AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ಸೊಲ್ಲಾಪುರ, ಬೆಂಗಳೂರು ಸೇರಿದಂತೆ ರಾಜ್ಯದ ಈ ರೈಲುಗಳ ಸಮಯ ಬದಲಾವಣೆ

ಹುಬ್ಬಳ್ಳಿ-ಸೊಲ್ಲಾಪುರ ಪ್ಯಾಸೆಂಜರ್​ ಸೇರಿಂದತೆ ರಾಜ್ಯದ ಒಂಬುತ್ತು ರೈಲಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಸಮಯ ಬದಲಾವಣೆ ಮುಂದಿನ ವಾರದಿಂದ ಜಾರಿಗೆ ಬರಲಿದೆ. ಇನ್ನು, ಹುಬ್ಬಳ್ಳಿ ಮತ್ತು ಬೆಳಗಾವಿಯಿಂದ ಸೂರತ್​​ನ ಉಧ್ನಾದಿಂದ ವಿಶೇಷ ರೈಲು ಬಿಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ಸೊಲ್ಲಾಪುರ, ಬೆಂಗಳೂರು ಸೇರಿದಂತೆ ರಾಜ್ಯದ ಈ ರೈಲುಗಳ ಸಮಯ ಬದಲಾವಣೆ
ರೈಲು
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on: Jul 09, 2024 | 9:46 AM

Share

ಹುಬ್ಬಳ್ಳಿ, ಜುಲೈ 09: ಹುಬ್ಬಳ್ಳಿ-ಸೊಲ್ಲಾಪುರ (Hubballi-Solapur) ಪ್ಯಾಸೆಂಜರ್​ ಸೇರಿಂದತೆ ರಾಜ್ಯದ ಒಂಬುತ್ತು ರೈಲುಗಳ (Train) ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಸಮಯ ಬದಲಾವಣೆ ಮುಂದಿನ ವಾರದಿಂದ ಜಾರಿಗೆ ಬರಲಿದೆ. ಇನ್ನು, ಹುಬ್ಬಳ್ಳಿ (Hubballi) ಮತ್ತು ಬೆಳಗಾವಿಯಿಂದ (Belagavi) ಸೂರತ್​​ನ ಉಧ್ನಾದಿಂದ ವಿಶೇಷ ರೈಲು ಬಿಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ (North western Railway) ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಹುಬ್ಬಳ್ಳಿ-ಸೊಲ್ಲಾಪುರ, ಹುಬ್ಬಳ್ಳಿ-ನರಸಾಪುರ ಅಮರಾವತಿ ಎಕ್ಸಪ್ರೆಸ್​, ದಾದರ್​​-ಮೈಸೂರು ಶರಾವತಿ ವೀಕ್ಲಿ ಎಕ್ಸಪ್ರೆಸ್​​, ಅಜಮೀರ್​-ಮೈಸೂರು ವೀಕ್ಲಿ ಎಕ್ಸಪ್ರೆಸ್​​, ಜೋದಪುರ-ಕೆಎಸ್ಆರ್​​ ವೀಕ್ಲಿ ಎಕ್ಸಪ್ರೆಸ್, ಗಾಂಧಿದಾಮ್​​-ಕೆಎಸ್​ಆರ್​​ ಬೆಂಗಳೂರು ವೀಕ್ಲಿ ಎಕ್ಸಪ್ರೆಸ್, ದಾದರ್​-ಪಾಂಡಿಚೇರಿ ವೀಕ್ಲಿ ಎಕ್ಸಪ್ರೆಸ್​,​​​ ಹುಬ್ಬಳ್ಳಿ-ಯಶವಂತಪುರ ವೀಕ್ಲಿ ಸೂಪರ್​ ಫಾಸ್ಟ್​ ಎಕ್ಸಪ್ರೆಸ್, ಮತ್ತು ದಾದರ್​-ತಿರುನೆಲ್ವೇಲಿ ವೀಕ್ಲಿ ಎಕ್ಸಪ್ರೆಸ್​​​ ರೈಲಿನ ಸಮಯ ಬದಲಾವಣೆಯಾಗಲಿದೆ.

