ಶಿವರಾಮ ಕಾರಂತ ಬಡಾವಣೆ ನಿವಾಸಿಗಳಿಗೆ ಬಿಗ್ ರಿಲೀಫ್; ಅಕ್ರಮ‌ ಕಟ್ಟಡಗಳನ್ನು ಸಕ್ರಮ ಮಾಡಿದ ಸುಪ್ರೀಂ ಕೋರ್ಟ್

ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸದಂತೆ ಜಸ್ಟೀಸ್ ಚಂದ್ರಶೇಖರ್ ಮುಂದಾಳತ್ವದಲ್ಲಿ ಕಮಿಟಿ ರಚನೆ ಮಾಡಿದ್ದು, ಕಟ್ಟಡಗಳನ್ನು ಉಳಿಸಲು ಸುಪ್ರೀಂ ಕೋರ್ಟ್‌ಗೆ  ವರದಿ  ಸಲ್ಲಿಸಿತ್ತು. ಆ ಪ್ರಕಾರ ಮೊದಲ ಹಂತವಾಗಿ 300 ಕಟ್ಟಡಗಳಿಗೆ ಬಿಡುಗಡೆ ದೊರೆತಿದೆ.

ಶಿವರಾಮ ಕಾರಂತ ಬಡಾವಣೆ ನಿವಾಸಿಗಳಿಗೆ ಬಿಗ್ ರಿಲೀಫ್; ಅಕ್ರಮ‌ ಕಟ್ಟಡಗಳನ್ನು ಸಕ್ರಮ ಮಾಡಿದ ಸುಪ್ರೀಂ ಕೋರ್ಟ್
ಶಿವರಾಮ ಕಾರಂತ ಬಡಾವಣೆ
Follow us
TV9 Web
| Updated By: preethi shettigar

Updated on:Nov 27, 2021 | 11:58 AM

ಬೆಂಗಳೂರು: ನಗರದ ಶಿವರಾಮ ಕಾರಂತ ಬಡಾವಣೆಯಲ್ಲಿ 6,500ಕ್ಕೂ ಅಧಿಕ ಅಕ್ರಮ ಕಟ್ಟಡಗಳನ್ನು ಗುರುತು ಮಾಡಿ ತೆರವುಗೊಳಿಸಲು ಬಿಡಿಎ ಮುಂದಾಗಿತ್ತು. ಹೀಗಾಗಿ ನಿವಾಸಿಗಳು ಮನೆ ಕಳೆದುಕೊಳ್ಳುವ ಭೀತಿಯಲ್ಲಿದ್ದರು. ಆದರೆ ಇದೀಗ ಶಿವರಾಮ ಕಾರಂತ ಬಡಾವಣೆ ನಿವಾಸಿಗಳಿಗೆ ಆತಂಕದಿಂದ ಬಿಡುಗಡೆ ದೊರತಿದೆ. ಇದಕ್ಕೆ ಕಾರಣ ಸುಪ್ರೀಂ ಕೋರ್ಟ್ (Supreme Court) ಅಕ್ರಮ‌ ಕಟ್ಟಡಗಳನ್ನು ಸಕ್ರಮ ಮಾಡಿದೆ. ಶಿವರಾಮ ಕಾರಂತ ಬಡಾವಣೆಗೆ (Sivaram karanth layout) ಸಂಬಂಧಿಸದಂತೆ ಜಸ್ಟೀಸ್ ಚಂದ್ರಶೇಖರ್ ಮುಂದಾಳತ್ವದಲ್ಲಿ ಕಮಿಟಿ ರಚನೆ ಮಾಡಿದ್ದು, ಕಟ್ಟಡಗಳನ್ನು ಉಳಿಸಲು ಸುಪ್ರೀಂ ಕೋರ್ಟ್‌ಗೆ  ವರದಿ  ಸಲ್ಲಿಸಿತ್ತು. ಆ ಪ್ರಕಾರ ಮೊದಲ ಹಂತವಾಗಿ 300 ಕಟ್ಟಡಗಳಿಗೆ ಬಿಡುಗಡೆ ದೊರೆತಿದೆ. ಇದೀಗ ಅಕ್ರಮ‌ ಕಟ್ಟಡ ಸಕ್ರಮಗೊಳಿಸಲು ಬಿಡಿಎ ಮುಂದಾಗಿದೆ. ಮುಂದಿನ ಹಂತದಲ್ಲಿ ಶಿವರಾಮ್ ಕಾರಂತ ಬಡಾವಣೆಯ ಕಟ್ಟಡ ಮಾಲೀಕರಿಗೆ ರಿಲೀಫ್ ನೀಡುವ ಸಾಧ್ಯತೆ ಇದೆ.

