ಪತ್ನಿಗೆ ಕುಡಿತದ ಚಟ ಬಿಡಿಸಲು ರಿಹ್ಯಾಬ್​​ ಕೇಂದ್ರಕ್ಕೆ ಸೇರಿಸಿದ ಗಂಡ: ಹೆಂಡತಿ ಕೆಲಸಗಾರನ ಜೊತೆ ಓಡಿಹೋದಳು!

ಗಂಡನ ಕುಡಿತ ಬಿಡಿಸಲು ಹೆಂಡತಿ ಪರದಾಡುವುದನ್ನ ನೋಡಿದ್ದೇವೆ. ಆದರೆ, ಇಲ್ಲಿ ಪತ್ನಿಯ ಕುಡಿತದ ಚಟ ಬಿಡಿಸುವ ಸಲುವಾಗಿ ರಿಹ್ಯಾಬ್​​ ಕೇಂದ್ರಕ್ಕೆ ಪತಿಯೇ ಸೇರಿಸಿದ್ದು, ದುರಂತ ಎಂಬಂತೆ ರಿಹ್ಯಾಬ್​​ ಕೇಂದ್ರದ ಕೆಲಸಗಾರನ ಜೊತೆಯೇ ಹೆಂಡತಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಬಳಿಯ ಮಂಜುನಾಥನಗರದಲ್ಲಿ ನಡೆದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಪತ್ನಿಗೆ ಕುಡಿತದ ಚಟ ಬಿಡಿಸಲು ರಿಹ್ಯಾಬ್​​ ಕೇಂದ್ರಕ್ಕೆ ಸೇರಿಸಿದ ಗಂಡ: ಹೆಂಡತಿ ಕೆಲಸಗಾರನ ಜೊತೆ ಓಡಿಹೋದಳು!
ಗಂಡ-ಹೆಂಡತಿ
ಬಿ ಮೂರ್ತಿ, ನೆಲಮಂಗಲ Edited By: ಕಿರಣ್ ಹನುಮಂತ್​ ಮಾದಾರ್

Updated on: Aug 24, 2024 | 5:28 PM

ಬೆಂಗಳೂರು, ಆ.24: ಪತ್ನಿಯ ಕುಡಿತದ ಚಟ ಬಿಡಿಸುವ ಸಲುವಾಗಿ ಪತ್ನಿಯನ್ನ ರಿಹ್ಯಾಬ್​​ ಕೇಂದ್ರಕ್ಕೆ ಪತಿ ಸೇರಿಸಿದ್ದ. ಆದರೆ, ರಿಹ್ಯಾಬ್​​ ಕೇಂದ್ರದ ಕೆಲಸಗಾರನ ಜೊತೆಯೇ ಹೆಂಡತಿ ಪರಾರಿಯಾಗಿದ್ದಾಳೆ. ಹೌದು, ಈ ಘಟನೆ ಬೆಂಗಳೂರಿನ ಬಾಗಲಗುಂಟೆ ಬಳಿಯ ಮಂಜುನಾಥನಗರದಲ್ಲಿ ನಡೆದಿದೆ. ಕೆಲಸ ಮಾಡುತ್ತಿದ್ದ ಸುನೀಲ್ ಎಂಬಾತನ ಜೊತೆ ಪರಾರಿಯಾಗಿದ್ದಾರೆ ಎಂದು  ಪತಿ ಗಂಗರಾಜು ಆರೋಪಿಸಿದ್ದು, ‘ನನ್ನ ಪತ್ನಿಯನ್ನು ಹುಡುಕಿ ಕೊಡಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

11 ವರ್ಷದ ಮಗನನ್ನು ಬಿಟ್ಟು ಹೋಗಿರುವ ಮಹಿಳೆ; ಆಗಿದ್ದೇನು?

ನೆಲಮಂಗಲ ತಾಲ್ಲೂಕಿನ ದಿಣ್ಣೆಪಾಳ್ಯ ಗ್ರಾಮದ ದಂಪತಿಯಾದ ಇವರು, 13 ವರ್ಷಗಳ ಹಿಂದೆ ಮದುವೆಯಾಗಿದ್ದ ಬೆಂಗಳೂರಿನ ಬಾಗಲಗುಂಟೆ ಬಳಿಯ ಮಂಜುನಾಥನಗರದಲ್ಲಿರು. ಇದೀಗ 11 ವರ್ಷದ ಮಗನನ್ನ ಬಿಟ್ಟು ಹೋಗಿದ್ದಾಳೆ. ವಿಪರೀತ ಕುಡಿತ ಹಿನ್ನೆಲೆ ಬಿಡಿಸುವ ಸಲುವಾಗಿ ಶ್ರೀ ಸಾಯಿ ಫೌಂಡೇಶನ್ ಹೆಸರಿನ ರಿಹ್ಯಾಬ್​​ ಕೇಂದ್ರಕ್ಕೆ ಮೇ4 ರಂದು ಸೇರಿಸಿದ್ದ ಪತಿ, ಬಳಿಕ ಆಗಸ್ಟ್ 10ನೇ ತಾರೀಖು ಮನೆಗೆ ಪತ್ನಿಯನ್ನ ಕರೆದುಕೊಂಡು ಬಂದಿದ್ದ. ನಂತರ 22ನೇ ತಾರೀಖು ಮಗನ ಪಿಜಿಯಲ್ಲಿ ಇರುವುದಾಗಿ ಹೇಳಿ ಹೋದವಳು ನಾಪತ್ತೆಯಾಗಿದ್ದಾಳೆ.

ಇದನ್ನೂ ಓದಿ:ನೆಲಮಂಗಲ: ಯುವತಿಯ ಎದೆ ಭಾಗ ಮುಟ್ಟಿ ಪರಾರಿಯಾಗಿದ್ದ ಆರೋಪಿ ಬಂಧನ

ಪತ್ನಿ ಹುಡುಕಿಕೊಡುವಂತೆ ಪತಿ ಮನವಿ

ಇನ್ನು ಪತಿ ಗಂಗರಾಜ್ ಬಿಎಂಟಿಸಿ ಕಂಡಕ್ಟರ್ ಆಗಿದ್ದ. ಎಂದಿನಂತೆ ಕರ್ತವ್ಯ ಮುಗಿಸಿ ಮನೆಗೆ ಬಂದು ನೋಡಿದಾಗ ಪತ್ನಿ
ನಾಪತ್ತೆಯಾಗಿದ್ದಾಳೆ. ಇದೀಗ ರಿಹ್ಯಾಬ್​​ ಕೇಂದ್ರದ ಕೆಲಸಗಾರ ಸುನೀಲ್ ಎಂಬಾತನ ಜೊತೆಯೇ ಹೋಗಿದ್ದಾಳೆ ಎಂದು ಅರೋಪಿಸಿ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ದಾಖಲಿಸಿ, ಪತ್ನಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Loading...
Unable to load recommendations.
Follow Us