ಬೆಂಗಳೂರಿನಲ್ಲಿ 66 ವರ್ಷಗಳ ದಾಖಲೆ ಮುರಿದ ಮಳೆ, ಪ್ರವಾಹ ನಿಯಂತ್ರಣಕ್ಕೆ ಬೇಕಿದೆ 600 ಕಿಮೀ ಒಳಚರಂಡಿ

Bengaluru Rain: ಈ ಮೇ ತಿಂಗಳಿನಲ್ಲಿ ಸುರಿದ ಮಳೆ ದಾಖಲೆಯನ್ನು ಸೃಷ್ಟಿಸಿದೆ. ನಗರದಲ್ಲಿ ಸುಮಾರು 31 ಸೆಂ.ಮೀ ಮಳೆಯಾಗಿದ್ದು, 66 ವರ್ಷಗಳ ದಾಖಲೆಯನ್ನು ಮುರಿದಿದೆ. ಇದರ ನಡುವೆ ಮತ್ತೊಂದು ಅಚ್ಚರಿಯ ವರದಿ ಹೊರ ಬಿದ್ದಿದೆ.

ಬೆಂಗಳೂರಿನಲ್ಲಿ 66 ವರ್ಷಗಳ ದಾಖಲೆ ಮುರಿದ ಮಳೆ, ಪ್ರವಾಹ ನಿಯಂತ್ರಣಕ್ಕೆ ಬೇಕಿದೆ 600 ಕಿಮೀ ಒಳಚರಂಡಿ
ಪ್ರಾತಿನಿಧಿಕ ಚಿತ್ರ
Follow us
|

Updated on: Jun 01, 2023 | 10:42 AM

ಬೆಂಗಳೂರು: ಮಳೆಗಾಲಕ್ಕೂ ಮುಂಚೆಯೇ ಬೆಂಗಳೂರಿನಲ್ಲಿ ಸುರಿದ ಮಳೆ ಭಾರೀ ಅವಾಂತರಗಳನ್ನು ಸೃಷ್ಟಿಸಿತ್ತು(Bengaluru Rain). ರಣ ಮಳೆಯಿಂದಾಗಿ ಜನ ಹೈರಾಣಾಗಿದ್ದರು. ಮಳೆಗೆ ಇಬ್ಬರು ಬಲಿಯಾಗಿದ್ದರು. ಈ ಮೇ ತಿಂಗಳಿನಲ್ಲಿ ಸುರಿದ ಮಳೆ ದಾಖಲೆಯನ್ನು ಸೃಷ್ಟಿಸಿದೆ. ನಗರದಲ್ಲಿ ಸುಮಾರು 31 ಸೆಂ.ಮೀ ಮಳೆಯಾಗಿದ್ದು, 66 ವರ್ಷಗಳ ದಾಖಲೆಯನ್ನು ಮುರಿದಿದೆ(Recorderd Rainfall). ಇದರ ನಡುವೆ ಮತ್ತೊಂದು ಅಚ್ಚರಿಯ ವರದಿ ಹೊರ ಬಿದ್ದಿದೆ. ಆಸ್ತಿ ಸಲಹಾ ಸಂಸ್ಥೆಯಾಗಿರುವ ನೈಟ್ ಫ್ರಾಂಕ್ ಇಂಡಿಯಾ(Knight Frank India), ನಗರದ ಮಳೆನೀರು ಒಳಚರಂಡಿ ಮೂಲಸೌಕರ್ಯದಲ್ಲಿನ ಅಂತರವನ್ನು ಅರ್ಥಮಾಡಿಕೊಳ್ಳಲು ಅಸ್ತಿತ್ವದಲ್ಲಿರುವ ಡೇಟಾವನ್ನು ಆಧರಿಸಿ ಅಧ್ಯಯನವನ್ನು ಮಾಡಿ ವರದಿಯೊಂದನ್ನು ಬಿಡುಗಡೆ ಮಾಡಿದ್ದಾರೆ(Stormwater Drainage). ಆ ವರದಿಯ ಪ್ರಕಾರ ನಗರದಲ್ಲಾಗುವ ಪ್ರವಾಹವನ್ನು ತಡೆಗಟ್ಟಲು ಬೆಂಗಳೂರಿಗೆ ಹೆಚ್ಚುವರಿ 600 ಕಿಮೀ ಚರಂಡಿಗಳ ಅಗತ್ಯವಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ದಾಖಲೆ ಮಟ್ಟದಲ್ಲಿ ಮಳೆ

