AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಹಾದಿಗಳಿಗೆ ಏನು ಶಿಕ್ಷೆ: ಮುಸ್ಲಿಂ ಸಮುದಾಯದ ಮುಂದೆ ಸಪ್ತಸೂತ್ರದ ಪ್ರಶ್ನೆಯಿಟ್ಟ ಸಂತೋಷ್ ಗುರೂಜಿ

ಇಲ್ಲಿರುವ ಮುಸ್ಲಿಮರು ಬೇರೆ ದೇಶದಿಂದ ಬಂದವರೇನೂ ಅಲ್ಲ. ನಮ್ಮಲ್ಲೇ ಇದ್ದವರು. ಆದರೆ ಇತ್ತೀಚೆಗೆ ಮುಸ್ಲಿಂ ಹಾಗೂ ಹಿಂದೂಗಳ ನಡುವೆ ದೊಡ್ಡ ಕಂದಕ ಉಂಟಾಗುತ್ತಿದೆ.

ಜಿಹಾದಿಗಳಿಗೆ ಏನು ಶಿಕ್ಷೆ: ಮುಸ್ಲಿಂ ಸಮುದಾಯದ ಮುಂದೆ ಸಪ್ತಸೂತ್ರದ ಪ್ರಶ್ನೆಯಿಟ್ಟ ಸಂತೋಷ್ ಗುರೂಜಿ
ಸಂತೋಷ್ ಗುರೂಜಿ
TV9 Web
| Edited By: |

Updated on: Apr 11, 2022 | 2:10 PM

Share

ಬೆಂಗಳೂರು: ನಾನು ಸುಮಾರು 25 ವರ್ಷಗಳಿಂದ ಹಿಂದುತ್ವದ ಭಾಷಣ ಮಾಡುತ್ತಿದ್ದೇನೆ. ಆದರೆ ಈಗಿನ ಕಾಲಘಟ್ಟವೇ ಬೇರೆಯಾಗಿದೆ. ರಣರಂಗದಲ್ಲಿರುವ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಹಿಂದುತ್ವ ಸಂಘಟನೆಗಳ ಒಕ್ಕೂಟದ ಮುಖಂಡರಾದ ಸಂತೋಷ ಗುರೂಜಿ (Santhosh Guruji) ಹೇಳಿದರು. ಕಲಬುರ್ಗಿಯಲ್ಲಿ ಶೇ 70ರಷ್ಟು ವ್ಯಾಪಾರ ವಹಿವಾಟು ಮುಸ್ಲಿಮರ ಕೈಲಿದೆ. ವಿಜಯಪುರದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಇದರ ಬಗ್ಗೆ ನನಗೆ ಹೊಟ್ಟೆಕಿಚ್ಚು ಇಲ್ಲ. ಇಲ್ಲಿರುವ ಮುಸ್ಲಿಮರು ಬೇರೆ ದೇಶದಿಂದ ಬಂದವರೇನೂ ಅಲ್ಲ. ನಮ್ಮಲ್ಲೇ ಇದ್ದವರು. ಆದರೆ ಇತ್ತೀಚೆಗೆ ಮುಸ್ಲಿಂ ಹಾಗೂ ಹಿಂದೂಗಳ ನಡುವೆ ದೊಡ್ಡ ಕಂದಕ ಉಂಟಾಗುತ್ತಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. 4 ಸಾವಿರ ಸ್ವಾಮೀಜಿಗಳ ಬೆಂಬಲ ಹಾಗೂ ಆಶೀರ್ವಾದದೊಂದಿಗೆ ನಾನು ಸಂಧಾನಕ್ಕೆ ಬಂದಿದ್ದೇನೆ. ನಮ್ಮ 47 ಹಿಂದೂ ಸಂಘಟನೆಗಳನ್ನು ಸೇರಿಸಿ ಒಂದು ಹಿಂದೂ ರಕ್ಷಣಾ ಪರಿಷತ್ ಎನ್ನುವ ಒಕ್ಕೂಟ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಧಾರವಾಡದಲ್ಲಿ ನಿನ್ನೆ ರಾತ್ರಿ ಕಲ್ಲಂಗಡಿ ಹಣ್ಣಿಗಾಗಿ ಗಲಾಟೆ ನಡೆದಿದೆ. ಅದಕ್ಕೂ ಮೊದಲು ಮಾವಿನಹಣ್ಣಿಗಾಗಿ ಗಲಾಟೆ ನಡೆದಿತ್ತು. ಈ ಕಂದಕ ಮುಂದುವರೆಯಬಾರದು. ನಾವು ಮೊಟ್ಟ ಮೊದಲು ಭಾರತೀಯರಾಗಬೇಕು. ಹಿಂದೂ ಸಮಾಜ ವಿಶಾಲವಾಗಿದೆ ಎಂದು ಹೇಳಿದರು. ಚಂದ್ರು ಕೊಲೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಭಾಷೆ ಬರುವುದಿಲ್ಲ ಎಂದು ಚಂದ್ರವನ್ನು ಕೊಲೆ ಮಾಡಿದ್ದು ಸರಿಯಲ್ಲ. ಚಂದ್ರು ಅದಾಗಲೇ ಕೈಸ್ತ ಮತಕ್ಕೆ ಮತಾಂತರ ಆಗಿದ್ದರು. ಸತ್ಯವೆಂದರೆ ಅವನು ಈಗ ನಮ್ಮವನಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಶಾಂತಿ ಕದಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಪ್ತ ಸೂತ್ರದ ಪ್ರಶ್ನೆಗಳನ್ನು ಮುಸ್ಲಿಮರ ಮುಂದೆ ಇಟ್ಟಿದ್ದಾರೆ. ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಕ್ಕರೆ ನಾವೂ ಈಗಲೇ ನಿಮ್ಮೊಡನೆ ಸ್ನೇಹ ಮಾಡುತ್ತೇವೆ. ನಮ್ಮ ಹಿಂದೂ ಮುಖಂಡರನ್ನು ಒಪ್ಪಿಸುವ ಕಾರ್ಯ ನಾವು ಮಾಡುತ್ತೇವೆ ಎಂದು ಭರವಸೆ ನೀಡಿದರು.

