ಬೆಂಗಳೂರಿನ ಪ್ರತಿಷ್ಟಿತ ಶಾಲೆಯಲ್ಲಿ ಕಳ್ಳತನ; ಸ್ಕೂಲ್​ನ ಕ್ವಾಟ್ರಸ್​ಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿ

ಹೊಸ ವರ್ಷಕ್ಕೆ ಶಿಕ್ಷಕಿ ತವರಿಗೆ ಹೋಗಿ ಬಂದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ಸರ್ಜಾಪುರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಪ್ರತಿಷ್ಟಿತ ಶಾಲೆಯಲ್ಲಿ ಕಳ್ಳತನ; ಸ್ಕೂಲ್​ನ ಕ್ವಾಟ್ರಸ್​ಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿ
ಟಿಬಿಎಸ್​ ಶಾಲೆ
Follow us
TV9 Web
| Updated By: preethi shettigar

Updated on:Jan 05, 2022 | 12:24 PM

ಬೆಂಗಳೂರು: ರಾತ್ರಿ ವೇಳೆ ಶಾಲೆಯ (School) ಕ್ವಾಟ್ರಸ್​ಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಬೆಂಗಳೂರಿನ ದೊಮ್ಮಲೂರು ಬಳಿಯ ಟಿಐಬಿಎಸ್​ (TIBS) ಶಾಲೆಯಲ್ಲಿ ನಡೆದಿದೆ. ಕಳ್ಳರು ಚಿನ್ನಾಭರಣ ದೋಚುವ ಜೊತೆಗೆ ಅಶ್ಲೀಲ ಚಿತ್ರಗಳನ್ನು ಬರೆದು ವಿಕೃತಿ ಮೆರೆದಿದ್ದಾರೆ. ಜನವರಿ 2ನೇ ತಾರಿಕು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೇರಳ ಮೂಲದ ಶಿಕ್ಷಕಿ (Teacher) ವಾಸವಿದ್ದ ಫ್ಲಾಟ್​ನಲ್ಲಿ ಕಳ್ಳತನ ಮಾಡಲಾಗಿದೆ. ಕಳ್ಳರು 120 ಗ್ರಾಂ ಚಿನ್ನ, ಮೊಬೈಲ್ ಮತ್ತು ನಗದು ಹೊತ್ತೋಯ್ದಿದ್ದಾರೆ.

ಕಳ್ಳತನ ಮಾಡಿದ್ದು, ಈ ವೇಳೆ ಮನೆಯಲ್ಲಿದ್ದ ಗೊಂಬೆ ಮೇಲು ವಿಕೃತಿ ಮೆರೆದು ಬರಹ ಬರೆದಿದ್ದಾರೆ. ಪ್ರತಿಷ್ಟಿತ ಶಾಲೆಯಲ್ಲಿ ನಡೆದ ವಿಕೃತ ಕಳ್ಳತನದಿಂದ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಹೊಸ ವರ್ಷಕ್ಕೆ ಶಿಕ್ಷಕಿ ತವರಿಗೆ ಹೋಗಿ ಬಂದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ಸರ್ಜಾಪುರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ದೇವನಹಳ್ಳಿ: ಏರ್ಪೋಟ್​ಗೆ ಬಂದ ಪ್ಲೈಟ್​ನಲ್ಲಿ ಪತ್ತೆಯಾಯ್ತು ಕೋಟಿ ಮೌಲ್ಯದ ಚಿನ್ನ ಅಕ್ರಮವಾಗಿ ಸಾಗಿಸುತ್ತಿದ್ದ 2.8 ಕೆಜಿ ಚಿನ್ನವನ್ನು ವಶಪಡಿಸಿಕೊಂಡ ಘಟನೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಏರ್ಪೋಟ್​ಗೆ ಬಂದ ವಿಮಾನದಲ್ಲಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಚಿನ್ನ ಪತ್ತೆಯಾಗಿದೆ.  ವಿಮಾನದ ಸೀಟ್​ ಕೆಳಗಡೆ ಚಿನ್ನವನ್ನು ಅಡಗಿಸಿಟ್ಟು ಕಳ್ಳ ಸಾಗಣಿಕೆ ಮಾಡುತ್ತಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ದುಬೈನಿಂದ ಬಂದ ಇಂಡಿಗೋ ವಿಮಾನದ ಸೀಟ್ ಕೆಳಗಡೆ ಬಿಸ್ಕೆಟ್ ರೂಪದಲ್ಲಿ ಚಿನ್ನವನ್ನು ಅಡಗಿಸಿಟ್ಟು ತರಲಾಗಿತ್ತು.

ಸ್ಮಗ್ಲರ್ಸ್ 24 ಬಿಸ್ಕೆಟ್​ಗಳಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದರು. ಪ್ಲೈಟ್ ಚೆಕಿಂಗ್ ವೇಳೆ ಚಿನ್ನ ಪತ್ತೆಯಾಗಿದೆ. ಸದ್ಯ ಚಿನ್ನವನ್ನು ವಶಕ್ಕೆ ಪಡೆದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆಗೆ ಭಯಪಟ್ಟು ಸೀಟ್ ಕೆಳಗಡೆ ಚಿನ್ನ ಅಡಗಿಸಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸೀಟ್​ನಲ್ಲಿ ಕುಳಿತಿದ್ದ ಪ್ರಯಾಣಿಕ ಲಿಸ್ಟ್ ಪಡೆದು ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.

ತುಮಕೂರು: ಗಣಿಗಾರಿಕೆಯಿಂದ ಕೋಳಘಟ್ಟ ಗ್ರಾಮಸ್ಥರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಜಿಲ್ಲೆಯ ತುರುವೇಕೆರೆ ತಾಲೂಕಿನ ಕೋಳಘಟ್ಟದ ಗಣಿಗಾರಿಕೆಯಿಂದ ಕೋಳಘಟ್ಟ ಗ್ರಾಮಸ್ಥರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ವಿಶ್ವ ಎಂಟರ್‌ಪ್ರೈಸಸ್‌ ಕ್ರಷರ್‌ ನಿಲ್ಲಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ. 400 ಮೀಟರ್ ದೂರದಲ್ಲಿರುವ ಗ್ರಾಮಗಳಿಗೆ ಗಣಿಗಾರಿಕೆಯಿಂದ ತೊಂದರೆಯಾಗಿದ್ದು, ಕುಡಿಯುವ ನೀರು, ಗಾಳಿ ಕಲುಷಿತವಾಗಿದೆ. ಕ್ರಷರ್‌ನಿಂದಾಗಿ ನಮಗೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಬ್ಲಾಸ್ಟ್‌ನಿಂದ ಗ್ರಾಮದ ಮನೆಗಳಲ್ಲಿ ಬಿರುಕುಬಿಟ್ಟಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ತೆಂಗಿನಕಾಯಿ ಕಳ್ಳತನ ಮಾಡಿದ ಆರೋಪ; ತುಮಕೂರಿನಲ್ಲಿ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿಹಾಕಿ ಥಳಿತ

53 ಬೈಕ್​ ಕಳ್ಳತನ! ಮನೆಯಲ್ಲೇ ನಕಲಿ ದಾಖಲೆ ಸೃಷ್ಟಿ ಮಾಡ್ತಿದ್ದ ವಿದ್ಯಾರಣ್ಯಪುರ ಕಾನ್ಸ್​​ಟೇಬಲ್ ಹೊನ್ನಪ್ಪನ ಇಡೀ ಜಾತಕ ಇಲ್ಲಿದೆ

Published On - 9:56 am, Wed, 5 January 22

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