ಜಿದ್ದಾಜಿದ್ದಿಗೆ ಬಿದ್ದ ಬಿಬಿಎಂಪಿ Vs ವಕ್ಫ್ ಬೋರ್ಡ್: ಬಿಬಿಎಂಪಿಗೆ ನಾವು ಯಾಕೆ ದಾಖಲೆ ಕೊಡಬೇಕು? ಎಂದ ವಕ್ಫ್ ಬೋರ್ಡ್ ಅಧ್ಯಕ್ಷ

ಕಾರ್ಪೊರೇಷನ್ ನಮ್ಮ ಪ್ರತಿವಾದಿ, ಅವರು ಮೂರು ಕೋರ್ಟ್ ನಲ್ಲೂ ಸೋತ್ತಿದ್ದಾರೆ. ಈಗ ನಮ್ಮಗೆ 3 ದಿನದೊಳಗೆ ದಾಖಲೆ ನೀಡುವಂತೆ ನೋಟಿಸ್ ನೀಡಿದ್ದಾರೆ. ನಮ್ಮ ಜಾಗದ ಬಗ್ಗೆ ಬಿಬಿಎಂಪಿ ಯಾಕೆ ದಾಖಲೆ ಸಲ್ಲಿಸಬೇಕು. ಬಿಬಿಎಂಪಿಯ ನೋಟಿಸ್ನಲ್ಲಿ ಆಟದ ಮೈದಾನ ಎಂದು ಬಳಕೆ ಮಾಡಿದ್ದಾರೆ.

ಜಿದ್ದಾಜಿದ್ದಿಗೆ ಬಿದ್ದ ಬಿಬಿಎಂಪಿ Vs ವಕ್ಫ್ ಬೋರ್ಡ್: ಬಿಬಿಎಂಪಿಗೆ ನಾವು ಯಾಕೆ ದಾಖಲೆ ಕೊಡಬೇಕು? ಎಂದ ವಕ್ಫ್ ಬೋರ್ಡ್ ಅಧ್ಯಕ್ಷ
ವಕ್ಫ್ ಬೋರ್ಡ್ ಸಭೆ
Follow us
TV9 Web
| Updated By: ಆಯೇಷಾ ಬಾನು

Updated on:Jun 17, 2022 | 12:03 PM

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ(Chamrajpet Eidgah Ground) ಭಾರೀ ಜಿದ್ದಾಜಿದ್ದಿಗೆ ಬಿದ್ದಿದೆ. ಮೈದಾನ ನಿಮ್ಮದು ಎಂಬುವುದಕ್ಕೆ ಸೂಕ್ತ ದಾಖಲೆಗಳನ್ನ 3 ದಿನದೊಳಗೆ ಸಲ್ಲಿಸುವಂತೆ ವಕ್ಫ್ ಬೋರ್ಡ್(WAKF Board)ಗೆ ಬಿಬಿಎಂಪಿ(BBMP) ನೋಟಿಸ್ ನೀಡಿದೆ. ದಾಖಲೆ ಸಲ್ಲಿಸಲು ಕೊನೆಯ ದಿನಾಂಕದ ಹಿನ್ನಲೆ ಬಿಬಿಎಂಪಿಗೆ ನಾವು ಯಾಕೆ ದಾಖಲೆ ಕೊಡಬೇಕು? ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಾ ಆದಿ ಪ್ರಶ್ನೆ ಮಾಡಿದ್ದಾರೆ.