ಸಮಯ ಬದಲಾವಣೆ ಇಲ್ಲಿದೆ

  1. ರೈಲು ಸಂಖ್ಯೆ 07332: ಎಸ್​ಎಸ್​ಎಸ್​ ಹುಬ್ಬಳ್ಳಿ-ಸೊಲ್ಲಾಪುರ ಪ್ಯಾಸೆಂಜರ್​ ರೈಲು ಜು.15 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 1:15ಕ್ಕೆ ಹೊರಡಲಿದೆ.
  2. ರೈಲು ಸಂಖ್ಯೆ 17226: ಎಸ್​ಎಸ್​ಎಸ್​ ಹುಬ್ಬಳ್ಳಿ-ನರಸಾಪುರ ಅಮರಾವತಿ ಎಕ್ಸಪ್ರೆಸ್​ ಜು.15 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 1ಕ್ಕೆ ಹೊರಡಲಿದೆ.
  3. ರೈಲು ಸಂಖ್ಯೆ 11005: ದಾದರ್​-ಪಾಂಡಿಚೇರಿ ವೀಕ್ಲಿ ಎಕ್ಸಪ್ರೆಸ್​ ಜು.15 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 12:05ಕ್ಕೆ ಅಥವಾ 12:15ಕ್ಕೆ ಹೊರಡಲಿದೆ.
  4. ರೈಲು ಸಂಖ್ಯೆ 11035: ದಾದರ್​-ತಿರುನೆಲ್ವೇಲಿ ವೀಕ್ಲಿ ಎಕ್ಸಪ್ರೆಸ್ ಜು.15 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 12:05ಕ್ಕೆ ಅಥವಾ 12:15ಕ್ಕೆ ಹೊರಡಲಿದೆ.
  5. ರೈಲು ಸಂಖ್ಯೆ 11035: ಮೈಸೂರು-ಶರಾವತಿ ವೀಕ್ಲಿ ಎಕ್ಸಪ್ರೆಸ್ ಜು.18 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 12:05ಕ್ಕೆ ಅಥವಾ 12:15ಕ್ಕೆ ಹೊರಡಲಿದೆ.
  6. ರೈಲು ಸಂಖ್ಯೆ 16209: ಅಜ್ಮೀರ್​-ಮೈಸೂರು ವೀಕ್ಲಿ ಎಕ್ಸಪ್ರೆಸ್​​ ಜು.19 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 2:00 ಗಂಟೆ ಅಥವಾ 02:15ಕ್ಕೆ ಹೊರಡಲಿದೆ.
  7. ರೈಲು ಸಂಖ್ಯೆ 16507: ಜೋದಪುರ್​-ಕೆಎಸ್​ಆರ್​ ಬೆಂಗಳೂರು ವೀಕ್ಲಿ ಎಕ್ಸಪ್ರೆಸ್​​ ಜು.18 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 2:00 ಗಂಟೆ ಅಥವಾ 02:15ಕ್ಕೆ ನಿರ್ಗಮಿಸಲಿದೆ.
  8. ರೈಲು ಸಂಖ್ಯೆ 16505: ಗಾಂಧಿಧಾಮ್​​-ಕೆಎಸ್​ಆರ್​ ಬೆಂಗಳೂರು ವೀಕ್ಲಿ ಎಕ್ಸಪ್ರೆಸ್​ ಜು.16 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 2:00 ಗಂಟೆ ಅಥವಾ 02:15ಕ್ಕೆ ನಿರ್ಗಮಿಸಲಿದೆ.
  9. ರೈಲು ಸಂಖ್ಯೆ 20656: ಎಸ್​ಎಸ್​ಎಸ್​ ಹುಬ್ಬಳ್ಳಿ-ಯಶವಂತಪುರ ವೀಕ್ಲಿ ಎಕ್ಸಪ್ರೆಸ್​​ ಜು.20 ರಿಂದ ಬೆಳಗ್ಗೆ 11ಕ್ಕೆ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಹೊರಡಲಿದೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆ

