AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೊಮ್ಯಾಟೊ ಹಾಗೂ ಸ್ವಿಗ್ಗಿ ಬಳಸುವವರೇ ಈ ಸುದ್ದಿಯನೊಮ್ಮೆ ನೋಡಿ! ನಿಮ್ಮ ಪ್ರತಿ ಆರ್ಡರ್​ಗೂ ಪೋಲಾಗುತ್ತಿದೆ ಹಣ

ದರ್ಶಿನಿ, ಕೃಷ್ಣಭವನ ಸೇರಿದಂತೆ ಕಲೆ ಹೋಟೆಲ್ ನಲ್ಲಿ ಮಸಲಾ ದೋಸಾ 55 ರೂಪಾಯಿ ಇದ್ರೆ ಜೊಮ್ಯಾಟೊ ಹಾಗೂ ಸ್ವಿಗ್ಗಿ ನಲ್ಲಿ 100-110 ರೂಪಾಯಿ ಚಾರ್ಜ್ ಮಾಡ್ತಾಯಿದ್ದಾರೆ.

ಜೊಮ್ಯಾಟೊ ಹಾಗೂ ಸ್ವಿಗ್ಗಿ ಬಳಸುವವರೇ ಈ ಸುದ್ದಿಯನೊಮ್ಮೆ ನೋಡಿ! ನಿಮ್ಮ ಪ್ರತಿ ಆರ್ಡರ್​ಗೂ ಪೋಲಾಗುತ್ತಿದೆ ಹಣ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Oct 10, 2022 | 10:12 AM

Share

ಬೆಂಗಳೂರು: ಅನ್ ಲೈನ್ ಜೀವನಕ್ಕೆ ಹೊಂದಿಕೊಂಡಿರುವ ಜನರಿಂದ ಆ್ಯಪ್ ಆಧಾರಿತ ಕಂಪನಿಗಳು ಭಾರೀ ಹಣ ಲೂಟಿ ಹೊಡಿಯುತ್ತಿವೆ. ಜೊಮ್ಯಾಟೊ(Zomato) ಹಾಗೂ ಸ್ವಿಗ್ಗಿ(Swiggy) ಗ್ರಾಹಕರಿಂದ ಹಾಡಹಗಲೇ ಲೂಟಿ ಮಾಡ್ತಾಯಿದೆ.

