Tumakur Accident: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಕಳ್ಳಂಬೆಳ್ಳ ಬಳಿ ಭೀಕರ ಅಪಘಾತದಲ್ಲಿ 9 ಜನರ ದುರ್ಮರಣ ಹಿನ್ನೆಲೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.
ಬೆಂಗಳೂರು: ಕಳ್ಳಂಬೆಳ್ಳ ಬಳಿ ಭೀಕರ ಅಪಘಾತದಲ್ಲಿ 9 ಜನರ ದುರ್ಮರಣ ಹಿನ್ನೆಲೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ತುಮಕೂರಿನ ಅಪಘಾತ ಸಾಕಷ್ಟು ದಿಗ್ಭ್ರಮೆ ಮೂಡಿಸಿದೆ. ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಹೀಗಾಗಿ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನಗದರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಭೀಕರ ಅಪಘಾತದಲ್ಲಿ ಸಾವಿಗೀಡಾಗಿ ಹಲವರು ಗಾಯಗೊಂಡಿರುವ ವಿಷಯ ತಿಳಿದು ತೀವ್ರ ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಕೂಡ ಸೂಚಿಸಿದ್ದಾರೆ.
ಘಟನೆ ಹಿನ್ನೆಲೆ:
ಕ್ರೂಸರ್ ಓವರ್ ಟೇಕ್ ಮಾಡಲು ಹೋಗಿ ಲಾರಿ ಡಿಕ್ಕಿಯಾಗಿ ಒಟ್ಟು 9 ಜನರು ಸಾವನ್ನಪ್ಪಿರುವಂತಹ ಘಟನೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಬೆಳಗಿನ ಜಾವ 4ಗಂಟೆ ಸುಮಾರಿಗೆ ನಡೆದಿದೆ. ಕ್ರೂಸರ್ನಲ್ಲಿ 20 ಜನರಿದ್ದು, ರಾಯಚೂರು ಜಿಲ್ಲೆಯರು ಎನ್ನಲಾಗುತ್ತಿದೆ. ಮೃತರಲ್ಲಿ ಮೂವರು ಮಹಿಳೆಯರು, ನಾಲ್ವರು ಪುರುಷರು, ಇಬ್ಬರು ಮಕ್ಕಳು ಸೇರಿ ಒಟ್ಟು 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 11 ಜನ ಗಾಯಾಳುಗಳನ್ನ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತರ ಹೆಸರು ಊರಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಬರುವ ಬಡ ಕಾರ್ಮಿಕರು ಕ್ರೂಸರ್ಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಕಳ್ಳಂಬೆಳ್ಳ ಚೆಕ್ಪೋಸ್ಟ್ ಹಾಗೂ ಟೋಲ್ ಬಳಿ ಪದೇಪದೆ ಇಂಥ ಅಪಘಾತಗಳು ಸಂಭವಿಸಿವೆ.
ಕೃಷಿ ಕೆಲಸಗಳಿದ್ದಾಗ ಹಳ್ಳಿಗಳಿಗೆ ಹಿಂದಿರುಗುವ ರೈತರು, ನಂತರ ಕ್ರೂಸರ್ಗಳ ಮೂಲಕ ಬೆಂಗಳೂರಿನ ಗುಡಿಸಲು, ಬಾಡಿಗೆ ಶೆಡ್, ಮನೆಗಳಿಗೆ ಹಿಂದಿರುಗುವುದು ವಾಡಿಕೆ. ಹಿಂದೊಮ್ಮೆ ಇಂಥ ಅಪಘಾತ ಸಂಭವಿಸಿದ್ದಾಗ ಜೋಳದ ಕಾಳುಗಳು ಶವದ ಮೇಲೆಲ್ಲಾ ಚೆಲ್ಲಾಡಿದ್ದನ್ನು ಕಂಡಿದ್ದ ದಾರಿಹೋಕರು ಕಣ್ಣೀರು ಮಿಡಿದಿದ್ದರು. ಈ ಮಾರ್ಗದಲ್ಲಿ ಬಸ್ಗಳು ಸಾಕಷ್ಟು ಪ್ರಮಾಣದಲ್ಲಿ ಇದ್ದರೂ, ತಮ್ಮ ಸಾಮಾನು ಹಾಗೂ ಬೇಕಿರುವ ಸ್ಥಳಕ್ಕೆ ತಲುಪುವುದು ಸುಲಭ ಎನ್ನುವ ಕಾರಣಕ್ಕೆ ಕ್ರೂಸರ್ಗಳನ್ನೇ ಬಡ ಕಾರ್ಮಿಕರು ಅವಲಂಬಿಸಿದ್ದಾರೆ.
ಅಪಘಾತ ನಡೆದಿದ್ದೇಗೆ?
ರಾಯಚೂರು ಜಿಲ್ಲೆಯಿಂದ ನಿನ್ನೆ 24 ಜನರು ಹೊರಟಿದ್ದು, ಮಾರ್ಗಮಧ್ಯದಲ್ಲಿ ಬೆಳಗಿನ ಜಾವ 4ಗಂಟೆ ಸುಮಾರಿಗೆ ಕ್ರೂಸರ್ ಚಾಲಕ ಲಾರಿವೊಂದನ್ನು ಓವರ್ ಟೇಕ್ ಮಾಡಲು ಹೋಗಿದ್ದು, ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸರ್ ವಾಹನದ ಟೈರ್ ಸ್ಫೋಟಗೊಂಡು ಡಿವೈಡರ್ಗೆ ಡಿಕ್ಕಿ ಹೊಡಿದಿದೆ. ಹುಬ್ಬಳ್ಳಿಯಿಂದ ತಮಿಳುನಾಡಿನ ಕೊಯಂಬತ್ತೂರಿಗೆ ಲಾರಿ ತೆರಳುತ್ತಿತ್ತು. ತಮಿಳುನಾಡಿನ ನೋಂದಣಿ ಸಂಖ್ಯೆಯನ್ನು ಲಾರಿ ಹೊಂದಿದೆ.
The accident in Tumakuru district, Karnataka is heart-rending. Condolences to the bereaved families. Prayers with the injured. Rs 2 lakh from PMNRF would be paid to the next of kin of each deceased. The injured would be paid Rs. 50,000: PM @narendramodi
— PMO India (@PMOIndia) August 25, 2022
ಧಾನಿ ಮೋದಿ ಸಂತಾಪ
ಘಟನೆ ಕುರಿತು ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ, ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:47 pm, Thu, 25 August 22