ಕಾರ್ಪೊರೇಷನ್ ನಮ್ಮ ಪ್ರತಿವಾದಿ, ಅವರು ಮೂರು ಕೋರ್ಟ್ ನಲ್ಲೂ ಸೋತ್ತಿದ್ದಾರೆ. ಈಗ ನಮ್ಮಗೆ 3 ದಿನದೊಳಗೆ ದಾಖಲೆ ನೀಡುವಂತೆ ನೋಟಿಸ್ ನೀಡಿದ್ದಾರೆ. ನಮ್ಮ ಜಾಗದ ಬಗ್ಗೆ ಬಿಬಿಎಂಪಿ ಯಾಕೆ ದಾಖಲೆ ಸಲ್ಲಿಸಬೇಕು. ಬಿಬಿಎಂಪಿಯ ನೋಟಿಸ್ನಲ್ಲಿ ಆಟದ ಮೈದಾನ ಎಂದು ಬಳಕೆ ಮಾಡಿದ್ದಾರೆ. ಅದು ಈದ್ಗಾ ಮೈದಾನ, ಈದ್ಗಾ ಮೈದಾನವನ್ನ ಹೇಗೆ ಆಟದ ಮೈದಾನ ಎಂದು ಹೇಗೆ ಬಳಕೆ ಮಾಡ್ತಾರೆ. ಬಿಬಿಎಂಪಿ ವಿರುದ್ಧ ಕಂಟೆಂಪ್ಟ್ ಹಾಕಬೇಕಾಗುತ್ತೆ. ಈದ್ಗಾ ಮೈದಾನದ ಬಗ್ಗೆ ಕೋರ್ಟ್ ದಾಖಲೆ ಕೇಳಲಿ, ಸರ್ಕಾರ ಕೇಳಲ್ಲಿ, ಬಿಬಿಎಂಪಿ ಯಾಕೆ ಹೇಳಬೇಕು. ಬಿಬಿಎಂಪಿಗೆ ನಾವು ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ. ಅದು ನಮ್ಮ ಭೂಮಿ ನಮ್ಮ ಹತ್ರಾ ದಾಖಲೆಗಳು ಇವೆ. ನಮ್ಮ ಅನುಮತಿ ಇಲ್ಲದೆ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಿದ್ದಾರೆ. ಸ್ಥಳೀಯ ಸಮಿತಿಯ ಜೊತೆ ಚರ್ಚೆ ಮಾಡಿ ಹಾಕಬೇಕು ಎಂದು ಬಿಬಿಎಂಪಿ ವಿರುದ್ಧ ಮೌಲಾನ ಶಾಫಿ ಸಾ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ! ವಕ್ಫ್ ಬೋರ್ಡ್​ಗೆ ನೋಟಿಸ್ ನೀಡಿದ ಬಿಬಿಎಂಪಿ

ಚಾಮರಾಜಪೇಟೆಯ ಈದ್ಗಾ ಮೈದಾನದ ಬಗ್ಗೆ ಬಿಬಿಎಂಪಿ ದಾಖಲೆ ಕೇಳಿತ್ತು. ವಕ್ಫ್ ಬೋರ್ಡ್ ನಲ್ಲಿ ಈ ಬಗ್ಗೆ ನಿನ್ನೆ ಚರ್ಚೆ ನಡೆಸಿದ ಮುಸ್ಲಿಂ ಮುಖಂಡರು, ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಸಭೆಯಲ್ಲಿ ಬಿಬಿಎಂಪಿಗೆ ದಾಖಲೆಗಳನ್ನ ನೀಡದಿರಲು ತೀರ್ಮಾನಿಸಿದ್ದಾರೆ. ಬಿಬಿಎಂಪಿ ಪ್ರತಿವಾದಿಯಾಗಿರುವ ಕಾರಣ ಅವರ ಬಳಿ ದಾಖಲೆಗಳು ಇರಬೇಕು. ಅದನ್ನು ಕಳೆದು ಹಾಕಿರುವುದು ಅವರ ತಪ್ಪು ಎಂದು ಚರ್ಚೆ ನಡೆದಿದೆ. ಹೀಗಾಗಿ ಬಿಬಿಎಂಪಿಗೆ ವಕ್ಫ್ ಬೋರ್ಡ್ ಕೌಂಟರ್ ಕೊಟ್ಟಿದೆ. ನಾವ್ಯಾಕೆ ದಾಖಲೆ ನೀಡಬೇಕು ಎಂದು ಪ್ರಶ್ನಿಸಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ ದೀಪಕ್, ವಕ್ಫ್ ಬೋರ್ಡ್ ನವರು ಯಾಕೆ ದಾಖಲೆ ಕೊಡಲ್ಲ. ಅವರದೇ ಪ್ರಾಪರ್ಟಿ ಆಗಿದ್ರೆ ದಾಖಲೆ ನೀಡಲಿ. ಯಾಕೆ ಕೊಡಬೇಕು ಅಂದ್ರೆ ಹೇಗೆ? ದಾಖಲೆಗಳನ್ನ ನೀಡಿ. ನೀಡದೆ ಹೋದ್ರೆ ಇನ್ನೂ ಸ್ವಲ್ಪ ಕಾಲಾವಕಾಶ ನೀಡ್ತೇವೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:53 am, Fri, 17 June 22