ಪತಿ ಸ್ಯಾಡಿಸ್ಟ್ ಸೈಕೊ ಎಂದು ಆರೋಪಿಸಿ ಪತ್ನಿ ಆತ್ಮಹತ್ಯೆ, ಮತ್ತೊಂದೆಡೆ ಗಂಡ ಕೈಕೊಟ್ಟಿದ್ದಕ್ಕೆ ಹೆಂಡತಿ ಪ್ರತಿಭಟನೆ

‘ಯು ಆರ್ ಎ ಸ್ಯಾಡಿಸ್ಟ್ ಆ್ಯಂಡ್ ಸೈಕೋ’ ‘ಯು ಆರ್ ದ ವರ್ಸ್ಟ್​ ಪರ್ಸನ್’ ಎಂದು ಡೆತ್‌ನೋಟ್ ಬರೆದಿಟ್ಟು ಇಂದುಶ್ರೀ ನೇಣಿಗೆ ಶರಣಾಗಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಪತಿ ಸ್ಯಾಡಿಸ್ಟ್ ಸೈಕೊ ಎಂದು ಆರೋಪಿಸಿ ಪತ್ನಿ ಆತ್ಮಹತ್ಯೆ, ಮತ್ತೊಂದೆಡೆ ಗಂಡ ಕೈಕೊಟ್ಟಿದ್ದಕ್ಕೆ ಹೆಂಡತಿ ಪ್ರತಿಭಟನೆ
ಪ್ರಾತಿನಿಧಿಕ ಚಿತ್ರ
Edited By:

Updated on: Mar 19, 2022 | 10:59 AM

ಬೆಂಗಳೂರು: ಪತಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗಾಯತ್ರಿ ನಗರದಲ್ಲಿ ನಡೆದಿದೆ. ಇಂದುಶ್ರೀ ಎಂಬವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. 2 ವರ್ಷದ ಪ್ರೀತಿ, 9 ತಿಂಗಳ ದಾಂಪತ್ಯ ಬಳಿಕ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾದ ಬಳಿಕವೂ ಇತರ ಯುವತಿ ಜತೆ ಲವ್ವಿ ಡವ್ವಿ ಇತ್ತು ಎಂದು ಪತಿ ವಿರುದ್ಧ ಇಂದುಶ್ರೀ ಆರೋಪ ಮಾಡಿದ್ದಾರೆ. ‘ಯು ಆರ್ ಎ ಸ್ಯಾಡಿಸ್ಟ್ ಆ್ಯಂಡ್ ಸೈಕೋ’ ‘ಯು ಆರ್ ದ ವರ್ಸ್ಟ್​ ಪರ್ಸನ್’ ಎಂದು ಡೆತ್‌ನೋಟ್ ಬರೆದಿಟ್ಟು ಇಂದುಶ್ರೀ ನೇಣಿಗೆ ಶರಣಾಗಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ರಾಯಚೂರು: ಪ್ರೀತಿಸಿ ಮದುವೆಯಾದ ಪತಿ ಕೈಕೊಟ್ಟಿದ್ದಕ್ಕೆ ಪತ್ನಿ ಪ್ರತಿಭಟನೆ

ಪ್ರೀತಿಸಿ ಮದುವೆಯಾದ ಪತಿ ಕೈಕೊಟ್ಟಿದ್ದಕ್ಕೆ ಪತ್ನಿ ಪ್ರತಿಭಟನೆ ಮಾಡಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದಿದೆ. ಪತಿಯ ಮನೆ ಎದುರು ಪತ್ನಿ ಶಾಂತಾಬಾಯಿ ಕಣ್ಣೀರು ಹಾಕಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಪ್ರತಾಪ್ ಕೈಕೊಟ್ಟ ಆರೋಪ ಕೇಳಿಬಂದಿದೆ. ಮನೆಯಲ್ಲಿ ಬಾಡಿಗೆಗಿದ್ದವಳನ್ನೇ ಪ್ರೀತಿಸಿ ಮದುವೆಯಾಗಿದ್ದ ಪ್ರತಾಪ್ ಹಾಗೂ ಪತಿಯ ಕುಟುಂಬಸ್ಥರ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್​ ದಾಖಲು ಮಾಡಲಾಗಿದೆ.

YouTube video player

ಇತರ ಅಪರಾಧ ಸುದ್ದಿಗಳು

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ-4 ರ ದೊಡ್ಡೇರಿ ಗ್ರಾಮದ ಬಳಿಯ ಪಂಜಾಬಿ ಡಾಬಾದಲ್ಲಿ ಚಾಲಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನ ಬಂಧನ ಮಾಡಲಾಗಿದೆ. ಜಮ್ಮು ಮೂಲದ ಸಂಶುದ್ದೀನ್ (42) ಬಂಧಿಸಲಾಗಿದ್ದು, 1 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ.

ಚಿತ್ರದುರ್ಗ: ಮೊಳಕಾಲ್ಮೂರು ಪೊಲೀಸರಿಂದ ನಾಲ್ವರು ಕಳ್ಳರ ಬಂಧನ ಮಾಡಲಾಗಿದೆ. ಬಂಧಿತರಿಂದ 10 ಗ್ರಾಂ ಚಿನ್ನ, ನಗದು ವಶಪಡಿಸಲಾಗಿದೆ. ಮೊಳಕಾಲ್ಮೂರು ಪಟ್ಟಣದ ಅಬ್ದುಲ್ ರೆಹಮಾನ್, ವಾಸಿಂ ಅಕ್ರಂ, ಅಲ್ಲಾಭಕ್ಷ್​​, ಉಮರ್ ಫಾರುಕ್ ಬಂಧಿತ ಆರೋಪಿಗಳು.

ದಾವಣಗೆರೆ: ಇಲ್ಲಿ ಜಗಳೂರು ಕೆರೆ ತುಂಬಿಸುವ ಯೋಜನೆ ಪೈಪ್​​ಲೈನ್ ನೀರು ಜಮೀನಿಗೆ ನುಗ್ಗಿ ರೈತರು ಕಂಗಾಲಾಗಿದ್ದಾರೆ. ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಕೇಳಿಬಂದಿದೆ.

ಇದನ್ನೂ ಓದಿ: Crime News: ವಿಚಾರಣಾಧೀನ ಖೈದಿ ಜೈಲಿನ ಮುಖ್ಯ ದ್ವಾರದಿಂದಲೇ ಎಸ್ಕೇಪ್! ಬೆಳಗಾವಿಯಲ್ಲಿ ಘಟನೆ

ಇದನ್ನೂ ಓದಿ: Crime News: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಆತ್ಮಹತ್ಯೆ ಮಾಡಿಕೊಂಡ 88 ವರ್ಷದ ವೃದ್ಧ

Published On - 10:54 am, Sat, 19 March 22

Follow Us