ವಕ್ಫ್‌ ಆಸ್ತಿ ಒತ್ತುವರಿ: ವಿಧಾನಪರಿಷತ್‌ನಲ್ಲಿ ಅನ್ವರ್ ಮಾನಪ್ಪಾಡಿ ವರದಿ ಮಂಡನೆ

ವಕ್ಫ್‌ ಆಸ್ತಿ ಒತ್ತುವರಿಗೆ ಸಂಬಂಧಿಸಿದ ಅನ್ವರ್ ಮಾನಪ್ಪಾಡಿ ವರದಿಯನ್ನು ವಿಧಾನಪರಿಷತ್‌ನಲ್ಲಿ ಮಂಡನೆ ಮಾಡಲಾಗಿದೆ. ವರದಿಯನ್ನು ಸಭಾನಾಯಕ ಶ್ರೀನಿವಾಸ ಪೂಜಾರಿ ಸದನಕ್ಕೆ ಸಲ್ಲಿಸಿದರು.

ವಕ್ಫ್‌ ಆಸ್ತಿ ಒತ್ತುವರಿ: ವಿಧಾನಪರಿಷತ್‌ನಲ್ಲಿ ಅನ್ವರ್ ಮಾನಪ್ಪಾಡಿ ವರದಿ ಮಂಡನೆ
ವಕ್ಫ್‌ ಆಸ್ತಿ ಒತ್ತುವರಿ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 22, 2022 | 8:35 PM

ಬೆಂಗಳೂರು: ವಕ್ಫ್‌ ಆಸ್ತಿ ಒತ್ತುವರಿಗೆ ಸಂಬಂಧಿಸಿದ ಅನ್ವರ್ ಮಾನಪ್ಪಾಡಿ ವರದಿಯನ್ನು ವಿಧಾನಪರಿಷತ್‌ನಲ್ಲಿ ಮಂಡನೆ ಮಾಡಲಾಗಿದೆ. ವರದಿಯನ್ನು ಸಭಾನಾಯಕ ಶ್ರೀನಿವಾಸ ಪೂಜಾರಿ ಸದನಕ್ಕೆ ಸಲ್ಲಿಸಿದರು. ಅನ್ವರ್ ಮಾನಪ್ಪಾಡಿ ವರದಿ ಪ್ರಸ್ತಾಪಿಸಿದ್ದಕ್ಕೆ ಕಾಂಗ್ರೆಸ್‌ ತೀವ್ರ ವಿರೋಧ ಮಾಡಿದ್ದು, ಈ ಹಿನ್ನೆಲೆ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ. ಗದ್ದಲದ ನಡುವೆ ರವಿಕುಮಾರ್ ಹೆಸರು ಪ್ರಸ್ತಾಪ ಮಾಡಿದ್ದು, ರೆಹಮಾನ ಖಾನ್, ಇಕ್ಬಾಲ್ ಅಹ್ಮದ್, ಜಾಫರ್ ಶರೀಫ್, ರೋಷನ್ ಬೇಗ್, ಎನ್.ಎ ಹ್ಯಾರಿಸ್, ಜಮೀರ್ ಅಹ್ಮದ್, ನಜೀರ್ ಅಹ್ಮದ್, ಖಮರುಲ್ ಇಸ್ಲಾಮ್ ಸೇರಿ 10 ಜನ ಕಾಂಗ್ರೆಸ್​ನವರು ಭಾಗಿಯಾಗಿದ್ದಾರೆ. ಈ‌ ಬಗ್ಗೆ ತನಿಖೆಯಾಗಲಿ ಎಂದು ರವಿಕುಮಾರ್ ಹೇಳಿದರು. ಹೆಸರು ಹೇಳಿದ ತಕ್ಷಣ ನಜೀರ್ ಅಹ್ಮದ್ ಆಕ್ಷೇಪ ವ್ಯಕ್ತಪಡಿಸಿದರು. ಮಂಡಣೆ ಆದ ನಂತರ ಚರ್ಚೆಯಾಗದೇ ಹೆಸರು ಯಾಕೆ ಹೇಳ್ತೀರಾ. ಚರ್ಚೆ ಆಗದೇ ಹೆಸರಿಗೆ ಮಸಿ ಬಳಿಯೋ‌ ಕೆಲಸ ಯಾಕೆ ಎಂದು ಪ್ರಶ್ನಿಸಿದರು.

2012 ರಲ್ಲಿ ಡಿ.ವಿ. ಸದಾನಂದ ಗೌಡ ಸಿಎಂ ಆಗಿದ್ದ ವೇಳೆ ರಾಜ್ಯ ಸರ್ಕಾರಕ್ಕೆ ವಕ್ಫ್ ಆಸ್ತಿ ಒತ್ತುವರಿ ವರದಿ ಸಲ್ಲಿಸಿತ್ತು. ಅನ್ವರ್ ಮಾಣಿಪ್ಪಾಡಿ ಅಂದಿನ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದರು. 2 ಲಕ್ಷದ 30 ಕೋಟಿ ರೂ. 29 ಸಾವಿರಕ್ಕೂ ಅಧಿಕ ಎಕರೆ ಒತ್ತುವರಿ ವಕ್ಫ್ ಆಸ್ತಿ ಕುರಿತ ವರದಿ ನೀಡಲಾಗಿತ್ತು. ವರದಿಯಲ್ಲಿ 12ಕ್ಕೂ ಅಧಿಕ ಕಾಂಗ್ರೆಸ್ ಮುಖಂಡರ ಹೆಸರುಗಳು ಉಲ್ಲೇಖವಾಗಿದೆ.

ಹತ್ತು ವರ್ಷಗಳ ಹಿಂದಿನ ವರದಿಗೆ ಮರು ಜೀವ ನೀಡಲು ನಿರ್ಧಾರ ಮಾಡಿದ್ದು, ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಈ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿಗೆ ಪಡೆದಿದ್ದರು. ಹತ್ತು ವರ್ಷಗಳ ಹಿಂದೆ 2ಜಿ ಸ್ಪ್ರೆಕ್ಟ್ರಂ ಹಗರಣಕ್ಕಿಂತಲೂ ದೊಡ್ಡದಾದ ಹಗರಣ ಎಂದು ಸಂಚಲನ ಸೃಷ್ಟಿಸಿತ್ತು. ಈ ಹಿಂದೆ ಡಿ.ಹೆಚ್. ಶಂಕರಮೂರ್ತಿ ಸಭಾಪತಿ ಆಗಿದ್ದ ವೇಳೆ ವಿಧಾನ ಪರಿಷತ್ತಿನಲ್ಲಿ ಮಂಡನೆಗೆ ಪ್ರಯತ್ನ ನಡೆದಿತ್ತು.

ಕರ್ನಾಟಕ ರಾಜ್ಯದಿಂದ ಹೆಚ್ಚು ಜಿಎಸ್​ಟಿ ತೆರಿಗೆ ಸಂಗ್ರಹ: ಸಿಎಂ ಬೊಮ್ಮಾಯಿ 

ಕರ್ನಾಟಕ ರಾಜ್ಯದಿಂದ ಹೆಚ್ಚು ಜಿಎಸ್​ಟಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ ಎಂದು ವಿಧಾನಪರಿಷತ್​​ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು. ಜಿಎಸ್​ಟಿ ಕೌನ್ಸಿಲ್​ನಿಂದ ರಾಜ್ಯಕ್ಕೆ 14,101 ಕೋಟಿ ರೂ. ಬರಬೇಕಿದೆ. ಮುಂದಿನ ವರ್ಷ ಸೆಪ್ಟೆಂಬರ್​ ಒಳಗೆ ಜಿಎಸ್​ಟಿ ಹಣ ಬರುವ ಸಾಧ್ಯತೆಯಿದೆ. ಕರ್ನಾಟಕ ರಾಜ್ಯ ದೇಶಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಹೀಗಾಗಿ ರಾಜ್ಯಕ್ಕೆ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಲಾಯಿತು. ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ನಾನು ವಾದ ಮಾಡಿದ್ದೇನೆ. ಬೆಂಗಳೂರಿನಿಂದಲೇ ಹೆಚ್ಚು ತೆರಿಗೆ ಬರುತ್ತದೆ. ಆದರೆ ಎಲ್ಲವನ್ನೂ ಬೆಂಗಳೂರಿಗೆ ಮಾತ್ರ ಬಳಸಿಕೊಳ್ಳಲು ಅಸಾಧ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಸ್ಟ್ರಾಂಗ್ ಸ್ಟೇಟ್ ಸ್ಟ್ರಾಂಗ್ ನೇಷನ್

ಡೆವಲೂಷನ್ ಆಫ್ ಫಂಡ್ಸ್ ಬಗ್ಗೆ ಪ್ರಶ್ನೆ ಇದೆ ಹಲವರದ್ದು. ಸ್ಟ್ರಾಂಗ್ ಸ್ಟೇಟ್ ಸ್ಟ್ರಾಂಗ್ ನೇಷನ್. ನಮ್ಮ ರಾಜ್ಯ ದೇಶಕ್ಕೆ ಕೊಡುಗೆ ನೀಡುತ್ತಿರುವ ರಾಜ್ಯ. ಕಾಂಟ್ರಿಬ್ಯೂಟರ್ ಸ್ಟೇಟ್​ಗೆ ಕೇಂದ್ರದಿಂದ ಬಹಳ ಬರುವುದಿಲ್ಲ. ಕಾಂಟ್ರಿಬ್ಯುಟರ್ ಸ್ಟೇಟ್​ಗೆ ವಿನಾಯಿತಿ ನೀಡಬೇಕು ಅಂತ ನಾನೂ ಜಿಎಸ್ಟಿ ಕೌನ್ಸಿಲ್​ನಲ್ಲಿ ವಾದ ಮಾಡಿದ್ದೇನೆ. ಬೆಂಗಳೂರಿನಿಂದಲೇ ಹೆಚ್ಚಿನ ಆದಾಯ ತೆರಿಗೆ ಬರುತ್ತದೆ. ಆದರೆ ಎಲ್ಲವನ್ನೂ ಬೆಂಗಳೂರಿಗೆ ಮಾತ್ರ ಬಳಸಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ಸೆಪ್ಟೆಂಬರ್ ಒಳಗೆ ಎಲ್ಲ ಜಿಎಸ್ಟಿ ಪರಿಹಾರ ಬಾಕಿ ಕೂಡ ಬರುವ ಸಾಧ್ಯತೆ ಇದೆ ಎಂದರು.

