AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ಯುವ ಕವಿಗೋಷ್ಠಿ ಪಟ್ಟಿಯಿಂದ ಪ್ರೊ.ಭಗವಾನ್ ಹೆಸರು ಕೈ ಬಿಡುವಂತೆ ಒತ್ತಾಯಿಸಿ ನಾಳೆ ಒಕ್ಕಲಿಗರಿಂದ ಪ್ರತಿಭಟನೆ

ಇಂದಿನಿಂದ ಮೈಸೂರು ದಸರಾ ಆರಂಭವಾಗಿದೆ. ಇನ್ನೊಂದೆಡೆ, ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಸಮುದಾಯವು ಸಿಡಿದೆದ್ದಿದ್ದು, ದಸರಾ ಯುವ ಕವಿಗೋಷ್ಠಿ ಪಟ್ಟಿಯಿಂದ ಪ್ರೊ ಭಗವಾನ್ ಹೆಸರು ಕೈ ಬಿಡುವಂತೆ ಒತ್ತಾಯಿಸಿ ರಾಜ್ಯ ಒಕ್ಕಲಿಗ ಪಡೆಯಿಂದ ನಾಳೆ ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಮುಂಭಾಗ ಪ್ರತಿಭಟನೆ ನಡೆಯಲಿದೆ.

ದಸರಾ ಯುವ ಕವಿಗೋಷ್ಠಿ ಪಟ್ಟಿಯಿಂದ ಪ್ರೊ.ಭಗವಾನ್ ಹೆಸರು ಕೈ ಬಿಡುವಂತೆ ಒತ್ತಾಯಿಸಿ ನಾಳೆ ಒಕ್ಕಲಿಗರಿಂದ ಪ್ರತಿಭಟನೆ
ಕೆಎಸ್ ಭಗವಾನ್
ರಾಮ್​, ಮೈಸೂರು
| Edited By: Rakesh Nayak Manchi|

Updated on: Oct 15, 2023 | 7:35 AM

Share

ಮೈಸೂರು, ಅ.15: ಇಂದಿನಿಂದ ಮೈಸೂರು ದಸರಾ ಆರಂಭವಾಗಿದೆ. ಇನ್ನೊಂದೆಡೆ, ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪ್ರೊ.ಕೆ.ಎಸ್.ಭಗವಾನ್ (Pro.K.S.Bhagawan) ವಿರುದ್ಧ ಸಮುದಾಯವು ಸಿಡಿದೆದ್ದಿದ್ದು, ದಸರಾ ಯುವ ಕವಿಗೋಷ್ಠಿ ಪಟ್ಟಿಯಿಂದ ಪ್ರೊ ಭಗವಾನ್ ಹೆಸರು ಕೈ ಬಿಡುವಂತೆ ಒತ್ತಾಯಿಸಿ ರಾಜ್ಯ ಒಕ್ಕಲಿಗ ಪಡೆಯಿಂದ ನಾಳೆ ಮೈಸೂರು (Mysuru) ಕನ್ನಡ ಸಾಹಿತ್ಯ ಪರಿಷತ್ ಮುಂಭಾಗ ಬೆಳಗ್ಗೆ 9 ಗಂಟೆಗೆ ಪ್ರತಿಭಟನೆ ನಡೆಯಲಿದೆ.

ಪ್ರೊ.ಭಗವಾನ್ ಹೇಳಿದ್ದೇನು?

