ತನ್ನ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ? ಎಂದು ಪಿಎಸ್ಐ ಗಂಡನ ವಿರುದ್ಧ ಗಂಭೀರ ಆರೋಪ ಮಾಡಿದ 2ನೇ ಪತ್ನಿ; ಜೆ.ಸಿ.ನಗರ ಠಾಣೆಯಲ್ಲಿ FIR ದಾಖಲು

| Updated By: ಆಯೇಷಾ ಬಾನು

Updated on: Jun 05, 2022 | 8:42 PM

ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಮಲತಂದೆಯೇ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ ಎಂದು ಪಿಎಸ್ಐ 2ನೇ ಪತ್ನಿ ಆರೋಪ ಮಾಡಿದ್ದಾರೆ. ಸಂತ್ರಸ್ತೆಯನ್ನು ಎರಡನೆ ಮದುವೆಯಾಗಿದ್ದ ಪಿಎಸ್ಐ, ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ತನ್ನ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ? ಎಂದು ಪಿಎಸ್ಐ ಗಂಡನ ವಿರುದ್ಧ ಗಂಭೀರ ಆರೋಪ ಮಾಡಿದ 2ನೇ ಪತ್ನಿ; ಜೆ.ಸಿ.ನಗರ ಠಾಣೆಯಲ್ಲಿ FIR ದಾಖಲು
FIR
Follow us on

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಎಸ್ಪಿ ಕಚೇರಿಯಲ್ಲಿನ ಪಿಎಸ್ಐ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಪಿಎಸ್ಐ 2ನೇ ಪತ್ನಿ ತನ್ನ ಪತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದು ಪೋಕ್ಸೊ, ಅತ್ಯಾಚಾರ ಕೇಸ್ ದಾಖಲಿಸಿದ್ದಾರೆ. ಪತ್ನಿ ದೂರಿನ ಹಿನ್ನೆಲೆ ಜೆ.ಸಿ.ನಗರ ಠಾಣೆಯಲ್ಲಿ FIR ದಾಖಲಾಗಿದೆ.

ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಮಲತಂದೆಯೇ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ ಎಂದು ಪಿಎಸ್ಐ 2ನೇ ಪತ್ನಿ ಆರೋಪ ಮಾಡಿದ್ದಾರೆ. ಸಂತ್ರಸ್ತೆಯನ್ನು ಎರಡನೆ ಮದುವೆಯಾಗಿದ್ದ ಪಿಎಸ್ಐ, ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿದ್ದಾರೆ. ತನ್ನ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ಗಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: World Environment day 2022: ಬಾಲ್ಯದ ಶ್ರೀಮಂತ ನೈಸರ್ಗಿಕ ಜೀವನದ ಸವಿನೆನಪು

ಮದುವೆಯಾದ ದಿನಗಳಲ್ಲಿ ಚೆನ್ನಾಗಿಯೇ ಇದ್ದು ಅನೈಸರ್ಗಿಕವಾಗಿ ನನಗೆ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಮಂಚಕ್ಕೆ ಕಟ್ಟಿ ಹಾಕಿ ಹೊಡೆಯುತ್ತಿದ್ದನು ಎಂದು 2ನೇ ಪತ್ನಿ ಆರೋಪಿಸಿದ್ದು ಘಟನೆ ಸಂಬಂಧ ಜೆ.ಸಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