ಪ್ರತಿ ವರ್ಷ ಕ್ರೀಡೆಗೆ 8 ಲಕ್ಷ ಖರ್ಚು:

6 ಸಾವಿರ ಕೋಟಿ ಹೆಚ್ಚಿನ ಕ್ಲೇಮ್ ಮಾಡಿದ್ದೇವೆ. ಎಜಿ ಆಡಿಟ್ ಆದಮೇಲೆ ಕೇಂದ್ರ ಸರ್ಕಾರ ಅದನ್ನು ನೀಡಲೇಬೇಕಾಗುತ್ತದೆ. ಎಲ್ಲೆಲ್ಲಿ ಅನುದಾನ ಬರಲು ಸಾಧ್ಯವಿದೆ ಎಲ್ಲ ಪ್ರಯತ್ನ ಮಾಡುತ್ತೇವೆ. ಕ್ರೀಡೆಗೆ ಈಗಾಗಲೆ ಹೆಚ್ಚಿನ ಮಾನ್ಯತೆ ಅನುದಾನ ನೀಡಿದ್ದೇವೆ. ಮುಂದಿನ ಓಲಂಪಿಕ್ ವೇಳೆಗೆ 75 ಕ್ರೀಡಾಗಳು ಸಿದ್ದವಾಗ್ತಾರೆ. ಪ್ರತಿವರ್ಷ 8 ಲಕ್ಷ ಅವರಿಗಾಗಿ ಖರ್ಚು ಮಾಡುತ್ತಿದ್ದೇವೆ. ಗ್ರಾಮೀಣ ಕ್ರೀಡೆ ಉತ್ತೇಜನಕ್ಕೂ ನಾವು ಬೆಂಬಲ ನೀಡ್ತಿದ್ದೇವೆ. ಖೆಲೋ ಇಂಡಿಯಾಗೆ ವಿಶೇಷ ದುಡ್ಡು ಕೊಟ್ಟಿದ್ದೇವೆ ಏನೂ ಕೊರತೆ ಆಗದಂತೆ ನೋಡಿಕೊಳ್ತಿದ್ದೇವೆ. ಮಳೆಯ ವಿಶೇಷ ಪ್ಯಾಕೇಜ್ ಬಗ್ಗೆ ಕೇಳಿದ್ದೀರಿ. ಬೇರೆ ರಾಜ್ಯಗಳಿಗಿಂತ ಹೆಚ್ಚಿನ ದುಪ್ಪಟ್ಟು ಪರಿಹಾರ ನಾವು ನೀಡ್ತೇವೆ. ರಾಜ್ಯ ಸರ್ಕಾರದ ಬೊಕ್ಕಸದಿಂದ ಹೆಚ್ಚಿನ ಅನುದಾನ ಮಳೆ ಪರಿಹಾರ ರೂಪದಲ್ಲಿ ನೀಡುತ್ತಿದ್ದೇವೆ. ರಾಮನಗರ ಸಿಲ್ಕ್ ಎನ್ಡಿಆರ್ಎಫ್ ಅಡಿ ಬರುವುದಿಲ್ಲ ಆದರೂ ವಿಶೇಷವಾಗಿ ನೀಡುತ್ತಿದ್ದೇವೆ.

ಮೋಟರ್ ವೆಹಿಕಲ್ ಟ್ಯಾಕ್ಸ್ ನಾವು ಎಕ್ಸೆಂಪ್ಶನ್‌ ಮಾಡಿದ್ದೇವೆ. ಕಳೆದ ವರ್ಷ ಬಿಎಂಟಿಸಿ, ಕೆಎಸ್ಆರ್.ಟಿ.ಗೆ 2300 ಕೋಟಿ ನೀಡಿದ್ದೇವೆ. ಡೀಸೆಲ್ ದುಡ್ಡು ಸಮೇತ ಎಲ್ಲವನ್ನೂ ರಿಲೀಸ್ ಮಾಡಿದ್ದೇವೆ. ಬಿಎಂಟಿಸಿಗೆ ಏನು ಸಹಾಯ ಮಾಡಬೇಕೋ ಅದಕ್ಕಿಂತ ಹೆಚ್ಚು ಮಾಡಿದ್ದೇವೆ. ಶ್ರೀನಿವಾಸ್ ಕಮಿಟಿ ರಿಪೋರ್ಟ ಬಂದಿದೆ ಏನು ಆದಾಯ ಹೆಚ್ಚಳ ಮಾಡಬೇಕೋ ಮಾಡುತ್ತಿದ್ದೇವೆ. 950 ಇವಿ ಬಸ್ ಬಂದರೆ ಸಾಕಷ್ಟು ನೆರವಾಗಲಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada