ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ! ವಕ್ಫ್ ಬೋರ್ಡ್ಗೆ ನೋಟಿಸ್ ನೀಡಿದ ಬಿಬಿಎಂಪಿ
ಮೈದಾನ ವಕ್ಫ್ ಬೋರ್ಡ್ದು ಆಗಿದ್ದರೆ ಆಸ್ತಿ ದಾಖಲೆ ನೀಡುವಂತೆ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ನೋಟಿಸ್ನಲ್ಲಿ ತಿಳಿಸಿದ್ದಾರೆ. ಹಾಗೇ, ಮೂರು ದಿನಗಳಲ್ಲಿ ನೋಟಿಸ್ಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ.
ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ (Idgah Maidan) ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ಮೈದಾನದ ಜಾಗ ನಮ್ಮದು ಎಂದಿರುವ ವಕ್ಫ್ ಬೋರ್ಡ್ಗೆ ಬಿಬಿಎಂಪಿ (BBMP) ನೋಟಿಸ್ ನೀಡಿದೆ. ಮೈದಾನ ವಕ್ಫ್ ಬೋರ್ಡ್ದು ಆಗಿದ್ದರೆ ಆಸ್ತಿ ದಾಖಲೆ ನೀಡುವಂತೆ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ನೋಟಿಸ್ನಲ್ಲಿ ತಿಳಿಸಿದ್ದಾರೆ. ಹಾಗೇ, ಮೂರು ದಿನಗಳಲ್ಲಿ ನೋಟಿಸ್ಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ. ವಕ್ಫ್ ಬೋರ್ಡ್ ದಾಖಲೆ ಪರಿಶೀಲಿಸಿದ ನಂತರ ಮೇದಾನ ಯಾರಿಗೆ ಸೇರಿದ್ದ ಎಂದು ನಿರ್ಧಾರ ಮಾಡಲಾಗುತ್ತದೆ.
ಬಿಬಿಎಂಪಿಗೆ ಮನವಿ ಮಾಡಿದ್ದ ಹಿಂದೂಪರ ಸಂಘಟನೆ: ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ವಿಶ್ವ ಯೋಗಾ ದಿನಾಚರಣೆಯನ್ನು ಆಚರಿಸಲು ಅನುಮತಿ ನೀಡುವಂತೆ ಬಿಬಿಎಂಪಿಗೆ ಹಿಂದೂಪರ ಸಂಘಟನೆಗಳು ಮನವಿ ಸಲ್ಲಿಸಿದ್ದವು. ಆದರೆ ಮನವಿಗೆ ಬಿಬಿಎಂಪಿ ಅನುಮತಿ ನೀಡುವುದು ಅನುಮಾನ ಎನ್ನಲಾಗುತ್ತಿದೆ. ಹಿಂದೂಪರ ಸಂಘಟನೆಗಳು ಈಗಾಗಲೆ ಡೆಡ್ ಲೈನ್ ನೀಡಿವೆ ಆದರೂ ಕೂಡಾ ಅನುಮತಿ ಸಿಗೋದು ಕಷ್ಟ ಎನ್ನಲಾಗುತ್ತಿದೆ. ಈ ಸಂಬಂಧ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್ ಮಾತನಾಡಿ ನಮ್ಮ ದಾಖಲೆಗಳಲ್ಲಿ ಬಿಬಿಎಂಪಿ ಆಟದ ಮೈದಾನ ಅಂತಿದೆ. ಆಟ ಆಡೋಕೆ ಯಾವುದೇ ಅಭ್ಯಂತರ ಇಲ್ಲ. ಆದರೆ ಸಂಘಟನೆಗಳು ಕೇಳಿರೋದು ಸ್ವಾತಂತ್ರ್ಯ, ಯೋಗಾ ದಿನಾಚರಣೆಗೆ ಮಾಡಲು ಅನುಮತಿ ಕೇಳಿವೆ. ಮತ್ತೊಂದು ಕಡೆ ವಕ್ಫ್ ಬೋರ್ಡ್ ನಿಂದ ನಮಗೆ ಪತ್ರ ಬಂದಿದೆ. ಚಾಮರಾಜಪೇಟೆ ಮೈದಾನ ನಮ್ಮ ವ್ಯಾಪ್ತಿಗೆ ಬರುತ್ತೆ ಅಂತಿದ್ದಾರೆ. ಇದನ್ನ ಪರಿಶೀಲನೆ ನಡೆಸಲು ಮುಖ್ಯ ಕಚೇರಿಗೆ ಕಳುಹಿಸಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಸುಬ್ರಹ್ಮಣ್ಯನಗರನಲ್ಲಿ ದೊಡ್ಡ ಮರವುರುಳಿ ಬಿದ್ದು ಮೂರು ಕಾರುಗಳು ಜಖಂ
ಈದ್ಗಾ ಮೈದಾನ ಯಾರಿಗೆ ಸೇರಿದ್ದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ಈದ್ಗಾ ಮೈದಾನದಲ್ಲಿ ಆಚರಿಸಲು ನಿರ್ಧಾರ ಮಾಡಲಾಗಿದೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಆದಿ ಟಿವಿ9ಗೆ ಮಾಹಿತಿ ನೀಡಿದ್ದಾರೆ. ವಿವಾದಿತ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲು ಹಿಂದೂ ಸಂಘಟನೆಗಳು ಮನವಿ ಮಾಡಿದ್ದವು. ಹಿಂದೂ ಸಂಘಟನೆಗಳ ಸಾಲು ಸಾಲು ಮನವಿ ಬೆನ್ನಲೆ ವಕ್ಫ್ ಬೋರ್ಡ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:13 am, Wed, 15 June 22