ಬೆಂಗಳೂರಲ್ಲಿ ಮಿತಿ ಮೀರಿದ ಶ್ವಾನಗಳ ದಾಳಿ ಪ್ರಕರಣ: 5 ತಿಂಗಳಲ್ಲಿ 9.7 ಸಾವಿರ ಕೇಸ್​​

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 2.66 ಲಕ್ಷಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿದೆ. ರೇಬಿಸ್‌ನಿಂದ 30 ಜನರು ಮೃತಪಟ್ಟಿದ್ದು, ಆಸ್ಪತ್ರೆಗಳಲ್ಲಿ ಆ್ಯಂಟಿ ರೇಬಿಸ್ ವ್ಯಾಕ್ಸಿನ್‌ಗೆ ಬೇಡಿಕೆ ಹೆಚ್ಚಾಗಿದೆ. ನಾಯಿ ಕಚ್ಚಿದರೆ ನಿರ್ಲಕ್ಷ್ಯ ಮಾಡದಂತೆ ವೈದ್ಯರಿಂದಲೂ ಸಲಹೆ ವ್ಯಕ್ತವಾಗಿದೆ.

ಬೆಂಗಳೂರಲ್ಲಿ ಮಿತಿ ಮೀರಿದ ಶ್ವಾನಗಳ ದಾಳಿ ಪ್ರಕರಣ: 5 ತಿಂಗಳಲ್ಲಿ 9.7 ಸಾವಿರ ಕೇಸ್​​
ಸಾಂದರ್ಭಿಕ ಚಿತ್ರ
Image Credit source: PTI
Edited By:

Updated on: Jun 16, 2026 | 10:41 AM

ಬೆಂಗಳೂರು, ಜೂನ್​​ 16: ರಾಜಧಾನಿ ಬೆಂಗಳೂರಲ್ಲಿ (Bengaluru) ಶ್ವಾನಗಳ ದಾಳಿ ಪ್ರಕರಣಗಳು ಮಿತಿ ಮೀರಿದ್ದು, ಈ ಸಂಬಂಧ ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಆತಂಕ ಮೂಡಿಸಿದೆ. ಕಳೆದ 5 ತಿಂಗಳಲ್ಲಿ ಬೆಂಗಳೂರಲ್ಲಿ ಬರೋಬ್ಬರಿ 9,763 ಪ್ರಕರಣಗಳು ಪತ್ತೆಯಾಗಿದ್ದು, ಕೇವಲ 1 ವಾರದಲ್ಲಿ 13,220 ನಾಯಿ ಕಡಿತಗಳು ರಾಜ್ಯದಲ್ಲಿ ವರದಿಯಾಗಿವೆ. ನಾಯಿಗಳ ದಾಳಿಯಿಂದ ಕಳೆದ ವಾರ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಜನವರಿಯಿಂದ ಇಲ್ಲಿಯವರೆಗೆ ಬರೊಬ್ಬರಿ 2,66,367 ಜನರಿಗೆ ರಾಜ್ಯದಲ್ಲಿ ನಾಯಿ ಕಚ್ಚಿದ್ದು ಒಟ್ಟು 30 ಜನರು ಮೃತಪಟ್ಟಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರು ಸೇರಿ ರಾಜ್ಯಾದ್ಯಂತ ನಾಯಿಗಳ ಅಟ್ಟಹಾಸ
  • 5 ತಿಂಗಳಲ್ಲಿ ಬೆಂಗಳೂರಲ್ಲಿ 9,763 ನಾಯಿ ಕಡಿತ ಪ್ರಕರಣ
  • ಕೇವಲ 1 ವಾರದಲ್ಲಿ ರಾಜ್ಯದಲ್ಲಿ 13,220 ನಾಯಿ ಕಡಿತ ಕೇಸ್​

ಇದನ್ನೂ ಓದಿ: ಒಂದೇ ತಿಂಗಳಲ್ಲಿ ಸಾವಿರಾರು ಜನರಿಗೆ ನಾಯಿ ಕಡಿತ; ಕಾಫಿನಾಡಿನಲ್ಲಿ ರಸ್ತೆಗಿಳಿಯಲೂ ಭಯಪಡುತ್ತಿರುವ ಜನರು!

ಕಳೆದ 5 ತಿಂಗಳ ಬೆಂಗಳೂರಿನ ಅಂಕಿ-ಅಂಶ

ವಲಯ ಪ್ರಕರಣಗಳು
ಆನೇಕಲ್ 982
ಪೂರ್ವ ವಲಯ 2909
ಉತ್ತರ ವಲಯ 2569
ದಕ್ಷಿಣ ವಲಯ 3303

ಬೆಂಗಳೂರಿನ ಸೌತ್ ಝೋನ್​​ನಲ್ಲಿ ಅತಿ ಹೆಚ್ಚು ನಾಯಿ ಕಡಿತ ಪ್ರಕರಣ ದಾಖಲಾಗಿದ್ದು, ಕಳೆದ 5 ತಿಂಗಳಿನಲ್ಲಿ 3,303 ಪ್ರಕರಣಗಳು ಪತ್ತೆಯಾಗಿವೆ. ಕೆಸಿ ಜನರಲ್ ಆಸ್ಪತ್ರೆ ಸೇರಿದಂತೆ ಅನೇಕ ಕಡೆಗಳಲ್ಲಿ ಡಾಗ್ ಬೈಟ್ ವ್ಯಾಕ್ಸಿನ್​​ಗೆ ಬೇಡಿಕೆ ಹೆಚ್ಚಿದ್ದು, ದಿನಕ್ಕೆ 60-70 ಜನರಿಗೆ ಡಾಗ್ ಬೈಟ್ ವ್ಯಾಕ್ಸಿನ್ ನೀಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಆ್ಯಂಟಿ ರೇಬಿಸ್ ವ್ಯಾಕ್ಸಿನ್​​ನ ಶೇಖರಣೆಗೆ ಸರ್ಕಾರಿ ಆಸ್ಪತ್ರೆಗಳು ಮುಂದಾಗಿವೆ. ನಾಯಿ ಕಚ್ಚಿದರೆ ನಿರ್ಲಕ್ಷ್ಯ ಮಾಡದೆ ಕೂಡಲೇ ವ್ಯಾಕ್ಸಿನ್ ಪಡೆಯಿರಿ ಎಂದು ವೈದ್ಯರು ಕೂಡ ಸಲಹೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Vinay Kashappanavar

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Follow Us