ಆನೇಕಲ್​: ನವಜಾತ ಶಿಶುವನ್ನು ಜೀವಂತವಾಗಿ ಹೂತು ಹಾಕಿದ ದುರುಳರು

ನಿರ್ಜನ ಪ್ರದೇಶದಲ್ಲಿ ನವಜಾತ ಶಿಶುವನ್ನು ಜೀವಂತವಾಗಿ ಹೂತು ಹಾಕಿದ ಘಟನೆ ಆನೇಕಲ್ ತಾಲೂಕಿನ ಕತ್ರಿಗುಪ್ಪೆ ದಿಣ್ಣೆ ಗ್ರಾಮದಲ್ಲಿ ನಡೆದಿದೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ನಡೆದಿದೆ. ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆನೇಕಲ್​: ನವಜಾತ ಶಿಶುವನ್ನು ಜೀವಂತವಾಗಿ ಹೂತು ಹಾಕಿದ ದುರುಳರು
ಮಣ್ಣಲ್ಲಿ ಹೂತಿಟ್ಟಿದ್ದ ಮಗು
Follow us
| Updated By: ವಿವೇಕ ಬಿರಾದಾರ

Updated on: Sep 30, 2024 | 1:09 PM

ಆನೇಕಲ್, ಸೆಪ್ಟೆಂಬರ್​ 30: ಆನೇಕಲ್​ನಲ್ಲಿ (Anekal) ಒಂದು ಅಮಾನವೀಯ ಘಟನೆ ನಡೆದಿದೆ. ನಿರ್ಜನ ಪ್ರದೇಶದಲ್ಲಿ ನವಜಾತ ಶಿಶುವನ್ನು (Baby) ಜೀವಂತವಾಗಿ ಹೂತು ಹಾಕಿದ ಘಟನೆ ಆನೇಕಲ್ ತಾಲೂಕಿನ ಕತ್ರಿಗುಪ್ಪೆ ದಿಣ್ಣೆ ಗ್ರಾಮದಲ್ಲಿ ನಡೆದಿದೆ. ಸ್ಥಳೀಯರು ಬಹಿರ್ದೆಸೆಗೆ ಹೋದಾಗ ಮಗುವಿನ ಚೀರಾಟ ಕೇಳಿ, ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಗುವನ್ನು ರಕ್ಷಿಸಿದ್ದಾರೆ.

ನಂತರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಕ್ಕಳ ರಕ್ಷಣಾಧಿಕಾರಿ ಹೆಚ್.ಕೆ.ಆಶಾ ತಂಡ ಮಗುವನ್ನು ಸಂರಕ್ಷಿಸಿದ್ದಾರೆ. ದೊಮ್ಮಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿಗೆ ಸಣ್ಣಪುಣ್ಣ ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ನಡೆದಿದೆ.

ನೀರಲ್ಲಿ ಕೊಚ್ಚಿ ಹೋದ ರೈತ

ಬಾಗಲಕೋಟೆ: ಬೈಕ್‌ನಲ್ಲಿ ರಾತ್ರಿ ಸೇತುವೆ ದಾಟುವಾಗ ನೀರಲ್ಲಿ ಕೊಚ್ಚಿ ಹೋಗಿ ರೈತ ಮೃತಪಟ್ಟಿರುವ ಘಟನೆ ಹುನಗುಂದ ತಾಲ್ಲೂಕಿನ ಮೂಗನೂರು ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಶಿವಪ್ಪ ಬಸವನಾಳ (38) ಮೃತ ರೈತ. ರವಿವಾರ ‌ಸುರಿದ ಧಾರಾಕಾರ‌ ಮಳೆಯಿಂದ ಸೇತುವೆ ಮೇಲೆ‌ ಹಳ್ಳದ ನೀರು ಹರಿದಿದೆ.

ಇದನ್ನೂ ಓದಿ: 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಆರೋಪಿಯ ಮನೆಗೆ ಬೆಂಕಿ

ರೈತ ಮಲ್ಲಪ್ಪ ಶಿವಪ್ಪ ಬಸವನಾಳ ಮೂಗನೂರು ಗ್ರಾಮದಿಂದ ಸ್ವಗ್ರಾಮ ಅಂಬಲಿಕೊಪ್ಪಕ್ಕೆ ತೆರಳಲು ಸೇತುವೆ ದಾಟುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಮೃತ ರೈತ ಮಲ್ಲಪ್ಪ ಶಿವಪ್ಪ ಬಸವನಾಳ ಮೂಗನೂರು ಬೈಕ್​ ಸೇತುವೆ ಪಕ್ಕದಲ್ಲಿ ಬಿದ್ದಿದೆ. ಹಳ್ಳದ‌ಪಕ್ಕದ ಕಂಟಿಯಲ್ಲಿ ರೈತನ ಶವ ಪತ್ತೆಯಾಗಿದೆ. ಅಮೀನಗಢ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

7 ಕರಡಿಗಳು ಪ್ರತ್ಯಕ್ಷ

ಕೊಪ್ಪಳ: ಇರಕಲಗಡಾ-ಯಲಮಗೇರಿ ರಸ್ತೆ ಬಳಿ ಏಳು ಕರಡಿಗಳು ಪ್ರತ್ಯಕ್ಷವಾಗಿವೆ. ಕರಡಿಗಳನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕರಡಿ ಪ್ರತ್ಯಕ್ಷದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕರಡಿಗಳು ಹಲವಾರು ಬಾರಿ ಪ್ರಯಾಣಿಕರ ಮೇಲೆ ದಾಳಿ ಮಾಡಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