ಹುಬ್ಬಳ್ಳಿ, ಬೆಳಗಾವಿಯಿಂದ ಸೂರತ್​​ನ ಉಧ್ನಾಗೆ ವಿಶೇಷ ರೈಲು

ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸುವ ಸಲುವಾಗಿ, ಭಾರತೀಯ ರೈಲ್ವೆಯು ಬೆಳಗಾವಿ ಮತ್ತು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಉದ್ಘಾ ನಿಲ್ದಾಣಕ್ಕೆ ಏಕಮುಖ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ ವಿವರ ಇಲ್ಲಿದೆ.

  • ಜುಲೈ 10 ರಂದು, ಬೆಳಗಾವಿಯಿಂದ ಉದ್ಘಾಕ್ಕೆ ವಿಶೇಷ ರೈಲು (07354) ಸಂಚಾರ:

ಈ ರೈಲು ಜುಲೈ 10 ರಂದು ಬೆಳಗ್ಗೆ 10:30 ಗಂಟೆಗೆ ಬೆಳಗಾವಿಯಿಂದ ಹೊರಟು ಘಟಪ್ರಭಾ, ರಾಯಬಾಗ, ಕುಡಚಿ, ಮೀರಜ್, ಸಾಂಗ್ಲಿ ಕರಾಡ, ಸತಾರಾ, ಪುಣೆ, ಕಲ್ಯಾಣ್, ಭಿವಂಡಿ ರೋಡ್, ವಸಾಯಿ ರೋಡ್​​ ಪಾಲ್ವರ್, ವಾಪಿ ಮತ್ತು ವಲ್ಸಾರ್​​ ನಿಲ್ದಾಣಗಳಲ್ಲಿ ನಿಲುಗಡೆಯ ಮೂಲಕ ಮರುದಿನ ಮಧ್ಯರಾತ್ರಿ 2:45 ಕ್ಕೆ ಉದ್ಘಾ ನಿಲ್ದಾಣವನ್ನು ತಲುಪಲಿದೆ.

  • ಜುಲೈ 13 ರಂದು ಹುಬ್ಬಳ್ಳಿಯಿಂದ ಉಧ್ನಾಗೆ ವಿಶೇಷ ರೈಲು (07358) ಸಂಚಾರ:

ಈ ವಿಶೇಷ ರೈಲು ಜುಲೈ 13 ರಾತ್ರಿ 8:20 ಗಂಟೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು ಬಾದಾಮಿ, ಬಾಗಲಕೋಟಿ, ವಿಜಯಪುರ, ಸೋಲಾಪುರ, ದೌಂಡ್, ಪುಣೆ, ಲೋನಾವಲ್, ಕಲ್ಯಾಣ್, ಕಮಾನ್ ರೋಡ್, ಸಾಯಿ ರೋಡ್ ಮತ್ತು ವಾಸಿ ನಿಲ್ದಾಣಗಳಲ್ಲಿ ನಿಲುಗಡೆಯ ಮೂಲಕ ಮರುದಿನ ಸಂಜೆ 4:45 ಗಂಟೆಗೆ ಸೂರತ್​ನ ಉಧ್ನಾ ನಿಲ್ದಾಣವನ್ನು ತಲುಪಲಿದೆ.

ಮುಂಗಡ ಬುಕಿಂಗ್ ಮತ್ತು ವೇಳಾಪಟ್ಟಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು www.enquiry.indianrail.gov.in ವೆಬ್​ಸೈಟ್​ಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139ಗೆ ಕರೆ ಮಾಡಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು