ವೀರ ಸಾವರ್ಕರ್ ಕುರಿತ ಪುಸ್ತಕ ಬಿಡುಗಡೆ: ಸಿಎಂ ಬೊಮ್ಮಾಯಿ, ಬಿಎಲ್ ಸಂತೋಷ್ ಭಾಗಿ; ಪುಸ್ತಕದಲ್ಲಿನ ಅಂಶಗಳೇನು?
Veer Savarkar: ಧರ್ಮ, ಅಲ್ಪ ಸಂಖ್ಯಾತ ಆಧಾರದ ಮೇಲೆ ದೇಶ ರಚನೆ ಬೇಡ. ಹೀಗೆ ದೇಶ ರಚನೆ ಬೇಡವೆಂದು ಸಾವರ್ಕರ್ ಹೇಳಿದ್ರು. ರಾಷ್ಟ್ರೀಯ ಭದ್ರತೆಗೆ ವೀರ ಸಾವರ್ಕರ್ ಐಕಾನ್ ಆಗಿದ್ದರು ಎಂದು ಕಾರ್ಯಕ್ರಮದಲ್ಲಿ ಸಾವರ್ಕರ್ ಪುಸ್ತಕದ ಲೇಖಕ ಉದಯ್ ಮಹೂರ್ಕರ್ ತಿಳಿಸಿದರು.
ಬೆಂಗಳೂರು: ಪುಸ್ತಕ ಅಪರೂಪದ ಪುಸ್ತಕದ ಶೀರ್ಷಿಕೆಯಲ್ಲೇ ಬಹಳ ಕುತೂಹಲ ಮೂಡಿಸುತ್ತದೆ. ವೀರ ಸಾವರ್ಕರ್ ಹೆಸರಿನಲ್ಲಿ ಬಹಳ ಅರ್ಥವಿದೆ, ಎಲ್ಲರನ್ನೂ ನಾವು ವೀರರು ಅಂತ ಕರೆಯೋದಿಲ್ಲ. ಇವತ್ತು ಎಲ್ಲವನ್ನೂ ಪ್ರಶ್ನೆ ಮಾಡುವ ಕಾಲದಲ್ಲಿ ಇದ್ದೇವೆ. ಹಲವು ವೈಚಾರಿಕತೆಯ ಮೂಲಕ ಪ್ರಶ್ನೆ ಎತ್ತಿ ಸಿಂಧೂ ಸಂಸ್ಕೃತಿಯನ್ನು ಸಾವರ್ಕರ್ ಅಂದೇ ಎಚ್ಚರಿಸಿದ್ದರು. ನಾಗರೀಕತೆ ಹಾಗೂ ಸಂಸ್ಕೃತಿ ಬಗ್ಗೆ ಸಾವರ್ಕರ್ ಗೆ ಸ್ಪಷ್ಟತೆ ಇತ್ತು. ಜಾಗತೀಕರಣ ಖಾಸಗೀಕರಣದ ನಡುವೆ ಅಂತಃಕರಣ ಮರೆಯುತ್ತಿದ್ದೇವೆ. ಅದನ್ನು ಎಚ್ಚರಿಸಿದ್ದವರು ವೀರ ಸಾವರ್ಕರ್. ಬೇರೆ ದೇಶಗಳಲ್ಲಿ ಹಿಂಸೆ ಪ್ರಾಧಾನ್ಯತೆ, ಬೇರೆ ಧರ್ಮದಲ್ಲೇ ಹಿಂಸೆ ಇದೆ. ಹಿಂಸೆಯನೆಲಗಟ್ಟಿನಲ್ಲಿ ಬೇರೆ ಧರ್ಮ ಸ್ಥಾಪನೆ ಆಗಿದೆ. ಹಿಂದೂಧರ್ಮ ಸಂಸ್ಕೃತಿ ನೆಲೆಗಟ್ಟಿನಲ್ಲಿ ಸ್ಥಾಪನೆ ಆಗಿದೆ ಎಂದು ಸಾವರ್ಕರ್ಗೆ ಸಂಬಂಧಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದೊಡ್ಡ ದೊಡ್ಡ ಸ್ವಾತಂತ್ರ್ಯ ಹೋರಾಟಗಾರರಿದ್ದರು. ಬ್ರಿಟಿಷರು ಅವರು ಯಾರನ್ನೂ ಕೂಡ ಕಾಳಾಪಾನಿ ಜೈಲಿಗೆ ಹಾಕಲಿಲ್ಲ. ಬ್ರಿಟಿಷರಿಗೆ ದೊಡ್ಡ ದೊಡ್ಡ ಸ್ವಾತಂತ್ರ್ಯ ಹೋರಾಟಗಾರರನು ಹೇಗೆ ಮ್ಯಾನೇಜ್ ಮಾಡಬೇಕು ಗೊತ್ತಿತ್ತು. ಆದರೆ ಸಾವರ್ಕರ್ ವೀರತ್ವ, ಅವರ ಸಿದ್ದಾಂತ ಹಾಗೆಯೇ ಬಿಟ್ಟರೆ ಬ್ರಿಟಿಷರಿಗೆ ಭಾರತ ಬಿಡಬೇಕು ಅಂತ ಗೊತ್ತಿತ್ತು. ಸಾವರ್ಕರ್ ನ್ಯೂಕ್ಲಿಯರ್ ಫಿಷನ್ ಎನ್ನೋದು ಬ್ರಿಟಿಷರಿಗೆ ಗೊತ್ತಿತ್ತು. ಹೀಗಾಗಿ ದೇಶದ ಚಳುವಳಿಯಿಂದ ಬ್ರಿಟಿಷರು ಸಾವರ್ಕರ್ ರನ್ನು ದೂರ ಇಟ್ಟರು ಎಂದು ತಿಳಿಸಿದರು.
