ನಾನು ಹಿಂದೂ ಪರವಾಗಿ ಮಾತನಾಡಿದ್ದೇ ಕೃತ್ಯಕ್ಕೆ ಕಾರಣವಾಯ್ತಾ? ಅನುಮಾನ ಹೊರ ಹಾಕಿದ ಶಾಸಕ ಸತೀಶ್ ರೆಡ್ಡಿ

ಸ್ಥಳೀಯ ಬಿಬಿಎಂಪಿ ಆಡಳಿತಕ್ಕೆ ಹಿಂದೂ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರು. ಈ ವೇಳೆ ನಾನು ಸ್ಥಳಕ್ಕೆ ತೆರಳಿ ಹಿಂದೂ ಪರವಾಗಿ ಮಾತನಾಡಿದ್ದೆ. ಇದೇ ಹಿನ್ನೆಲೆ ಈ ಘಟನೆ ನಡೆದಿದಿಯಾ ಎಂಬ ಅನುಮಾನವಿದೆ. ಇದರ ಬಗ್ಗೆ ಸಲ್ಪ ಗಮನ ಹರಿಸಿ ಎಂದು ಸತೀಶ್ ರೆಡ್ಡಿ ಡಿಸಿಪಿ ಶ್ರೀನಾಥ್ ಜೋಶಿಯವರಿಗೆ ಸಲಹೆ ನೀಡಿದ್ದಾರೆ.

ನಾನು ಹಿಂದೂ ಪರವಾಗಿ ಮಾತನಾಡಿದ್ದೇ ಕೃತ್ಯಕ್ಕೆ ಕಾರಣವಾಯ್ತಾ? ಅನುಮಾನ ಹೊರ ಹಾಕಿದ ಶಾಸಕ ಸತೀಶ್ ರೆಡ್ಡಿ
ಸುಟ್ಟು ಕರಕಲಾದ ಕಾರುಗಳು
Follow us
| Updated By: ಆಯೇಷಾ ಬಾನು

Updated on:Aug 12, 2021 | 12:09 PM

ಬೆಂಗಳೂರು: ನಗರದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ(MLA Satish Reddy) ಮನೆ ಮುಂದೆ ನಿಲ್ಲಿಸಿದ್ದ ಎರಡು ಐಷಾರಾಮಿ ಕಾರುಗಳು ಬೆಂಕಿ(Cars on Fire) ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆರೋಪಿಗಳನ್ನು ಹಿಡಿಯಲು ಮೂರು ತಂಡಗಳನ್ನು ಮಾಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದ್ರೆ ಈ ಕೃತ್ಯಕ್ಕೆ ಕಾರಣವೇನಿರಬಹುದು ಎಂಬುವುದೇ ಕುತೂಹಲ ಕೆರಳಿಸಿದೆ. ರಾಜಕೀಯ ವೈಷಮ್ಯ ಎಂಬುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ರೆ ಇದರ ನಡುವೆ ಶಾಸಕ ಸತೀಶ್ ರೆಡ್ಡಿ ಮತ್ತೊಂದು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ನಾನು ಹಿಂದೂ ಪರವಾಗಿ ಮಾತನಾಡಿದ್ದೆ ಈ ಕೃತ್ಯಕ್ಕೆ ಕಾರಣವಾಯ್ತಾ ಎಂದು ಅನುಮಾನ ಹೊರ ಹಾಕಿದ್ದಾರೆ.