ಬೆಂಗಳೂರಿನಲ್ಲಿ ಈ ತಿಂಗಳು ದಾಖಲೆ ಮಟ್ಟದಲ್ಲಿ ಮಳೆಯಾಗಿದೆ. ನಗರದಲ್ಲಿ 30.1 ಸೆಂ.ಮೀ ಮಳೆ ದಾಖಲಾಗುವುದರ ಮೂಲಕ, ಇದು ಮೇ 1957 ರಲ್ಲಿ ದಾಖಲಾದ 28 ಸೆಂ.ಮೀ.ನ ದೀರ್ಘಾವಧಿಯ ದಾಖಲೆಯನ್ನು ಮುರಿದಿದೆ. 2015 ರಿಂದ ಇಲ್ಲಿಯವರೆಗೆ ಪ್ರತಿ ವರ್ಷ, ಬೆಂಗಳೂರಿನಲ್ಲಿ ಮೇ ತಿಂಗಳಲ್ಲಿ ಸುರಿಯುವ ಮಳೆಯು ಸರಾಸರಿ ವರ್ಷಕ್ಕೆ ಒಟ್ಟು 128.7 ಮಿಮೀ ಮಳೆಗಿಂತ ಹೆಚ್ಚಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದತ್ತಾಂಶ ತೋರಿಸುತ್ತದೆ. ಕಳೆದ ಎಂಟು ವರ್ಷಗಳಲ್ಲಿ ಮೇ ತಿಂಗಳ ಸರಾಸರಿ ಮಳೆ 18.5 ಸೆಂ.ಮೀ ಇದೆ. ಕಳೆದ ವರ್ಷ ಅತಿ ಹೆಚ್ಚು ಅಂದ್ರೆ 27 ಸೆಂ.ಮೀ ಮಳೆಯಾಗಿದ್ದು, 2020 ಮತ್ತು 2021ರಲ್ಲಿ ಅತಿ ಕಡಿಮೆ ಅಂದ್ರೆ 13 ಸೆಂ.ಮೀ. ಮಳೆಯಾಗಿತ್ತು.

ಈ ವರ್ಷ ಮಾರ್ಚ್ 1 ರಿಂದ ಮೇ 31ರವರೆಗೆ ಬೆಂಗಳೂರು ನಗರದಲ್ಲಿ 343 ಮಿಮೀ ಮಳೆಯಾಗಿದ್ದು, ಸಾಮಾನ್ಯಕ್ಕಿಂತ 173 ಮಿಮೀ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ವರದಿ ತಿಳಿಸಿದೆ. ಎಚ್ ಎಎಲ್ ವಿಮಾನ ನಿಲ್ದಾಣದ ಬಳಿ 275 ಮಿ.ಮೀ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 227 ಮಿ.ಮೀ ಮಳೆ ದಾಖಲಾಗಿದೆ.

ಮಳೆಯ ಅವಘಡ ತಡೆಯಲು ಬೆಂಗಳೂರಿಗೆ ಬೇಕಿದೆ 600 ಕಿಮೀ ಒಳಚರಂಡಿ ವಿಸ್ತರಣೆ

ಅಂತಾರಾಷ್ಟ್ರೀಯ ಆಸ್ತಿ ಸಲಹಾ ಸಂಸ್ಥೆಯಾಗಿರುವ ನೈಟ್ ಫ್ರಾಂಕ್ ಇಂಡಿಯಾ, ಬೆಂಗಳೂರು ನಗರ ಪ್ರವಾಹದ ಬಗ್ಗೆ ವರದಿ ಬಿಡುಗಡೆ ಮಾಡಿದ್ದು, ನಗರದಲ್ಲಿ ಮಳೆಯಿಂದಾಗುವ ಪ್ರವಾಹ ಪರಿಸ್ಥಿತಿ ತಡೆಗೆ 658 ಕಿಮೀಗಳಷ್ಟು ಪ್ರಾಥಮಿಕ ಮತ್ತು ಮಾಧ್ಯಮಿಕ ಒಳ ಚರಂಡಿಗಳನ್ನು ನಿರ್ಮಿಸಬೇಕಾದ ಅಗತ್ಯವಿದೆ ಎಂದಿದ್ದಾರೆ.

