ಶಕ್ತಿ ಯೋಜನೆಯಿಂದ ಈವರೆಗೆ ಬರೊಬ್ಬರಿ 141 ಕೋಟಿ ಮಹಿಳೆಯರು ಸಂಚಾರ-ಸಿದ್ದರಾಮಯ್ಯ
ಬೆಂಗಳೂರಿನ ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2 ಸಾವಿರ ಹಣ, ಗೃಹಜ್ಯೋತಿ ಯೋಜನೆಯಡಿ ಉಚಿತವಾಗಿ 200 ಯೂನಿಟ್ ವಿದ್ಯುತ್ ಹಾಗೂ ಯುವನಿಧಿ ಯೋಜನೆಯನ್ನೂ ಜಾರಿ ಮಾಡಿದ್ದೇವೆ ಎಂದರು.
ಬೆಂಗಳೂರು, ಜ.27: ಶಕ್ತಿ ಯೋಜನೆಯಿಂದ ಈವರೆಗೆ ಬರೊಬ್ಬರಿ 141 ಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ. ಇದರಿಂದ ಪ್ರಯಾಣಕ್ಕೆ ಕೊಡುತ್ತಿದ್ದ ಅವರ ಹಣ ಉಳಿತಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು ‘ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2 ಸಾವಿರ ಹಣ, ಗೃಹಜ್ಯೋತಿ ಯೋಜನೆಯಡಿ ಉಚಿತವಾಗಿ 200 ಯೂನಿಟ್ ವಿದ್ಯುತ್ ಹಾಗೂ ಯುವನಿಧಿ ಯೋಜನೆಯನ್ನೂ ಜಾರಿ ಮಾಡಿದ್ದೇವೆ ಎಂದರು.
ಕೆಸಿ ಜೆನರಲ್ ಅಭಿವೃದ್ದಿಗೆ 150 ರೂ. ಕೋಟಿ ಮೀಸಲಿಟ್ಟಿದ್ದೆವೆ
ಇಂತಹ ಯೋಜನೆಗಳನ್ನು ಯಾವ ಸರ್ಕಾರನೂ ಮಾಡಲ್ಲ, ನಾವು ಏನೂ ಹೇಳ್ತಿವೋ ಅದನ್ನೆ ಕಾರ್ಯಗತ ಮಾಡುತ್ತೇವೆ. ಈಗಲೂ ಕೂಡ ಡಯಾಲಿಸಿಸ್ ಉಚಿತ ಮಾಡಿದ್ದೀವಿ. ಆರೋಗ್ಯ ಇಲಾಖೆಯಲ್ಲಿ ದಿನೇಶ್ ಗೂಂಡು ರಾವ್ ಸುಧಾರಣೆ ಮಾಡುತ್ತಾರೆ. ಇನ್ನುಳಿದಂತೆ ಕೆಸಿ ಜೆನೆರಲ್ ಆಸ್ಪತ್ರೆಯಲ್ಲಿ ಹಲವು ಬೇಡಿಕೆಗಳು ಇವೆ. ಈ ಹಿನ್ನಲೆ ಕೆಸಿ ಜೆನರಲ್ ಆಸ್ಪತ್ರೆ ಅಭಿವೃದ್ದಿಗೆ 150 ಕೋಟಿ ರೂಪಾಯಿ ಮೀಸಲಿಟ್ಟಿದ್ದೆವೆ ಎಂದರು.
ಇದನ್ನೂ ಓದಿ:ಶಕ್ತಿ ಯೋಜನೆ ಎಫೆಕ್ಟ್: ಹಳೆಯ ಬಸ್ಸುಗಳ ಸರ್ವಿಸ್- ರಿಪೇರಿ ಮಾಡಿಸುತ್ತಿಲ್ಲ, ನಿತ್ಯ ಹೆಚ್ಚುತ್ತಿವೆ ಅಪಘಾತಗಳು
ರಾಜ್ಯದಲ್ಲಿ ಉಚಿತ ಡಯಾಲಿಸಿಸ್ ಸೇವೆ ನೀಡಿದ್ದೇ ಸಿದ್ದರಾಮಯ್ಯ- ದಿನೇಶ್ ಗುಂಡೂರಾವ್
ಇದೇ ವೇಳೆ ಮಾತನಾಡಿದ ಆರೋಗ್ಯ & ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ‘ರಾಜ್ಯದಲ್ಲಿ ಉಚಿತ ಡಯಾಲಿಸಿಸ್ ಸೇವೆ ನೀಡಿದ್ದೇ ಸಿದ್ದರಾಮಯ್ಯ ಎಂದು ಹೇಳಿದರು. ಕೆಲ ಸಮಸ್ಯೆಗಳಿದ್ದವು, ಅದನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದೇವೆ. ವ್ಯವಸ್ಥೆ ಬದಲಾಯಿಸುವ ನಿಟ್ಟಿನಲ್ಲಿ ನೂತನ ವ್ಯವಸ್ಥೆ ಜಾರಿ ಮಾಡಿದ್ದೇವೆ. ರಾಜ್ಯದ ಪ್ರತಿ ಕೇಂದ್ರದಲ್ಲೂ ಹೊಸ ಯಂತ್ರವನ್ನು ಅಳವಡಿಸಿದ್ದೇವೆ. 42 ತಾಲೂಕುಗಳಲ್ಲಿ ಹೊಸ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ ಮಾಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ನಿತ್ಯ 6 ರೋಗಿಗಳಿಗೆ ಡಯಾಲಿಸಿಸ್ ಸೇವೆ ನೀಡಲಾಗುತ್ತಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:48 pm, Sat, 27 January 24