ಈಗ ಹಲವರು ಸಾವರ್ಕರ್ ರನ್ನು ವಿವಾದಕ್ಕೆ ಈಡು ಮಾಡಲು ನೋಡ್ತಾರೆ. ಅಂಥವರು ದಯವಿಟ್ಟು ಅಂಡಮಾನ್ ನ ಕಾಳಾಪಾನಿ ಜೈಲಿಗೆ ಹೋಗಿ ನೋಡಿ ಬನ್ನಿ. ನಿಮ್ಮ ಮನಸ್ಸಿನಲ್ಲಿರುವ ಅಸಹ್ಯ ಕಡಿಮೆಯಾಗಬಹುದು ಎಂದು ಕಾಂಗ್ರೆಸ್ ನಾಯಕರಿಗೆ ಸಿಎಂ ಟಾಂಗ್ ನೀಡಿದರು.
ಅಸ್ಪ್ಪಶ್ಯತೆ ಹೆಸರಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ನಾನು ಸಂಘದ ಶಾಖೆಯಲ್ಲಿ ಭಾಗವಹಿಸಿದ್ದೇನೆ. 2007 ರಲ್ಲಿ ಕಾಂಗ್ರೆಸ್ ನಾಯಕ ಮಣಿಶಂಕರ್ ಐಯ್ಯರ್ ಸಾವರ್ಕರ್ ಅವಹೇಳನ ಮಾಡಿದರು. ಆಗ ಇಡೀ ದೇಶದಲ್ಲಿ ಗದ್ದಲ ಹೋರಾಟ ನಡೆಯಿತು. ಆಗ ಕಾರ್ಯಕ್ರಮವೊಂದರಲ್ಲಿ ಸು ರಾಮಣ್ಣ ಇದ್ದರು, ಸಾವರ್ಕರ್ ಬಗ್ಗೆ ಮಾತಾಡೋಕೆ ಹೇಳಿದರು. ನನ್ನ ಮಾತು ಕೇಳಿ ಸು ರಾಮಣ್ಣ ಮಾನಸಿಕವಾಗಿ ಹತ್ತಿರವಿದ್ದೀಯ, ದೈಹಿಕವಾಗಿ ಯಾಕೆ ದೂರ ಇರ್ತೀಯಾ ಅಂದಿದ್ದರು. ಅದೇ ನನಗೆ ಸ್ಪೂರ್ತಿ ಎಂದು ಬಸವರಾಜ ಬೊಮ್ಮಾಯಿ ನೆನಪಿಸಿಕೊಂಡಿದರು.