ಮಹಿಷ ಉತ್ಸವದಲ್ಲಿ ಮಾತನಾಡಿದ್ದ ಪ್ರೊ.ಕೆಎಸ್​ ಭಗವಾನ್, ಅಗ್ನಿ ಪೂಜೆಯ ಯಾಕೆ ಮಾಡುತ್ತಾರೆ. ಅದರಲ್ಲಿ ಏನು ಪ್ರಯೋಜನ ಇಲ್ಲ ಎಂದು ಬುದ್ಧ ತಿಳಿಸಿದ್ದರು. ಹೀಗಾಗಿ ರಾಜ ಮಹಾರಾಜರು ಅಗ್ನಿ ಪೂಜೆಯನ್ನು‌ ನಿಲ್ಲಿಸಿದರು. ಇದಕ್ಕಾಗಿ‌ ಬುದ್ಧರನ್ನು ಕಂಡರೆ ಬ್ರಾಹ್ಮಣರಿಗೆ ಕೋಪ. ಈಗಲೂ ಬ್ರಾಹ್ಮಣರು ಬುದ್ಧರ ಮೇಲೆ ಕೋಪವಿದೆ. ಅವರು ಹೋಮ ಮಾಡುವಾಗ ಬೆಂಕಿಗೆ ಅರಳಿ ಮರದ ಚಕ್ಕೆ ಹಾಕುತ್ತಾರೆ. ಬುದ್ಧರಿಗೆ ಜ್ಞಾನೋದಯವಾಗಿದ್ದು ಅರಳಿ ಮರದ ಕೆಳಗೆ. ಬುದ್ಧರ ಮೇಲಿನ ಕೋಪಕ್ಕೆ ಅರಳಿ ಮರದ ಚಕ್ಕೆಯನ್ನು ಬೆಂಕಿಗೆ ಹಾಕುತ್ತಾರೆ. ಬ್ರಾಹ್ಮಣರ ಸಂಪ್ರದಾಯಗಳು ಗೊಡ್ಡು ಸಂಪ್ರದಾಯಗಳು. ಅವರ ಸಂಪ್ರದಾಯಕ್ಕೆ ಅರ್ಥ ಇಲ್ಲ ಎಂದು ನಾಲಗೆ ಹರಿಬಿಟ್ಟಿದ್ದರು.

ಇದನ್ನೂ ಓದಿ: ಪ್ರೊ.ಭಗವಾನ್ ಅರೆ ಹುಚ್ಚ: ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಜಿಟಿ ದೇವೇಗೌಡ ಕೆಂಡಾಮಂಡಲ

ಬುದ್ಧ ಗುರುಗಳು ಜ್ಞಾನವನ್ನು ಕೊಟ್ಟಿದ್ದಾರೆ. ವೈದಿಕರು ಅಜ್ಞಾನವನ್ನು ಸಮಾಜಕ್ಕೆ ಕೊಡುತ್ತಿದ್ದಾರೆ. ಜನಿವಾರದಿಂದ ಜಾತಿ ಗುರುತಿಸುತ್ತಾರೆ. ಹಾಕದವನು ಒಂದು, ಹಾಕಿರುವವರು ಒಂದು. ಕೈಗೆ, ಕಾಲಿಗೆ ಜಾತಿ ಇಟ್ಟಿರುವುದು ಹಿಂದೂ ಧರ್ಮ. ಹಿಂದೂ ಧರ್ಮ ನಮ್ಮ ಧರ್ಮ ಅಲ್ಲ. ನಮ್ಮ ಧರ್ಮ ಬೌದ್ಧ ಧರ್ಮ. ಬ್ರಾಹ್ಮಣರು ವೈದಿಕರು ಬೇರೆ ದೇಶದಿಂದ ಬಂದಿರುವವರು ಎಂದು ಹೇಳಿಕೆ ನೀಡಿದ್ದರು.

2 ಸಾವಿರ ವರ್ಷದಿಂದ ಇವರು ಬೇರೆ ಅವರಿಗೆ ಸಂಸ್ಕೃತ ಕಲಿಸಲಿಲ್ಲ. ಎಲ್ಲಾ ಶೂದ್ರರು ಬ್ರಾಹ್ಮಣರ ಗುಲಾಮರು. ಶೂದ್ರನನ್ನು ದೇವರು ಸೃಷ್ಠಿ ಮಾಡಿರುವುದೆ ಬ್ರಾಹ್ಮಣರ ಸೇವೆ ಮಾಡಲು ಎಂದು‌ ತಿಳಿಸಿದಿದ್ದಾರೆ. ಇಂತಹ ಧರ್ಮ ನಮಗೇಕೆ ಬೇಕಿಲ್ಲ. ಇಂತಹ ಧರ್ಮ ನಮಗೆ ಬೇಡ. ಒಕ್ಕಲಿಗರು ಸಂಸ್ಕೃತಿ ಹೀನರು‌. ಈ ಮಾತು ನನ್ನದು ಅಲ್ಲ‌ ಕುವೆಂಪು ಅವರದ್ದು. ನಾನು ಹೇಳಿದ್ರೆ ನನ್ನ ಹೊಡೆಯುವುದಕ್ಕೆ ಬರುತ್ತಾರೆ. ನಿಜ ಹೇಳಿದವರನ್ನು ಯಾರು ಬಿಡಲ್ಲ. ಆದರೇ ನಿಜ ಹೇಳಿಯೇ ಸಾಯಬೇಕು ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ram
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More