು ಕೆಆರ್​ ಮಾರುಕಟ್ಟೆಯತ್ತ ಬರುತ್ತಿದ್ದಾರೆ.

ಹಬ್ಬ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಅಗತ್ಯದಷ್ಟು ವಸ್ತುಗಳ ಪೂರೈಕೆಯಾಗುತ್ತಿಲ್ಲ. ಇದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೂವು, ಹಣ್ಣು ಮತ್ತು ತರಕಾರಿಗಳ ಬೆಲೆ ಏರಿಕೆಯಾಗಿದೆ. ಹೂವು, ಹಣ್ಣುಗಳ ಬೆಲೆಯಲ್ಲಿ ಏರಿಕೆ ಕಂಡು ಗ್ರಾಹಕರು ಅಸಮಾಧಾನ ಹೊರಹಾಕಿದ್ದಾರೆ. ಕಳೆದ ವಾರಕ್ಕಿಂತ ಈ ದರದಲ್ಲಿ ಗಜಗಜಾಂತರ ವ್ಯತ್ಯಾಸವಿದೆ ಎನ್ನುತ್ತಿದ್ದಾರೆ.

ತರಕಾರಿಗಳ ಬೆಲೆ (ಕೆಜಿ)
ತರಕಾರಿ ಪ್ರಸ್ತುತ ದರ  ಹಿಂದಿನ ದರ (ರೂಪಾಯಿಗಳಲ್ಲಿ)
ಬಟಾಣಿ 150 120
ಹುರುಳಿಕಾಯಿ 120 80
ಗಜ್ಜರಿ 120 60
ಬೀನ್ಸ್ 60 40
ಕ್ಯಾಪ್ಸಿಕಮ್ 60 40
ಬದನೇಕಾಯಿ 60 40
ಹೀರೆಕಾಯಿ 60 40
ಚಿಕಡಿಕಾಯಿ 70 50
ಶುಂಠಿ 80 60
ಬೆಳ್ಳುಳ್ಳಿ 140 100
ನೌಕಲ್ 30 20
ಹೂಕೋಸು 20 15
ತೊಂಡೆಕಾಯಿ 40 30
ಹಣ್ಣುಗಳ ದರ (ಕೆಜಿ)
ತರಕಾರಿ ಪ್ರಸ್ತುತ ದರ  ಹಿಂದಿನ ದರ (ರೂಪಾಯಿಗಳಲ್ಲಿ
ಸೇಬು 250 200
ದಾಳಿಂಬೆ 200 150
ಕಿತ್ತಳೆ 200 160
ಮೂಸಂಬಿ 100 80
ಮಾವಿನ ಹಣ್ಣು 160 120
ದ್ರಾಕ್ಷಿ 200 150
ಸಪೋಟ 150 100
ಮರ ಸೇಬು 160 120
ಸೀತಾಫಲ 100 60
ಅನಾನಸ್ 50 50
ಚೇಪೆಕಾಯಿ 120 60

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಆಚರಿಸುವ ಮಂಗಳ ಗೌರಿ ವ್ರತದ ವಿಶೇಷತೆಗಳೇನು?

ಹೂವು ಖರೀದಿಗೆ ಮುಗಿಬಿದ್ದ ಮಹಿಳೆಯರು

ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಮಹಿಳೆಯರು ಮಲ್ಲಿಗೆ ಹೂವು ಖರೀದಿಗೆ ಮುಗಿಬಿದಿದ್ದಾರೆ. ಕೋಲಾರದ ಹಳೆ ಬಸ್ ನಿಲ್ದಾಣದ ಹತ್ತಿರ ಹೂವು, ಹಣ್ಣು ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಹೂವು ಹಣ್ಣು ಬೆಲೆ ಏರಿಕೆ ನಡುವೆಯೂ ಖರೀದಿ ಜೋರಾಗಿಯೇ ನಡೆಯುತ್ತಿದೆ. ಎಲ್ಲ ಬಗೆಯ ಹೂವಿನ ಬೆಲೆ ಗಗನಕ್ಕೇರಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವು ಬೆಳೆದ ರೈತರು ಜಾಕ್ ಪಾಟ್ ಹೊಡೆದಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:00 pm, Wed, 6 August 25