ದರ್ಶಿನಿ, ಕೃಷ್ಣಭವನ ಸೇರಿದಂತೆ ಕಲೆ ಹೋಟೆಲ್ ನಲ್ಲಿ ಮಸಲಾ ದೋಸಾ 55 ರೂಪಾಯಿ ಇದ್ರೆ ಜೊಮ್ಯಾಟೊ ಹಾಗೂ ಸ್ವಿಗ್ಗಿ ನಲ್ಲಿ 100-110 ರೂಪಾಯಿ ಚಾರ್ಜ್ ಮಾಡ್ತಾಯಿದ್ದಾರೆ. ಹಾಗೂ ಸರ್ವಿಸ್ ಟ್ಯಾಕ್ಸ್ ಪ್ರತ್ಯೇಕವಾಗಿ ವಸೂಲಿ‌ ಮಾಡಲಾಗುತ್ತಿದೆ. ಜೊತೆಗೆ ಗವರ್ನಮೆಂಟ್ ಟ್ಯಾಕ್ಸ್ ಎಂದು ಬೇರೆ ಟ್ಯಾಕ್ಸ್ ಪಡೆಯುತ್ತಿದ್ದಾರೆ. ಜೊಮ್ಯಾಟೊ ಹಾಗೂ ಸ್ವಿಗ್ಗಿ ಹೋಟೆಲ್ ನ ದರಕ್ಕಿಂತ ಶೇ.40-45 ರಷ್ಟು ಅಧಿಕವಾಗಿ ಹಣ ಪಡೆಯುತ್ತಿದೆ. ಬೆಂಗಳೂರಿನಲ್ಲಿ ನಿತ್ಯ 30 ಲಕ್ಷ ಮಂದಿ ಜೊಮ್ಯಾಟೊ ಹಾಗೂ ಸ್ವಿಗ್ಗಿ ಬಳಕೆ ಮಾಡ್ತಿದ್ದಾರೆ. ಒಬ್ಬ ಗ್ರಾಹಕರಿಂದ ಶೇ.40 ರಷ್ಟು ಅಂದ್ರೆ ನಿತ್ಯ 30 ಲಕ್ಷ ಗ್ರಾಹಕರಿಂದ 12 ಕೋಟಿ ರೂಪಾಯಿಯನ್ನ ಹೆಚ್ಚುವರಿಯಾಗಿ ಕೊಳ್ಳೆಹೊಡೆಯಲಾಗುತ್ತಿದೆ. ಮತ್ತೊಂದು ಕಡೆ ಟ್ಯಾಕ್ಸ್ ಪಡೆಯುತ್ತಿದ್ದ ಸರ್ಕಾರಕ್ಕೆ ಒಂದು ರೂಪಾಯಿ ಕೂಡಾ ಸಂಧಾನ ಆಗ್ತಿಲ್ಲ. ಡಿಲೆವರಿ ಚಾರ್ಜ್ ಅನ್ನ ಪ್ರತ್ಯೇಕವಾಗಿ ಪಡೆಯುತ್ತಿದೆ. ಒನ್ ಟು ಡಬಲ್ ದರದ ಬಗ್ಗೆ ಹೋಟೆಲ್‌ ನವರಿಗೆ ಗೊತ್ತಿದ್ದು, ಸುಮ್ಮನೆ ಇರುವ ಸ್ಥಿತಿ ನಿರ್ಮಾಣ ಆಗಿದೆ. ಇದನ್ನೂ ಓದಿ: Filmfare Awards: ಧನಂಜಯ್​, ಯಜ್ಞಾ ಶೆಟ್ಟಿಗೆ ಅತ್ಯುತ್ತಮ ನಟ-ನಟಿ ಫಿಲ್ಮ್​ಫೇರ್​ ಗರಿ; ಪುನೀತ್​ಗೆ ಜೀವಮಾನ ಸಾಧನೆ ಪ್ರಶಸ್ತಿ

ಓಲಾ-ಉಬರ್ ಆಟೋ ಸೇವೆಯೇ ಅಕ್ರಮ: ನೋಟಿಸ್ ಕೊಟ್ಟು ಮೂರು ದಿನವಾದ್ರು ಪ್ರತಿಕ್ರಿಯೆ ನೀಡದ ಕಂಪನಿಗಳು

ಬೆಂಗಳೂರು: ಬೆಂಗಳೂರಿನಲ್ಲಿ ಆಟೋ ಸೇವೆಗೆ ಮೀಡಿಯೇಟರ್ ಆಗಿರುವ ಓಲಾ-ಉಬರ್ ಸಂಸ್ಥೆಗಳು ಪ್ಲಾಟ್​ಫಾರ್ಮ್ ಹೆಸ್ರಲ್ಲಿ ಗ್ರಾಹಕರ ಬಳಿ ಸುಲಿಗೆ ಮಾಡ್ತಿವೆ. ಸ್ವತಃ ಸಾರಿಗೆ ಇಲಾಖೆಯೇ ಆನ್​ಲೈನ್ ಆಟೋ ಸೇವೆ ಅಕ್ರಮ ಅಂತ ಹೇಳಿದೆ. ತಮ್ಮ ಸೇವೆ ನಿಲ್ಲಿಸುವಂತೆ ತಾಕೀತು ಮಾಡಿ ನೋಟಿಸ್ ನೀಡಿದೆ. ಆದ್ರೆ ಓಲಾ, ಉಬರ್ ಸಂಸ್ಥೆಗಳು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಡೋಂಟ್ ಕೇರ್ ಅಂತಿವೆ.