  1. ಅಪರಾಧಿ, ಜಿಹಾದಿಗಳಿಗೆ ಹೇಗೆ ಶಿಕ್ಷೆ ನೀಡುವಿರಿ (ಜಿಹಾದಿಗಳನ್ನು ಧರ್ಮದಿಂದ ಹೊರಕ್ಕೆ ಹಾಕುವಿರಾ)
  2. ಸಂವಿಧಾನ, ಕೋರ್ಟ್ ಆದೇಶ ತಿರಸ್ಕರಿಸಿದ್ದಕ್ಕೆ ಪ್ರಾಯಶ್ಚಿತ್ತ ಏನು? (ಹಿಜಾಬ್ ವಿಚಾರದಲ್ಲಿ ಕೋರ್ಟ್ ಆದೇಶಕ್ಕೆ ಅವಮಾನ ಮಾಡಿದ್ದಾರೆ, ಅವರನ್ನು ಏನು ಮಾಡುವಿರಿ)
  3. ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಬೇಡ (ಹಿಜಾಬ್​ನಿಂದ ಕ್ರಾಸ್ ವೋಟ್ ಆಗುತ್ತೆ. ಹಿಜಾಬ್ ಹಾಕಿದ ಮಹಿಳೆಗೆ ಸಮಸ್ಯೆಯಾದರೆ ಸಿಸಿಟಿವಿಯಲ್ಲಿ ತಿಳಿಯುವುದಿಲ್ಲ. ಈ ಬಗ್ಗೆ ಮುಂದೆ ಏನು ಕ್ರಮ ಕೈಗೊಳ್ಳುತ್ತಿರಾ?
  4. ನಮಾಜ್ ಮಾಡುವ ಕೈಯಲ್ಲಿ ಮಚ್ಚು ಹಿಡಿಯಬಾರದು. ಇದನ್ನು ಘೋಷಣೆ ಮಾಡಿ
  5. ಸಂತಾನ ನಿಯಂತ್ರಣ ನೀತಿಗಾಗಿ ಹೋರಾಟಕ್ಕೆ ಬೆಂಬಲ ಇದೆಯ (ಇದು ಮುಂದಿನ ಅಭಿಯಾನ)
  6. ಮದರಸಗಳಲ್ಲಿ ಪ್ರಚೋದನ ಭಾಷಣಕ್ಕೆ ಕಡಿವಾಣ ಹಾಕಿ?
  7. ಗೋವುಗಳನ್ನು ಕದ್ದರೆ ಏನು ಕ್ರಮ ಕೈಗೊಳ್ಳುತ್ತೀರಿ? ಗೋವುಗಳನ್ನು ಕದಿಯುವವರಿಗೆ ಶಿಕ್ಷೆ ನೀಡುವಿರಾ?

ಇದನ್ನೂ ಓದಿ: ನುಗ್ಗಿಕೇರಿಯಲ್ಲಿ ಮುಸ್ಲಿಂ ವ್ಯಾಪಾರಿ ಮೇಲೆ ದೌರ್ಜನ್ಯ ಪ್ರಕರಣ; ಓರ್ವ ಶ್ರೀರಾಮ ಸೇನೆ ಕಾರ್ಯಕರ್ತನನ್ನು ಬಂಧಿಸಿದ ಧಾರವಾಡ ಪೊಲೀಸ್

ಇದನ್ನೂ ಓದಿ: ಹಿಂದೂ ಮುಸ್ಲಿಂ ಎಂದು ಯಾರಾದ್ರು ಅಡೆತಡೆ ಮಾಡಿದ್ರೆ..: ಹಾಸನದಲ್ಲಿ ಗುಡುಗಿದ ಹೆಚ್.ಡಿ ರೇವಣ್ಣ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್