ಈ ಹಿಂದೆ ಮನೆ ತೆರವು ಆತಂಕದಲ್ಲಿದ್ದ ಶಿವರಾಮ ಕಾರಂತ ಬಡಾವಣೆಯ ಜನ ಇತ್ತೀಚೆಗೆ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಕಾರ್ಯ ಭರದಿಂದ ನಡೆಯುತ್ತಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು, ಮನೆ, ಅಂಗಡಿಮುಂಗಟ್ಟುಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಹೀಗಿರುವಾಗಲೇ ಬೆಂಗಳೂರು ನಗರದ ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಂಡ ಜನರು ಆತಂಕಕ್ಕೆ ಸಿಲುಕಿದ್ದಾರೆ. ಇದಕ್ಕೆ ಕಾರಣ ಯಾವಾಗ ಬಿಡಿಎ ಮನೆ ತೆರವು ಮಾಡುತ್ತದೆಯೋ ಎಂಬುವುದೆ ಆಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಯಾವುದೇ ಮಾಹಿತಿ ನೀಡದೆ ಕಳೆದ ತಿಂಗಳು ಏಕಾಏಕಿ ಸುಮಾರು 22ಕ್ಕೂ ಹೆಚ್ಚು ಮನೆಗಳನ್ನು ನೆಲಸಮ ಮಾಡಿತ್ತು. ಹೀಗಾಗಿ ಸುಮಾರು 800 ಮನೆಗಳ ನಿವಾಸಿಗಳು ಮನೆ ಕಳೆದುಕೊಳ್ಳುವ ಆತಂಕದಲ್ಲೇ ಕೆಲಸಗಳಿಗೂ ಹೋಗದೆ ಮನೆಯಲ್ಲೇ ಉಳಿದಿದ್ದಾರೆ.

ಮನೆಯಲ್ಲಿ ಇಲ್ಲದ ವೇಳೆ ಅಧಿಕಾರಿಗಳು ಬಂದು ತೆರವು ಕಾರ್ಯ ಆರಂಭಿಸಿದರೆ ಎಂಬ ಭೀತಿ ಈ ಭಾಗದ ಜನರನ್ನು ಕಾಡುತ್ತಿದೆ. ಇನ್ನು ಈ ಭಯದಿಂದ ಮುಕ್ತಿ ಸಿಗಲಿ ಎಂಬ ಕಾರಣಕ್ಕೆ ಕೆಲವರು ಕ್ಷೇತ್ರದ ಶಾಸಕರು, ಸಂಸದರ ಬಳಿ ದಾಖಲೆಗಳನ್ನು ಹೊತ್ತು ನ್ಯಾಯಕ್ಕಾಗಿ ಅಲೆಯುತ್ತಿದ್ದಾರೆ. ಆದರೆ ಯಾವುದಕ್ಕೂ ಅಂತಿಮ ಎಂಬುವುದು ಇಲ್ಲದಾಗಿತ್ತು.

ಇನ್ನು ಈ ಭಾಗದ ರೈತರು ಕೂಡ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ರೈತರ ಭೂಮಿಯನ್ನು ಬಿಡಿಎ ಈ ಹಿಂದೆ ಗುರುತಿಸಿತು. ಆದರೆ ರೈತರಿಗೆ ಬಿಡಿಎ ಹಣವೂ ಕೊಡದೆ, ಇತ್ತ ರೈತರ ಭೂಮಿಯಲ್ಲಿ ಕೃಷಿಯನ್ನೂ ಮಾಡಲು ಬಿಡದೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಮುಖ್ಯವಾಗಿ ಬಡಾವಣೆ ನಿರ್ಮಾಣದ ವಾಸ್ತವ ಸ್ಥಿತಿಯನ್ನು ಇಲ್ಲಿ ಬಿಡಿಎ ಮರೆಮಾಚಿದೆ ಎಂಬ ಆರೋಪ ಕೇಳಿ ಬಂದಿದೆ.

ಸುಪ್ರೀಂ ಕೋರ್ಟ್‌ನ ಪೀಠವು ಈ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರ ಹಾಗೂ ಬಿಡಿಎಗೆ 2018ರ ಆಗಸ್ಟ್‌ 3 ರಂದು ನಿರ್ದೇಶನ ನೀಡಿತ್ತು. ಮೂರು ತಿಂಗಳ ಒಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಜತೆಗೆ ಅಲ್ಲಿ ಯಾವುದೇ ಕಾಮಗಾರಿ ನಡೆಸಬಾರದು ಎಂದು ನಿರ್ದೇಶಿಸಿತ್ತು.ಆದರೆ ಈಗ ಇದೆಲ್ಲದಕ್ಕೂ ತೆರೆ ಬಿದ್ದಂತಾಗಿದೆ.

ಇದನ್ನೂ ಓದಿ: ಮನೆ ತೆರವು ಆತಂಕದಲ್ಲಿ ಶಿವರಾಮ ಕಾರಂತ ಬಡಾವಣೆಯ ಜನ; 800 ಮನೆಗಳಲ್ಲಿ ನೀರವ ಮೌನ

ಡಾ.ಶಿವರಾಮ ಕಾರಂತ ಬಡಾವಣೆ ಭೂಸ್ವಾಧೀನ; ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ, ಸ್ಥಳೀಯರ ಆಕ್ರೋಶ

Published On - 11:57 am, Sat, 27 November 21