ಸಾವರ್ಕರ್‌ರನ್ನ ಉದ್ದೇಶಪೂರ್ವಕವಾಗಿ ಅಮಾನ್ಯ ಮಾಡಲಾಗಿದೆ: ಲೇಖಕ ಉದಯ್ ಮಾಹೋರ್ಕರ್ ಕಾಶಿ ಕಾರಿಡಾರ್ ನಿರ್ಮಾಣ ಆಗಿದ್ದು ಸಾವರ್ಕರ್ ಯುಗ ಪ್ರಾರಂಭ ಆಗಿದ್ದಕ್ಕೆ ಉದಾಹರಣೆ. ಬಾಬ್ರಿ ಮಸೀದಿ ಧ್ವಂಸ ಆಗಿದ್ದು ಸಾವರ್ಕರ್ ಯುಗ ಆರಂಭ ಆಗಿದ್ದಕ್ಕೆ ಉದಾಹರಣೆ. ರಾಷ್ಟ್ರದ ಭದ್ರತೆಗೆ ಸಾವರ್ಕರ್ ಐಕಾನ್ ಆಗಿದ್ದರು. ಮುಸ್ಲಿಂ ಇಡೀ ಸಮುದಾಯವನ್ನು ಹೀಗಳೆಯುವುದು ಸರಿಯಲ್ಲ. ಬಾಬರ್ ಅಂಥವರ ಹೆಸರಿನ ಬದಲು ಮುಸ್ಲಿಂ ಪ್ರಗತಿಪರ ದೇಶಭಕ್ತ ಶೌರ್ಯ ಪ್ರಶಸ್ತಿ ಪಡೆದ ಮುಸ್ಲಿಂರ ಹೆಸರಿಡಬೇಕು ಎಂದು ಬೆಂಗಳೂರಿನ ಟೌನ್ಹಾಲ್ನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಲೇಖಕ ಉದಯ್ ಮಾಹೋರ್ಕರ್ ಹೇಳಿಕೆ ನೀಡಿದರು.
ಸಾವರ್ಕರ್ಗೆ ಸಂಬಂಧಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು (ಡಿಸೆಂಬರ್ 18) ಬೆಂಗಳೂರಿನಲ್ಲಿ ನಡೆದಿದೆ. ಸಾವರ್ಕರ್‌ರನ್ನ ಉದ್ದೇಶಪೂರ್ವಕವಾಗಿ ಅಮಾನ್ಯ ಮಾಡಲಾಗಿದೆ. ಸಾವರ್ಕರ್ ಆದರ್ಶ ದೇಶದ ಯುವ ಪೀಳಿಗೆಗೆ ಗೊತ್ತಾದರೆ ಡಿವೈಡ್ ಅಂಡ್ ರೂಲ್ ನಡೆಯೋದಿಲ್ಲ ಅನ್ನೋದು ಗೊತ್ತಿತ್ತು. ದೇಶ ವಿಭಜನೆ ಮಾಡಿದವರಿಗೆ ಇದು ಗೊತ್ತಿತ್ತು. ಹೀಗಾಗಿ ಈಗಲೂ ಸಾವರ್ಕರ್‌ರನ್ನ ಅಮಾನ್ಯ ಮಾಡುವ ಯತ್ನ ಮಾಡಲಾಗುತ್ತಿದೆ. ಧರ್ಮ, ಅಲ್ಪ ಸಂಖ್ಯಾತ ಆಧಾರದ ಮೇಲೆ ದೇಶ ರಚನೆ ಬೇಡ. ಹೀಗೆ ದೇಶ ರಚನೆ ಬೇಡವೆಂದು ಸಾವರ್ಕರ್ ಹೇಳಿದ್ರು. ರಾಷ್ಟ್ರೀಯ ಭದ್ರತೆಗೆ ವೀರ ಸಾವರ್ಕರ್ ಐಕಾನ್ ಆಗಿದ್ದರು ಎಂದು ಕಾರ್ಯಕ್ರಮದಲ್ಲಿ ಸಾವರ್ಕರ್ ಪುಸ್ತಕದ ಲೇಖಕ ಉದಯ್ ಮಹೂರ್ಕರ್ ತಿಳಿಸಿದರು.
