ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ಪ್ರೊ ಕೆಎಸ್​​ ಭಗವಾನ್​ರನ್ನು ಬಂಧಿಸುವಂತೆ ಒಕ್ಕಲಿಗರ ಸಂಘದಿಂದ ಆಗ್ರಹ

ಪ್ರೊ. ಕೆ.ಎಸ್.ಭಗವಾನ್ ಆಡಿರುವ ಮಾತು ಸದ್ಯ ಒಕ್ಕಲಿಗರನ್ನ ಕೆರಳಿಸಿದೆ. ಈ ಕುರಿತಾಗಿ ಅಖಿಲ‌ ಕರ್ನಾಟಕ ಒಕ್ಕಲಿಗ ಸಂಘ ಭಗವಾನ್​ ರವರ ವಿರುದ್ಧ ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಿದೆ. ಅದೇ ರೀತಿಯಾಗಿ ರಾಜ್ಯ ಒಕ್ಕಲಿಗರ ಸಂಘದಿಂದ ಕೂಡ ಅವರ ವಿರುದ್ಧ ಕಿಡಿಕಾರಿದ್ದು, ಸರ್ಕಾರ ಕೂಡಲೇ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ಪ್ರೊ ಕೆಎಸ್​​ ಭಗವಾನ್​ರನ್ನು ಬಂಧಿಸುವಂತೆ ಒಕ್ಕಲಿಗರ ಸಂಘದಿಂದ ಆಗ್ರಹ
ಪ್ರೊ.ಕೆ.ಎಸ್​​.ಭಗವಾನ್
Follow us
Poornima Agali Nagaraj
| Updated By: ಗಂಗಾಧರ​ ಬ. ಸಾಬೋಜಿ

Updated on: Oct 16, 2023 | 3:14 PM

ಬೆಂಗಳೂರು, ಅಕ್ಟೋಬರ್​​​ 16: ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರೊ. ಕೆ.ಎಸ್ ಭಗವಾನ್ (KS Bhagawan) ವಿರುದ್ದ ಅಖಿಲ‌ ಕರ್ನಾಟಕ ಒಕ್ಕಲಿಗ ಸಂಘದಿಂದ ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇದೇ ವಿಚಾರವಾಗಿ ನಗರದಲ್ಲಿ ರಾಜ್ಯ ಒಕ್ಕಲಿಗರ ಸಂಘದಿಂದ ಪತ್ರಿಕಾಗೋಷ್ಠಿ ಮಾಡಿದ್ದು, ಪ್ರೊ. ಭಗವಾನ್​ ಭಗವಾನ್​ ಅವರ ಹೇಳಿಕೆಯನ್ನು ರಾಜ್ಯ ಒಕ್ಕಲಿಗರ ಸಂಘ ಖಂಡಿಸುತ್ತದೆ. ಕೂಡಲೇ ಭಗವಾನ್ ಅವರನ್ನು ಸರ್ಕಾರ ಬಂಧಿಸಬೇಕು. ಒಂದು ವೇಳೆ ಬಂಧಿಸದೇ ಹೋದರೆ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಅಧ್ಯಕ್ಷ ಡಿ ಹನುಮಂತಯ್ಯ  ಎಚ್ಚರಿಕೆ ನೀಡಿದ್ದಾರೆ.

ಭಗವಾನ್ ಅವರು ವಯಸ್ಸಿನಲ್ಲಿ ಹಿರಿಯರಾಗಿದ್ದರೂ ತಿಳುವಳಿಕೆ ಇಲ್ಲದಂತೆ ಮಾತನಾಡಿರುವುದು ಒಳಿತಲ್ಲ. ಹಾಗಾಗಿ ಸರ್ಕಾರ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಭಗವಾನ್ ಅವರು ಕ್ಷಮೆ ಕೇಳಬೇಕು: ಕೆಂಚಪ್ಪಗೌಡ 

