ಡಾ. ಪುನೀತ್ ರಾಜ್‍ಕುಮಾರ್​ ಅಭಿನಯದ ‘ಗಂಧದಗುಡಿ’ ಸಿನಿಮಾ ಟ್ರೈಲರ್​ಗೆ ಶುಭಕೋರಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 09, 2022 | 7:24 PM

ಇದು ಅಪ್ಪು ಅವರಿಗಿದ್ದ ಪರಿಸರದ ಬಗೆಗಿನ ವಿಶೇಷ ಕಾಳಜಿ ಹಾಗೂ ಪ್ರೀತಿಯನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಾ. ಪುನೀತ್ ರಾಜ್‍ಕುಮಾರ್​ ಅಭಿನಯದ ಗಂಧದಗುಡಿ ಸಿನಿಮಾ ಟ್ರೈಲರ್​ಗೆ ಶುಭಕೋರಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಗಂಧದಗುಡಿ ಟ್ರೈಲರ್ ಗೆ ಶುಭಕೋರಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Follow us on

ಬೆಂಗಳೂರು: ಕರ್ನಾಟಕ ರತ್ನ ಡಾ. ಪುನೀತ್ ರಾಜ್‍ಕುಮಾರ್​ ಅಭಿನಯನದ ಗಂಧದ ಗುಡಿ (Gandhada Gudi) ಸಿನಿಮಾಗೆ ಕೇಂದ್ರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಶುಭ ಕೋರಿದ್ದಾರೆ. ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಗಂಧದ ಗುಡಿ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಇದು ಅಪ್ಪು ಅವರಿಗಿದ್ದ ಪರಿಸರದ ಬಗೆಗಿನ ವಿಶೇಷ ಕಾಳಜಿ ಹಾಗೂ ಪ್ರೀತಿಯನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಪ್ಪು ಅವರ ಸಿನಿಮಾದ ಟ್ರೈಲರ್ ಕುರಿತಂತೆ ಟ್ವೀಟ್ ಮಾಡಿರುವ ಜೋಶಿ, ಗಂಧದ ಗುಡಿ ಚಿತ್ರ ಯಶಸ್ಸು ಕಾಣುವುದರಲ್ಲಿ ಹಾಗೂ ಚಿತ್ರ ಪ್ರೇಮಿಗಳ ಮನಸಿನಲ್ಲಿ‌ ವಿಶೇಷ ಸ್ಥಾನ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.‌

ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಈ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿ ಅವರಿಗೆ ಅಪ್ಪು ಅವರ ಮೇಲೆ, ಕನ್ನಡ ಭಾಷೆ, ಇಲ್ಲಿಯ ಸಂಸ್ಕೃತಿ, ಕಲೆ, ಕಲಾವಿದರು ಮತ್ತು ಕರ್ನಾಟಕದ ಮೇಲಿರುವ ಪ್ರೇಮವನ್ನು ತೋರುತ್ತದೆ. ಕರ್ನಾಟಕದ ಯುವರತ್ನ ಅಪ್ಪು ಅವರ ಗಂಧದ ಗುಡಿ ಸಿನಿಮಾಕ್ಕೆ ಶುಭ ಹಾರೈಸಿದ ಮೋದಿ ಅವರಿಗೂ ಪ್ರಲ್ಜಾದ್ ಜೋಶಿಯವರು ರಾಜ್ಯದ ಜನರ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಗಂಧದಗುಡಿ ಸಾಕ್ಷ್ಯಚಿತ್ರಕ್ಕೆ ಪ್ರಧಾನಿ ಮೋದಿ ಪ್ರಶಂಸೆ

ಅಪ್ಪು ಲಕ್ಷಾಂತರ ಜನರ ಮನಸ್ಸಿನಲ್ಲಿ ಬದುಕಿದ್ದಾರೆ. ಪುನೀತ್ ರಾಜ್​ಕುಮಾರ್​ ಒಬ್ಬ ತೇಜಸ್ಸಿನ ವ್ಯಕ್ತಿಯಾಗಿದ್ದರು. ಪುನೀತ್​ ರಾಜ್​ಕುಮಾರ್​ ಒಬ್ಬ ಅಪ್ರತಿಮ ಪ್ರತಿಭಾವಂತರು. ಗಂಧದಗುಡಿ ಸಾಕ್ಷ್ಯಚಿತ್ರ ಪ್ರಕೃತಿ ಮಾತೆಗೆ, ಪರಿಸರ ಸಂರಕ್ಷಣೆ, ಕರ್ನಾಟಕದ ನೈಸರ್ಗಿಕ ಸೌಂದರ್ಯಕ್ಕೆ ಗೌರವವಾಗಿದೆ. ಈ ಪ್ರಯತ್ನಕ್ಕೆ ನನ್ನ ಶುಭಾಶಯ ಎಂದು ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪುನೀತ್​ ಪತ್ನಿ ಅಶ್ವಿನಿ ಟ್ವೀಟ್​​ಗೆ ಪ್ರಧಾನಿ ಮೋದಿ ರಿಪ್ಲೇ ಮಾಡಿದ್ದು ಪ್ರಶಂಸಿಸಿದ್ದಾರೆ.

ಗಂಧದಗುಡಿ ಸಾಕ್ಷ್ಯಚಿತ್ರದ ಕುರಿತು ಸಿಎಂ ಬೊಮ್ಮಾಯಿ ಟ್ವೀಟ್

ಗಂಧದಗುಡಿಯಿಂದ ಅಪ್ಪು ನಮ್ಮೆಲ್ಲರ ಹೃದಯಕ್ಕೆ ಹತ್ತಿರ‌. ಗಂಧದಗುಡಿ ಕರ್ನಾಟಕದ ಆಸ್ತಿ, ಅಪ್ಪು ಗಂಧದಗುಡಿಯ ಆಸ್ತಿ. ಗಂಧದಗುಡಿ ನಮ್ಮನ್ನ ಹೊಸತೊಂದು ಲೋಕಕ್ಕೆ ಕರೆದೊಯ್ಯಲಿದೆ‌. ನಮ್ಮನ್ನ ಹೊಸ ಲೋಕಕ್ಕೆ ಕರೆದೊಯ್ಯುವ ಭರವಸೆ ಕಾಣುತ್ತಿದೆ. ಅಶ್ವಿನಿ ಹಾಗೂ ಪಿಆರ್​ಕೆ ಪ್ರೊಡಕ್ಷನ್​​ಗೆ ನನ್ನ ಅಭಿನಂದನೆಗಳು ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.