ಇದನ್ನೂ ಓದಿ: Bengaluru: ಬೆಂಗಳೂರು ಟು ಅಗಾರ್ತಲ; ಆಗಸ್ಟ್ 1ರಿಂದ ವಿಸ್ತಾರ ಏರ್​ಲೈನ್ಸ್ ವಿಮಾನ ಸೇವೆ

ಬೆಂಗಳೂರು ಅರ್ಬನ್ ಫ್ಲಡ್ ಎಂಬ ಶೀರ್ಷಿಕೆಯಡಿ ಸಿದ್ಧವಾದ ಆ ವರದಿಯ ಪ್ರಚಾರ, ಸದ್ಯ ಈಗ ಬೆಂಗಳೂರು 842 ಕಿಮೀ ಚರಂಡಿಯನ್ನು ಹೊಂದಿದೆ. ಪ್ರಾದೇಶಿಕ ವಿಸ್ತರಣೆಗೆ ಪೂರಕವಾಗಿ, ನಗರದಲ್ಲಿ ಚರಂಡಿಗಳನ್ನು ವಿಸ್ತರಿಸುವ ಅಗತ್ಯವಿದೆ. ಅಸ್ತಿತ್ವದಲ್ಲಿರುವ ಚರಂಡಿಯನ್ನ ಸರಿಪಡಿಸುವ ಜೊತೆಗೆ ಹೊಸ ಚರಂಡಿಗಳ ನಿರ್ಮಾಣಕ್ಕೆ 2,800 ಕೋಟಿ ರೂ.ಗಳ ಅತ್ಯವಿದೆ ಎಂದು ಅಂದಾಜಿಸಲಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಬದಲಾಗುತ್ತಿರುವ ಸ್ಥಳಾಕೃತಿ ಮತ್ತು ಒಳಚರಂಡಿ ವ್ಯವಸ್ಥೆಯಿಂದ ಈ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಕಳೆದ ಎರಡು ದಶಕಗಳಲ್ಲಿ ಬೆಂಗಳೂರಿನ ಜನಸಂಖ್ಯೆ ದ್ವಿಗುಣಗೊಂಡಿದ್ದು, ಮುಂದಿನ 10 ವರ್ಷಗಳಲ್ಲಿ 1.8 ಕೋಟಿಗೆ ತಲುಪುವ ಸಾಧ್ಯತೆಯಿದೆ. ಜನಸಂಖ್ಯೆಗೆ ಅನುಗುಣವಾಗಿ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯವನ್ನು ಸಮರ್ಪಕವಾಗಿ ದುಪ್ಪಟ್ಟು ಅಭಿವೃದ್ಧಿಯ ಅಗತ್ಯವಿದೆ. ಜನಸಂಖ್ಯೆಯ ಬೆಳವಣಿಗೆಯಿಂದಾಗಿ, ನಗರದ ಭೂ ಬಳಕೆಯ ಡೈನಾಮಿಕ್ಸ್ ಗಮನಾರ್ಹವಾಗಿ ಬದಲಾಗಿದೆ. ಬೆಂಗಳೂರಿನ ಬಿಲ್ಟ್-ಅಪ್ ಪ್ರದೇಶದ ಪಾಲು 2002 ರಲ್ಲಿ ಶೇ. 37.4 ರಿಂದ 2020ರ ವೇಳೆಗೆ ಶೇ. 93.3 ಕ್ಕೆ ಏರಿಯಾಗಿದೆ ಎಂದು ತನ್ನ ವರದಿಯಲ್ಲಿ ವಿವರಿಸಲಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

ಪಂಜಾಬ್‌ನಲ್ಲಿ ಪೆಟ್ರೋಲ್ ಪಂಪ್‌ಗೆ ಗ್ರೆನೇಡ್ ಎಸೆದು ಬೆದರಿಕೆ
ಪಂಜಾಬ್‌ನಲ್ಲಿ ಪೆಟ್ರೋಲ್ ಪಂಪ್‌ಗೆ ಗ್ರೆನೇಡ್ ಎಸೆದು ಬೆದರಿಕೆ
ಪೆಟ್ರೋಲ್​ ಬಂಕ್​ನಲ್ಲಿ ಪ್ರೇಯಸಿಯನ್ನು ನೆಲಕ್ಕೆ ಕೆಡವಿ ಹೊಡೆದ ವ್ಯಕ್ತಿ
ಪೆಟ್ರೋಲ್​ ಬಂಕ್​ನಲ್ಲಿ ಪ್ರೇಯಸಿಯನ್ನು ನೆಲಕ್ಕೆ ಕೆಡವಿ ಹೊಡೆದ ವ್ಯಕ್ತಿ
ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ಬಿಗ್ ಬಾಸ್ ಮನೆಯಲ್ಲಿ ಧನರಾಜ್​ಗೆ ಹಾಡಿನ ಮೂಲಕ ಬುದ್ಧಿ ಹೇಳಿದ ಹನುಮಂತ
ಬಿಗ್ ಬಾಸ್ ಮನೆಯಲ್ಲಿ ಧನರಾಜ್​ಗೆ ಹಾಡಿನ ಮೂಲಕ ಬುದ್ಧಿ ಹೇಳಿದ ಹನುಮಂತ
ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