ಗೌರವ ಅಧ್ಯಕ್ಷ ಕೆಂಚಪ್ಪಗೌಡ ಮಾತನಾಡಿ, ನಮ್ಮ ಜನಾಂಗವನ್ನ ಅವಮಾನ ಮಾಡುವ ರೀತಿ ಮಾತನಾಡಿದ್ದಾರೆ. ನಮ್ಮ ಜನಾಂಗದ ವತಿಯಿಂದ ಅವರಿಗೆ ಧಿಕ್ಕಾರ. ಒಕ್ಕಲಿಗ ಸಂಘ ದೇಶಕ್ಕೆ, ಸಮಾಜಕ್ಕೆ ಏನೆಲ್ಲಾ ಕೊಟ್ಟಿದೆ ಎಂಬುದು ತಿಳಿಯಬೇಕು. ವಿದ್ಯಾವಂತರು ಯಾರು ಕೂಡ ಹೀಗೆ ಮಾತನಾಡುವುದಿಲ್ಲ. ಒಕ್ಕಲಿಗರು ಹಸಿದವರಿಗೆ ಅನ್ನದಾನ ಮಾಡುವ ಗುಣ ಹೊಂದಿರುವವರು. ವಿಧಾನಸೌಧ, ವಿಕಾಸಸೌಧ ಎಲ್ಲ ಕೊಡುಗೆ ಕೂಡ ಒಕ್ಕಲಿಗರದು. ಒಂದೂವರೆ ಕೋಟಿ ರೂ. ಜನ ಭಗವಾನ್ ಅವರನ್ನ ಖಂಡಿಸುತ್ತೇವೆ. ಭಗವಾನ್ ಅವರು ಕ್ಷಮೆ ಕೇಳಬೇಕು. ಇಲ್ಲವಾದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರೊ.ಭಗವಾನ್ ಅರೆ ಹುಚ್ಚ: ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಜಿಟಿ ದೇವೇಗೌಡ ಕೆಂಡಾಮಂಡಲ

ಮಂಜೇಗೌಡ ಪ್ರತಿಕ್ರಿಯೆ ನೀಡಿದ್ದು, ಭಗವಾನ್ ಅವರನ್ನ ಸರ್ಕಾರ ಬಂಧಿಸಬೇಕು. ಕುವೆಂಪು ಅವರ ಹೆಸರನ್ನ ಬಳಸಿಕೊಂಡು ಒಕ್ಕಲಿಗ ಸಂಘ ಸಂಸ್ಕೃತಿ ಹೀನ ಎಂದಿದ್ದಾರೆ. ಸಮಾಜ ಇಂತಹವರನ್ನ ಬಹಿಷ್ಕಾರ ಮಾಡಬೇಕು. ಸರ್ಕಾರ ಇವರನ್ನ ಬಂಧಿಸಬೇಕು ಎಂದು  ಆಗ್ರಹಿಸಿದ್ದಾರೆ.

ಸರ್ಕಾರಕ್ಕೆ ನಾವು ಡೆಡ್ ಲೈನ್ ನೀಡಿದ ಎನ್. ನೆಲ್ಲಿಗೆರೆ ಬಾಲಕೃಷ್ಣ   

ಎನ್. ನೆಲ್ಲಿಗೆರೆ ಬಾಲಕೃಷ್ಣ ಮಾತನಾಡಿ, ಒಕ್ಕಲಿಗ ಜನ ಸ್ನೇಹಕ್ಕೂ ಸಿದ್ದ, ಸಮರಕ್ಕೂ ಬದ್ಧ. ಒಕ್ಕಲಿಗ ಸಮುದಾಯ ಇಂತಹ ರಣ ಹೇಡಿಗಳನ್ನ ಬೇಟೆ ಆಡಲಿದೆ. ಯಾರನ್ನೋ ಮೆಚ್ಚಿಸಲು ಭಗವಾನ್ ಈ ರೀತಿ ಮಾತನಾಡಿದ್ದಾರೆ. ಸರ್ಕಾರ ಎಫ್​ಐಆರ್​ ಹಾಕಬೇಕು. ಸಮಾಜದ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಬೇಕು. ಸರ್ಕಾರಕ್ಕೆ ನಾವು ಡೆಡ್ ಲೈನ್ ನೀಡುತ್ತೇವೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ದಸರಾ ಯುವ ಕವಿಗೋಷ್ಠಿ ಪಟ್ಟಿಯಿಂದ ಪ್ರೊ.ಭಗವಾನ್ ಹೆಸರು ಕೈ ಬಿಡುವಂತೆ ಒತ್ತಾಯಿಸಿ ನಾಳೆ ಒಕ್ಕಲಿಗರಿಂದ ಪ್ರತಿಭಟನೆ

ಒಕ್ಕಲಿಗರ ಸಂಘದ ಕಟ್ಟಡದ ಮುಂದೆ ಪ್ರೊ. ಭಗವನ್ ವಿರುದ್ದ ಘೋಷಣೆ ಕೂಗಿ ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರಿಂದ ಪ್ರತಿಭಟನೆ ಮಾಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.