ಓಲಾ, ಉಬರ್, ರಾಪಿಡೋ ವಿರುದ್ಧ ಸಾಲು ಸಾಲು ದೂರುಗಳು ಕೇಳಿ ಬರ್ತಿವೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಇಷ್ಟು ವರ್ಷ ಸುಮ್ಮನೆ ಕುಳಿತಿದ್ದ ಅಧಿಕಾರಿಗಳು ಈಗ, ನಾವು ಕ್ಯಾಬ್ ಸೇವೆಗೆ ಮಾತ್ರ ಅನುಮತಿ ಕೊಟ್ಟಿರೋದು. ಆಟೋ ಸೇವೆ ನಿಲ್ಲಿಸಿ ಅಂತ ಓಲಾ, ಉಬರ್, ರ್ಯಾಪಿಡೋಗೆ ನೋಟಿಸ್ ನೀಡಿ 3 ದಿನ ಗಡುವು ನೀಡಿತ್ತು. ಆದ್ರೆ ಕೊಟ್ಟ ಕಾಲಾವಕಾಶ ಮುಗಿದ್ರೂ ಅಧಿಕಾರಿಗಳು ಯಾವುದೇ ನಿರ್ದಾಕ್ಷೀಣ್ಯ ಕ್ರಮ ಕೈಗೊಂಡಿಲ್ಲ.

ಓಲಾ, ಉಬರ್​ ಕಂಪನಿಗಳು ಕ್ಯಾಬ್ ಅಗ್ರಿಗೇಟರ್ ಪರವಾನಗಿ ಮಾತ್ರ ಹೊಂದಿವೆ. ಆದ್ರೆ ನಿಯಮ ಗಾಳಿಗೆ ತೂರಿ ಟ್ಯಾಕ್ಸಿ ಜೊತೆ ಆಟೋ ಸೇವೆ ನೀಡ್ತಿದೆ. ಸರ್ಕಾರ ಆಟೋ ಪ್ರಯಾಣಕ್ಕೆ ದರ ನಿಗದಿ ಮಾಡಿದೆ. ಆಟೋರಿಕ್ಷಾಗಳಿಗೆ ಮೊದಲ 2 ಕಿ.ಮೀ.ಗಳಿಗೆ 30 ರೂಪಾಯಿ, 2 ಕಿಲೋ ಮೀಟರ್ ಬಳಿಕ ಪ್ರತಿ ಕಿಲೋ ಮೀಟರ್​ಗೆ 15 ರೂಪಾಯಿ ನಿಗದಿ ಮಾಡಿದೆ. ರಾತ್ರಿ 10 ಗಂಟೆ ಬಳಿಕ ಬೆಳಗ್ಗೆ 5 ಗಂಟೆವರೆಗೂ ಬಾಡಿಗೆ ಶೇ.50ರಷ್ಟು ಹೆಚ್ಚಿಸಬಹುದು ಎಂದು ಹೇಳಿದೆ. ಆದ್ರೆ ಈ ನಿಯಮ ಅಗ್ರಿಗೇಟರ್ ಟ್ಯಾಕ್ಸಿ ಕಂಪನಿಗಳಿಗೆ ಅನ್ವಯಿಸಲ್ಲ. ಯಾಕಂದ್ರೆ ಓಲಾ, ಉಬರ್ ಬಳಿ ಇರೋದು ಟ್ಯಾಕ್ಸಿ ಸೇವೆಯ ಲೈಸನ್ಸ್. ಹೀಗಾಗಿ ಗ್ರಾಹಕರ ಬಳಿ ಓಲಾ, ಉಬರ್, ರಾಪಿಡೋ ಸುಲಿಗೆ ಮಾಡ್ತಿವೆ. 2 ಕಿ.ಮೀಟರ್​ಗೆ 100 ರೂಪಾಯಿ ಪಡೆದು, ಆಟೋ ಚಾಲಕರಿಗೆ 60 ರೂಪಾಯಿ ನೀಡಿ 40 ರೂಪಾಯಿ ಜೇಬಿಗೆ ಇಳಿಸ್ತಿವೆ.

Published On - 8:11 am, Mon, 10 October 22