ಘಟನೆ ಬಗ್ಗೆ ಮಾತನಾಡಿದ ಶಾಸಕ ಸತೀಶ್ ರೆಡ್ಡಿ ನಿನ್ನೆ ರಾತ್ರಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ನಿನ್ನೆ ರಾತ್ರಿ ಅಪರಿಚಿತರು ಎಂಟ್ರಿಯಾಗಿ ಕೃತ್ಯ ಎಸಗಿದ್ದಾರೆ. ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆಯಾಗಿದೆ. ಕಾರ್ ಬ್ಯಾಟರಿ ಬ್ಲಾಸ್ಟ್ ಆದಾಗ ಎಚ್ಚರ ಅಯ್ತು. ಶೇ.80ರಷ್ಟು ಕಾರುಗಳು ಕರಕಲಾಗಿದೆ. ಆಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದ್ರು. ಘಟನೆ ಬಗ್ಗೆ ಗೃಹ ಸಚಿವರು, ಸಿಎಂ ಎಲ್ಲಾರು ಮಾತನಾಡಿದ್ದಾರೆ. ರಾಜಕೀಯವಾಗಿ ಯಾವುದೇ ವೈಷಮ್ಯ ಇಲ್ಲಾ ಎಂದು ಪ್ರತಿಕ್ರಿಯಿಸಿದ್ದಾರೆ.

ಹಿಂದೂ ಪರವಾಗಿ ಮಾತನಾಡಿದ್ದೆ ಈ ಕೃತ್ಯಕ್ಕೆ ಕಾರಣವಾಯ್ತಾ? ಇನ್ನು ಇದೇ ವೇಳೆ ಶಾಸಕ ಸತೀಶ್ ರೆಡ್ಡಿ ಅನುಮಾನವೊಂದನ್ನು ವ್ಯಕ್ತಪಡಿಸಿದ್ದಾರೆ. ಬೇಗೂರು ಕೆರೆಯಲ್ಲಿ ಶಿವನ ದೇವಸ್ಥಾನ ಇದೇ. ಶಿವನ ದೇವಸ್ಥಾನದಲ್ಲಿ ಪೂಜೆ ಮಾಡದಂತೆ ಕ್ರಿಶ್ಚಿಯನ್ ವ್ಯಕ್ತಿ ಕೋರ್ಟ್ನಿಂದ ಸ್ಟೇ ತಂದಿದ್ದಾರೆ. ಹಾಗಾಗಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ವು. ಆಗ ಅಲ್ಲಿ ಹೋಗಿ ಪೂಜೆ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಕೋರ್ಟ್ ವಿಚಾರ ಇರೋದ್ರಿಂದ ಕಾನೂನು ರೀತಿಯಲ್ಲಿ ಬಗೆಹರಿಸುವ ಕೆಲಸ ಮಾಡುವ ಎಂದು ಹೇಳಿ ಬಂದಿದ್ದೆ. ನಿನ್ನೆ ಸಂಜೆ 5 ಗಂಟೆಗೆ ನಾನೇ ಹೊಗಿ ಬಗೆಹರಿಸಿದ್ದೆ. ಆ ವಿಚಾರವಾಗಿ ಕೃತ್ಯ ನಡೆದಿರಬಹುದೆಂದು ಶಂಕಿಸಿ ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇನ್ನು ತನಿಖಾ ಹಂತವಾಗಿ ಡಿಸಿಪಿ ಶ್ರೀನಾಥ್ ಜೋಶಿಯಿಂದ ಶಾಸಕರ ಹೇಳಿಕೆ ದಾಖಲು ಮಾಡಿಕೊಳ್ಳುವಾಗ ಮತ್ತೊಂದು ಸಂಗತಿಯನ್ನು ಸತೀಶ್ ರೆಡ್ಡಿ ತಿಳಿಸಿದ್ದಾರೆ. ನಿನ್ನೆ ನಾನು ಬೊಮ್ಮನಹಳ್ಳಿಯ ಇತಿಹಾಸ ಪ್ರಸಿದ್ದ ನಾಗನಾಥೇಶ್ವರ ದೇವಾಲಯ ಮುಂಭಾಗಕ್ಕೆ ತೆರಳಿದ್ದೆ‌. ಕೆರೆ ಜೀರ್ಣೋದ್ಧಾರ ವೇಳೆ ಕೆರೆ ಮಧ್ಯೆ ಭಾಗದಲ್ಲಿ ದಿಬ್ಬ ಮೇಲೆ ಶಿವನ‌ಮೂರ್ತಿ ನಿರ್ಮಾಣ ಮಾಡಲಾಗಿತ್ತು. ಆದ್ರೆ ಕೆರೆಯಲ್ಲಿ ಅಕ್ರಮವಾಗಿ ಶಿವನ‌ಮೂರ್ತಿ ನಿರ್ಮಾಣವಾಗಿದೆಯೆಂದು ನ್ಯಾಯಾಲಯದಲ್ಲಿದೆ. ಹೀಗಾಗಿ ಸ್ಥಳೀಯ ಬಿಬಿಎಂಪಿ ಆಡಳಿತಕ್ಕೆ ಹಿಂದೂ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರು. ಈ ವೇಳೆ ನಾನು ಸ್ಥಳಕ್ಕೆ ತೆರಳಿ ಹಿಂದೂ ಪರವಾಗಿ ಮಾತನಾಡಿದ್ದೆ. ಇದೇ ಹಿನ್ನೆಲೆ ಈ ಘಟನೆ ನಡೆದಿದಿಯಾ ಎಂಬ ಅನುಮಾನವಿದೆ. ಇದರ ಬಗ್ಗೆ ಸಲ್ಪ ಗಮನ ಹರಿಸಿ ಎಂದು ಸತೀಶ್ ರೆಡ್ಡಿ ಡಿಸಿಪಿ ಶ್ರೀನಾಥ್ ಜೋಶಿಯವರಿಗೆ ಸಲಹೆ ನೀಡಿದ್ದಾರೆ.

ಬೇಗೂರು ಕೆರೆ ಸುತ್ತಲೂ ಪೊಲೀಸ್ ಬಂದೋಬಸ್ತ್ ಇನ್ನು ಬೇಗೂರು ಕೆರೆ ಸುತ್ತಲೂ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಿಬಿಎಂಪಿಯವರು ಬೇಗೂರು ಕೆರೆಯಲ್ಲಿ ಐಲ್ಯಾಂಡ್ ನಿರ್ಮಿಸಿ, ಶಿವನ ಮೂರ್ತಿ ನಿರ್ಮಿಸಿದ್ದರು. ಇದನ್ನು ಹಿಂದೂಪರ ಕಾರ್ಯಕರ್ತರು ಅನಾವರಣ ಮಾಡಿದ್ದರು. ಇದನ್ನ ಪ್ರಶ್ನಿಸಿ ಲಿಯೋ ಸಾಲ್ಡಾನಾ ಎಂಬ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿದ್ದ. ಕೆರೆಯೊಳಗೆ ಮೂರ್ತಿ ನಿರ್ಮಾಣ ಮಾಡಿದ್ದು ಅನಧಿಕೃತ ಹಾಗೂ ಕಾನೂನು ಬಾಹಿರವೆಂದು ಕೋರ್ಟ್ ಮೊರೆ ಹೋಗಿದ್ರು. ಕೋರ್ಟ್ ಸ್ಟೇ ನೀಡಿದ ಕಾರಣ, ಶಿವನ ಮೂರ್ತಿಗೆ ಪ್ಲಾಸ್ಟಿಕ್ ಕವರ್ ಸುತ್ತಿ ಕ್ಲೋಸ್ ಮಾಡಲಾಗಿದೆ. ಆದ್ರೆ ಮೊನ್ನೆ ಹಿಂದೂ ಪರ ಕಾರ್ಯಕರ್ತರು ಪ್ಲಾಸ್ಟಿಕ್ ಹೊದಿಕೆ ತೆರವು ಮಾಡಿದ್ದಾರೆ. ಸದ್ಯ ಈಗ ಕೆರೆ ಸುತ್ತಲೂ ಪೊಲೀಸ್ ಬೀಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ 2 ಐಷಾರಾಮಿ ಕಾರುಗಳಿಗೆ ಬೆಂಕಿ: ಚುರುಕುಗೊಂಡ ಪೊಲೀಸ್ ತನಿಖೆ

Published On - 11:57 am, Thu, 12 August 21

ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!