Bengaluru Trains: ಬೆಂಗಳೂರಿನಿಂದ ಸೂರತ್ನ ಉಧ್ನಾ ನಿಲ್ದಾಣಕ್ಕೆ ವಿಶೇಷ ರೈಲು; ವೇಳಾಪಟ್ಟಿ ಇಲ್ಲಿದೆ
ಹೆಚ್ಚುವರಿ ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ SMVT ಬೆಂಗಳೂರಿನಿಂದ ಉಧ್ನಾ ನಿಲ್ದಾಣಕ್ಕೆ ಏಕಮಾರ್ಗ ವಿಶೇಷ ರೈಲು(Train) ಸಂಚಾರಕ್ಕೆ ಭಾರತೀಯ ರೈಲ್ವೆ ತಿರ್ಮಾನಿಸಿದೆ. ವೇಳಾಪಟ್ಟಿ ಈ ಕೆಳಗಿನಂತಿದೆ.
ಬೆಂಗಳೂರು, ಜು.12: ಪ್ರಯಾಣಿಕರ ಅನುಕೂಲ ಮತ್ತು ಹೆಚ್ಚುವರಿ ಜನದಟ್ಟಣೆಯನ್ನು ನಿಯಂತ್ರಿಸಲು SMVT ಬೆಂಗಳೂರಿನಿಂದ ಉಧ್ನಾ ನಿಲ್ದಾಣಕ್ಕೆ ಏಕಮಾರ್ಗ ವಿಶೇಷ ರೈಲು(Train) ಸಂಚಾರಕ್ಕೆ ಭಾರತೀಯ ರೈಲ್ವೆ ತಿರ್ಮಾನಿಸಿದೆ. ಹೌದು, ಬೆಳಗಾವಿ ಮತ್ತು ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣ ಹುಬ್ಬಳ್ಳಿ ಮೂಲಕ ಉಧ್ನಾ ನಿಲ್ದಾಣಕ್ಕೆ ಏಕಮುಖ ವಿಶೇಷ ರೈಲು ಓಡಿಸಲಾಗುತ್ತಿದೆ.
ವಿವರಗಳು ಈ ಕೆಳಗಿನಂತಿವೆ
SMVT ಬೆಂಗಳೂರು ಉದ್ನಾ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಖ್ಯೆ. 06577, ನಿನ್ನೆ ಜು.11 ರಂದು ಸಂಜೆ 06:15 ಕ್ಕೆ SMVT ಬೆಂಗಳೂರಿನಿಂದ ಹೊರಟು ಮರುದಿನ ರಾತ್ರಿ 11:40 ಗಂಟೆಗೆ ಉಧ್ನಾ ನಿಲ್ದಾಣವನ್ನು ತಲುಪಿದೆ. ಜೊತೆಗೆ ಈ ರೈಲು, ‘ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ರಾಯಬಾಗ, ಕುಡಚಿ, ಮೀರಜ್, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರಸ್ತೆ, ಬೋಯಿಸರ್, ವಾಪಿ ಮತ್ತು ವಲ್ಸಾದ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
Attention passengers: Kindly note the running of one way special train from SMVT Bengaluru to Udhna and Extension of Santragachi – SMVT Bengaluru – Santragachi weekly express special as detailed below.#SWRupdates pic.twitter.com/AqAtbRtMbu
— South Western Railway (@SWRRLY) July 11, 2024
ಇದನ್ನೂ ಓದಿ:ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ಸೊಲ್ಲಾಪುರ, ಬೆಂಗಳೂರು ಸೇರಿದಂತೆ ರಾಜ್ಯದ ಈ ರೈಲುಗಳ ಸಮಯ ಬದಲಾವಣೆ
ರೈಲು ಕೋಚ್ ಸಂಯೋಜನೆ ಹೀಗಿದೆ
ಇನ್ನು ಈ ವಿಶೇಷ ರೈಲನ್ನು ಸಂತ್ರಗಚಿ-ಎಸ್‌ಎಂವಿಟಿ ಬೆಂಗಳೂರು-ಸಂತ್ರಗಚಿ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ವಿಸ್ತರಣೆ ಮಾಡಲಾಗಿದ್ದು, ಸಾಮಾನ್ಯ ದ್ವಿತೀಯ ದರ್ಜೆ-15, ಎಸ್‌ಎಲ್‌ಆರ್‌ಡಿ-2 ಸೇರಿದಂತೆ 15 ಕೋಚ್‌ಗಳನ್ನು ಒಳಗೊಂಡಿದೆ. ಜೊತೆಗೆ ಅಸ್ತಿತ್ವದಲ್ಲಿರುವ ಸಮಯ, ನಿಲುಗಡೆಗಳು ಮತ್ತು ಸಂಯೋಜನೆಯೊಂದಿಗೆ ರೈಲು ಸಂಖ್ಯೆ 08845/08846 ಸಂತ್ರಗಚಿ-SMVT ಬೆಂಗಳೂರು- ಸಂತ್ರಗಾಚಿ ಎಕ್ಸ್‌ಪ್ರೆಸ್ ವಿಶೇಷ (TOD) ವಿಸ್ತರಣೆಗಾಗಿ ಆಗ್ನೇಯ ರೈಲ್ವೆಯು ಸೂಚನೆ ನೀಡಿದೆ.
ವಿಸ್ತೃತ ಅವಧಿಯ ವಿವರಗಳು ಹೀಗಿವೆ
1. ರೈಲು ಸಂಖ್ಯೆ. 08845 ಸಂತ್ರಗಚಿ-SMVT ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಜುಲೈ 12 ರಿಂದ ಜುಲೈ 26, 2024 ರವರೆಗೆ ತನ್ನ ಸೇವೆಯನ್ನು ಮುಂದುವರೆಸಲಿದೆ. ಈ ಮೊದಲು ಈ ರೈಲನ್ನು ಜೂನ್ 28, 2024 ರವರೆಗೆ ಓಡಿಸಲು ಸೂಚಿಸಲಾಗಿತ್ತು.
2. ರೈಲು ಸಂಖ್ಯೆ. 08846 SMVT ಬೆಂಗಳೂರು-ಸಂತ್ರಗಾಚಿ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಜುಲೈ 14 ರಿಂದ ಜುಲೈ 28, 2024 ರವರೆಗೆ ತನ್ನ ಸೇವೆಯನ್ನು ಮುಂದುವರೆಸಲಿದೆ. ಈ ಮೊದಲು, ಈ ರೈಲನ್ನು ಜೂನ್ 30, 2024 ರವರೆಗೆ ಓಡಿಸಲು ಸೂಚಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Fri, 12 July 24