ಸಾವರ್ಕರ್, ಗಾಂಧೀಜಿ ಅತ್ಯಂತ ಉತ್ತಮ ಸ್ನೇಹಿತರಾಗಿದ್ದರು ವಿಪಕ್ಷದವರು ಕನ್ನಡ, ಮರಾಠಿ ಬೆಂಕಿಗೆ ಎಣ್ಣೆ ಸುರಿಯುತ್ತಿದ್ದಾರೆ. ವಿಪಕ್ಷಸ್ಥಾನದಲ್ಲಿ ಕೂರಬೇಕಲ್ಲ ಎಂದು ಎಣ್ಣೆ ಸುರಿಯುತ್ತಿದ್ದಾರೆ. ವೀರ ಸಾವರ್ಕರ್ ಅತಿ ಹೆಚ್ಚು ತಪ್ಪು ಗ್ರಹಿಕೆಗೆ ಒಳಗಾದವರು. ಒಂದು ತಂಡ ಬೇಕೆಂದೇ ತಪ್ಪು ಗ್ರಹಿಕೆ ಉಂಟಾಗುವಂತೆ ಮಾಡಿದ್ರು. ಸಾವರ್ಕರ್, ಗಾಂಧೀಜಿ ಅತ್ಯಂತ ಉತ್ತಮ ಸ್ನೇಹಿತರಾಗಿದ್ದರು. ಗಾಂಧೀಜಿಯನ್ನ ಕಬ್ಜ ಮಾಡಿಕೊಂಡು ಬ್ರ್ಯಾಂಡ್ ಮಾಡಿಕೊಂಡ್ರು. ಸಾವರ್ಕರ್‌ರನ್ನ ಅತಿದೊಡ್ಡ ಅಪಾಯ ಎಂದು ನೆಹರು ಭಾವಿಸಿದ್ರು. ಗಾಂಧಿ ಹತ್ಯೆ ಆದಾಗ ಎಲ್ಲರೂ ಸಾವರ್ಕರ್ ಬಂಧನ ವಿರೋಧಿಸಿದ್ರು. ಆದ್ರೆ ನೆಹರು ಮಾತ್ರ ಒಬ್ಬರೇ ಸಾವರ್ಕರ್ ಬಂಧನ ವಿರೋಧಿಸಲಿಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.
ವೀರ ಸಾವರ್ಕರ್ ಪುಸ್ತಕದ ಅಂಶಗಳು ಹೀಗಿವೆ:
- ಗಾಂಧಿ ಹತ್ಯೆ ಆದಾಗ ಅಂಬೇಡ್ಕರ್ ಸಾವರ್ಕರ್ ಬೆಂಬಲಕ್ಕೆ ನಿಂತಿದ್ದರು
- ದೇಶ ವಿಭಜನೆ ಯತ್ನ ಮೊದಲು ಹುಟ್ಟಿದ್ದು ಅಲಿಘಢ ವಿಶ್ವವಿದ್ಯಾಲಯದಲ್ಲಿ
- ಮುಸ್ಲಿಂ ಲೀಗ್ ಹುಟ್ಟಿಕೊಂಡಿದ್ದೇ ದೇಶ ವಿಭಜನೆಗಾಗಿ
- ಹಿಂದೂ ಮುಸ್ಲಿಂ ಬೇಧಭಾವ ಹುಟ್ಟುಹಾಕಿದ್ದು ಕಾಂಗ್ರೆಸ್
- ಪಾಕಿಸ್ತಾನ ರಚನೆ ಮಾತ್ರ ಅಲ್ಲ ಭಂಗಿಸ್ತಾನ್, ಉಸ್ಮಾನಿಸ್ತಾನ್, ಫಾರುಕಿಸ್ತಾನ್, ಮೊಯಿನಿಸ್ತಾನ್ ರಚನೆ ಉದ್ದೇಶ ಮುಸ್ಲಿಂ ಲೀಗ್ ನಕ್ಷೆಯಲ್ಲಿತ್ತು
- ದೇಶ ವಿಭಜನೆಯನ್ನು ಸಾರ್ವಕರ್ ಕಟುವಾಗಿ ವಿರೋಧಿಸಿದ್ದರು
- ದೇಶ ವಿಭಜನೆಯನ್ನು ತಡೆಯುವ ಎಲ್ಲ ಪ್ರಯತ್ನ ಸಾವರ್ಕರ್ ಮಾಡಿದ್ದರು
- ಅಖಂಡ ಭಾರತದ ಕನಸು ಬಿಟ್ಟರೆ ಬೇರೆ ಯಾವ ಕನಸೂ ಸಾವರ್ಕರ್ ಗೆ ಇರಲಿಲ್ಲ
ಎಂದು ಪುಸ್ತಕದ ಅಂಶಗಳ ಬಗ್ಗೆ ಪತ್ರಕರ್ತೆ ಶ್ರೀಲಕ್ಷ್ಮಿ ರಾಜಕುಮಾರ್ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಟೌನ್ಹಾಲ್ ಮುಂಭಾಗ ಕನ್ನಡಪರ ಸಂಘಟನೆಗಳ ಭಾರಿ ಪ್ರತಿಭಟನೆ; ಹೋರಾಟಗಾರರು ಪೊಲೀಸರ ವಶಕ್ಕೆ
ಇದನ್ನೂ ಓದಿ: ಬಿಜೆಪಿಗೆ ಮಹಾತ್ಮಾ ಗಾಂಧಿ ಅಥವಾ ಸಾವರ್ಕರ್ ಬಗ್ಗೆ ಏನೂ ಗೊತ್ತಿಲ್ಲ: ಉದ್ಧವ್ ಠಾಕ್ರೆ