ದೇಶ ವಿರೋಧಿಗಳನ್ನು ಮಟ್ಟಹಾಕಲು ಎಲ್ಲಾ ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕಿದೆ: ಸಿದ್ದರಾಮಯ್ಯ ಕರೆ

ಉಗ್ರಗಾಮಿಗಳು ಒಂದು ರಾಜ್ಯದಲ್ಲಿ ಕೃತ್ಯ ಎಸಗಿ ಬೇರೆ ರಾಜ್ಯದಲ್ಲಿ ತಲೆಮರಿಸಿಕೊಳ್ಳುತ್ತಾರೆ. ಇವರೆಲ್ಲರನ್ನು ಮಟ್ಟ ಹಾಕಬೇಕಿದೆ. ಹೀಗಾಗಿ ಈ ವಿಚಾರದಲ್ಲಿ ರಾಜ್ಯವಾರು ಅಧಿಕಾರಿಗಳ ಹಂತದಲ್ಲಿ ಸ್ವಲ್ಪ ತೊಂದರೆಗಳು ಆಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಿಕೊಂಡು ಗಡಿಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಕೊಟ್ಟರು.

ದೇಶ ವಿರೋಧಿಗಳನ್ನು ಮಟ್ಟಹಾಕಲು ಎಲ್ಲಾ ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕಿದೆ: ಸಿದ್ದರಾಮಯ್ಯ ಕರೆ
ಮುಖ್ಯಮಂತ್ರಿ ಸಿದ್ದರಾಮಯ್ಯ
Follow us
| Updated By: ವಿವೇಕ ಬಿರಾದಾರ

Updated on:Sep 13, 2023 | 12:37 PM

ಬೆಂಗಳೂರು ಸೆ.13: ಇತ್ತೀಚೆಗೆ ಸೈಬರ್ (Cyber) ಸೇರಿ ವಿವಿಧ ಮಾದರಿಯ ಕೇಸ್​ ಬೆಳಕಿಗೆ ಬರುತ್ತಿವೆ. ದೇಶ ವಿರೋಧಿಗಳು ಕರ್ನಾಟಕ, ಕೇರಳ ಸೇರಿದಂತೆ ಹಲವೆಡೆ ಇದ್ದಾರೆ. ಅವರನ್ನು ಮಟ್ಟಹಾಕಲು ಎಲ್ಲಾ ರಾಜ್ಯಗಳು (States) ಒಟ್ಟಾಗಿ ಕೆಲಸ ಮಾಡಬೇಕಿದೆ. ಪ್ರಮುಖವಾಗಿ ಉಗ್ರವಾದ ವಿಚಾರದಲ್ಲಿ ಒಟ್ಟಾಗಿ ಕೆಲಸ ಮಾಡಬೇಕಿದೆ. ಈ ಸಂಬಂಧ ಅಂತರಾಜ್ಯಗಳಲ್ಲಿ ಉಂಟಾಗುವ ಕಾನೂನಾತ್ಮ ತೊಡಕುಗಳನ್ನು ನಿವಾರಿಸಿಕೊಂಡು ಒಟ್ಟಾಗಿ ಕೆಲಸ ಮಾಡಬೇಕು. ಈ ಬಗ್ಗೆ ಅರಿವು ಮೂಡಿಸುವ ಜೊತೆಗೆ ಉತ್ತಮ ಭದ್ರತೆಯನ್ನು ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.

ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೋಟೆಲ್​ನಲ್ಲಿ ನಡೆದ ದಕ್ಷಿಣ ಭಾರತ ಡಿಜಿಪಿಗಳ ಕಾನ್ಫರೆನ್ಸ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಹಲವಾರು ಮಾದರಿಯ ಅಪರಾಧಗಳು ಖಾಸಗಿತನಕ್ಕೆ ದಕ್ಕೆ ಉಂಟು ಮಾಡುತ್ತಿವೆ. ಉಗ್ರಗಾಮಿಗಳು ಒಂದು ರಾಜ್ಯದಲ್ಲಿ ಕೃತ್ಯ ಎಸಗಿ ಬೇರೆ ರಾಜ್ಯದಲ್ಲಿ ತಲೆಮರಿಸಿಕೊಳ್ಳುತ್ತಾರೆ. ಇವರೆಲ್ಲರನ್ನು ಮಟ್ಟ ಹಾಕಬೇಕಿದೆ. ಹೀಗಾಗಿ ಈ ವಿಚಾರದಲ್ಲಿ ರಾಜ್ಯವಾರು ಅಧಿಕಾರಿಗಳ ಹಂತದಲ್ಲಿ ಸ್ವಲ್ಪ ತೊಂದರೆಗಳು ಆಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಿಕೊಂಡು ಗಡಿಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಕರೆ ಕೊಟ್ಟರು.

ಇದನ್ನೂ ಓದಿ: ರಾಜ್ಯಾದ್ಯಂತ ಡೆಂಗ್ಯೂ ಉಲ್ಬಣ: ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಇತ್ತಿಚೀನ ದಿನದಲ್ಲಿ ಸೈಬರ್ ಸೇರಿ ವಿವಿಧ ಮಾದರಿಯ ಕೇಸ್​ಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಆರೋಪಿಗಳಿಗಿಂತ ಒಂದು ಹೆಜ್ಜೆ ಮುಂದೆ ಇದ್ದು ಕೆಲಸ ಮಾಡಬೇಕಿದೆ. ಸಮಾಜವನ್ನು ಕಾಪಾಡಲು ಪೊಲೀಸ್ ಇಲಾಖೆ ಮಾಡುತ್ತಿರುವ ಕೆಲಸ ನಮಗೆ ಆತ್ಮವಿಶ್ವಾಸ ಹೆಚ್ಚಿಸುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಇನ್ನು ರಾಷ್ಟ್ರದ ಪ್ರಮುಖ ಪೊಲೀಸ್ ಅಧಿಕಾರಿಗಳು ಇಂದು ಸೌತ್ ಇಂಡಿಯಾ ಡಿಜಿಪಿಗಳ ಕಾನ್ಫರೆನ್ಸ್​​ನಲ್ಲಿ ಭಾಗಿಯಾಗಿರುವುದಕ್ಕೆ ಹೆಮ್ಮೆ ಇದೆ. ತಮಿಳುನಾಡು, ತೆಲಂಗಾಣ, ಆಂದ್ರಪ್ರದೇಶ, ಪುದುಚೇರಿ, ಅಂಡಮಾನ್-ನಿಕೋಬಾರ್ ಲಕ್ಷದ್ವೀಪ್​ಗಳ ಎನ್​ಸಿಸಿಬಿ, ಎನ್​ಐಎ, ಸಿಆರ್​ಪಿಎಫ್, ಸಿಐಎಸ್​ಎಫ್ ಮತ್ತು ಕೇಂದ್ರ ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದೀರಿ. ನಾವೆಲ್ಲರು ಒಟ್ಟಾಗಿ ಕೆಲಸ ಮಾಡೋಣ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:31 pm, Wed, 13 September 23

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