ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮನೆ ಮುಂದೆ ಪ್ರತಿಭಟನೆ! ಪೊಲೀಸರಿಗೆ ನ್ಯಾಯ ಕೊಡಿಸುವಂತೆ ಒತ್ತಾಯ
ಪ್ರಮೋಷನ್ ವಿಳಂಬದ ಬಗ್ಗೆ ಮತ್ತು ಸಂಬಳ ತಾರತಮ್ಯ ಕುರಿತು ಪೊಲೀಸರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ವಂದೇಮಾತರಂ ಸಮಾಜಸೇವೆ ಸಂಘಟನೆ ಬೆಂಗಳೂರಿನ ಆರ್ಟಿ ನಗರದ ಸಿಎಂ ನಿವಾಸದ ಬಳಿ ಧರಣಿ ಮಾಡುತ್ತಿದ್ದಾರೆ.
ಬೆಂಗಳೂರು: ಪೊಲೀಸರಿಗೆ (Police) ನ್ಯಾಯ ಕೊಡಿಸುವಂತೆ ಒತ್ತಾಯಿಸಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮನೆ ಮುಂದೆ ವಂದೇಮಾತರಂ ಸಮಾಜಸೇವೆ ಸಂಘಟನೆ ಪ್ರತಿಭಟನೆ ಮಾಡುತ್ತಿದೆ. ಪ್ರಮೋಷನ್ ವಿಳಂಬದ ಬಗ್ಗೆ ಮತ್ತು ಸಂಬಳ ತಾರತಮ್ಯ ಕುರಿತು ಪೊಲೀಸರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ವಂದೇಮಾತರಂ ಸಮಾಜಸೇವೆ ಸಂಘಟನೆ ಬೆಂಗಳೂರಿನ ಆರ್ಟಿ ನಗರದ ಸಿಎಂ ನಿವಾಸದ ಬಳಿ ಧರಣಿ ಮಾಡುತ್ತಿದ್ದಾರೆ. ಪೊಲೀಸರಿಗೆ ಅನೇಕ ವರ್ಷಗಳಿಂದ ಪ್ರೊಮೋಷನ್ ಆಗಿಲ್ಲ. ಸಂಬಳದಲ್ಲೂ ಅನ್ಯಾಯ ಆಗಿದೆ. ಬಜೆಟ್ನಲ್ಲಿ ಇದನ್ನ ಸರಿಪಡಿಸುವಂತೆ ಅಧ್ಯಕ್ಷ ಶಿವಕುಮಾರ್ ಸಿಎಂಗೆ ಮನವಿ ಮಾಡಿದ್ದಾರೆ.
ಅಂಗನವಾಡಿ ಕೇಂದ್ರದಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಲು ಆಗ್ರಹ: ಇಂದು ಸಿಎಂ ಬೊಮ್ಮಾಯಿ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಆದರೆ ಹಲವು ಕಡೆ ಸಾಲು ಸಾಲು ಪ್ರತಿಭಟನೆ ನಡೆಯುತ್ತಿವೆ. ಫ್ರೀಡ್ಂ ಪಾರ್ಕ್ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಶನ್ ನಿಂದ ಪ್ರತಿಭಟನೆ ನಡೆಯುತ್ತಿದೆ. ಸೇವಾ ಹಿರಿತನದ ಆಧಾರದ ಮೇಲೆ ಗೌರವಧನವನ್ನು ಹೆಚ್ಚಳಕ್ಕೆ ಆಗ್ರಹಿಸಿ ಧರಣಿ ನಡೆಸುತ್ತಿರುವ ಕಾರ್ಯಕರ್ತೆಯರು ಅಂಗನವಾಡಿ ಕೇಂದ್ರದಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಲು ಆಗ್ರಹಿಸಿದ್ದಾರೆ. ಪ್ರತಿಭಟನೆಗೆ ರಾಜ್ಯದ ಮೂಲೆಮೂಲೆಗಳಿಂದ ಅಂಗನವಾಡಿ ಕಾರ್ಯೆಕರ್ತೆಯರು ಬಂದು ಭಾಗಿಯಾಗಿದ್ದಾರೆ.
ಶಿಕ್ಷಕರ ಪ್ರತಿಭಟನೆ: ಅನುದಾನ ಶಾಲಾ ಕಾಲೇಜುಗಳ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಫೀಡ್ರಂ ಪಾರ್ಕ್ನಲ್ಲಿ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರು ಭಾಗಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಟ್ರಾಫಿಕ್ ಬಿಸಿ: ಸಿಲಿಕಾನ್ ಸಿಟಿಯಲ್ಲಿ ಇಂದು ಸಾಲು ಸಾಲು ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಬಿಸಿ ತಟ್ಟಿದೆ. ಮೆಜೆಸ್ಟಿಕ್, ರೇಸ್ ಕೋರ್ಸ್ ರಸ್ತೆ, ಫ್ರೀಡಂ ಪಾರ್ಕ್ ರಸ್ತೆ, ಕಾರ್ಪೋರೇಶನ್, ಆನಂದ್ ರಾವ್ ಸರ್ಕಲ್, ಮೌರ್ಯ ಸರ್ಕಲ್ ಸೇರಿದಂತೆ ಹಲವಡೆ ಟ್ರಾಫಿಕ್ ಜಾಮ್ ಆಗಿದೆ.
ಸಮಸ್ತ ಕರ್ನಾಟಕ ಕ್ಷೇಮೋದಯ ಹೆಸರಲ್ಲಿ ಸಿಎಂ ಅರ್ಚನೆ: ಇಂದು ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಸಿಎಂ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಆಂಜನೇಯ ಸ್ವಾಮಿ ದೇವಾಲಯದಲ್ಲಿ ಸಮಸ್ತ ಕರ್ನಾಟಕ ಕ್ಷೇಮೋದಯ ಹೆಸರಲ್ಲಿ ಸಿಎಂ ಅರ್ಚನೆ ಮಾಡಿಸಿದರು.
ಇದನ್ನೂ ಓದಿ
ನಟಿ ಸಂಜನಾ ಗಲ್ರಾನಿಗೆ ಅಶ್ಲೀಲ ಮೆಸೇಜ್ ಕಳಿಸಿದ ಆರೋಪ; ಪೊಲೀಸರ ಬಂಧನದಲ್ಲಿ ಆ್ಯಡಂ ಬಿದ್ದಪ್ಪ
ನಿಮ್ಮಆಸ್ತಿಗೆ ನಿಮ್ಮ ಜೀವನ ಸಂಗಾತಿಯನ್ನು ನಾಮಿನಿ ಮಾಡುವುದು ಏಕೆ ಮುಖ್ಯ ಗೊತ್ತಾ..! ಇಲ್ಲಿದೆ ಮಾಹಿತಿ
Published On - 10:25 am, Fri, 4 March 22