AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: 2 ವರ್ಷದ ಪ್ರೀತಿ ಬ್ರೇಕಪ್​ನಲ್ಲಿ ಅಂತ್ಯ; ಪ್ರಿಯತಮನಿಗೆ ಬುದ್ಧಿ ಕಲಿಸಲು ಸ್ನೇಹಿತರ ಜತೆ ಸೇರಿ ಹಲ್ಲೆ

ಮನೆಗೆ ನುಗ್ಗಿ ಸಂತೋಷ್ ಮೇಲೆ ದಾಳಿ ಮಾಡಿದ್ದ ಯುವಕರ ಗುಂಪು, ಹಲ್ಲೆ ನಡೆಸಿ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಹೀಗಾಗಿ ಕೊಡಿಗೆಹಳ್ಳಿ ಠಾಣೆಗೆ ಸಂತೋಷ್ ದೂರು ನೀಡಿದ್ದು, ಪೊಲೀಸರು ದರೋಡೆ ಪ್ರಕರಣ ದಾಖಲಿಸಿದ್ದಾರೆ. ಆದರೆ ತನಿಖೆ ವೇಳೆ ಪ್ರಕರಣದ ಅಸಲಿಯತ್ತು ಬಯಲಾಗಿದೆ.

ಬೆಂಗಳೂರು: 2 ವರ್ಷದ ಪ್ರೀತಿ ಬ್ರೇಕಪ್​ನಲ್ಲಿ ಅಂತ್ಯ; ಪ್ರಿಯತಮನಿಗೆ ಬುದ್ಧಿ ಕಲಿಸಲು ಸ್ನೇಹಿತರ ಜತೆ ಸೇರಿ ಹಲ್ಲೆ
ಕೊಡಿಗೆಹಳ್ಳಿ ಠಾಣೆ
TV9 Web
| Edited By: |

Updated on:Nov 20, 2021 | 12:26 PM

Share

ಬೆಂಗಳೂರು: ಪ್ರಿಯಕರನ ಮೇಲೆ ಪ್ರಿಯತಮೆ ಹಲ್ಲೆ ಮಾಡಿಸಿದ ಘಟನೆ ಬೆಂಗಳೂರಿನ ಸಹಕಾರನಗರದಲ್ಲಿ ನಡೆದಿದೆ. ಪ್ರಿಯಕರ ಸಂತೋಷ್(23) ಮನೆಗೆ ನುಗ್ಗಿ ಯುವತಿಯ ಸ್ನೇಹಿತರು ಹಲ್ಲೆ ಮಾಡಿದ್ದಾರೆ. ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್, 2 ವರ್ಷದಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ ಕಾರಣ ಹೇಳದೆ ಯುವತಿ ಇತ್ತೀಚೆಗೆ ಬ್ರೇಕಪ್‌ ( Love Breakup) ಮಾಡಿದ್ದಳು. ಆದರೆ ಸಂತೋಪ್ ಪದೇ ಪದೇ ಕರೆ ಮಾಡಿ ಟಾರ್ಚರ್‌ ಕೊಡುತ್ತಿದ್ದ. ಹೀಗಾಗಿ ಬುದ್ಧಿ ಕಲಿಸಬೇಕೆಂದು ತನ್ನ ಸ್ನೇಹಿತನಿಗೆ ತಿಳಿಸಿದ್ದ ಯುವತಿ ನ.16ರ ರಾತ್ರಿ ಸಂತೋಷ್ ಇದ್ದ ಮನೆಯ ಮೇಲೆ ದಾಳಿ ಮಾಡಿಸಿದ್ದಾಳೆ.

ಮನೆಗೆ ನುಗ್ಗಿ ಸಂತೋಷ್ ಮೇಲೆ ದಾಳಿ ಮಾಡಿದ್ದ ಯುವಕರ ಗುಂಪು, ಹಲ್ಲೆ ನಡೆಸಿ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಹೀಗಾಗಿ ಕೊಡಿಗೆಹಳ್ಳಿ ಠಾಣೆಗೆ ಸಂತೋಷ್ ದೂರು ನೀಡಿದ್ದು, ಪೊಲೀಸರು ದರೋಡೆ ಪ್ರಕರಣ ದಾಖಲಿಸಿದ್ದಾರೆ. ಆದರೆ ತನಿಖೆ ವೇಳೆ ಪ್ರಕರಣದ ಅಸಲಿಯತ್ತು ಬಯಲಾಗಿದೆ.

ದಾವಣಗೆರೆ: ತಡ ರಾತ್ರಿ ಬೈಕ್​ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ರೈತರಿಂದ ಲಕ್ಷಾಂತರ ರೂಪಾಯಿ ದೋಚಿದ ದುಷ್ಕರ್ಮಿಗಳು ತಡ ರಾತ್ರಿ ಬೈಕ್​ ಅನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಸವಾರರ ಕಣ್ಣಿಗೆ ಖಾರದ ಪುಡಿ ಎರಚಿ ಲಕ್ಷಾಂತರ ರೂಪಾಯಿಯನ್ನು ದೋಚಿದ್ದಾರೆ. ಜಗದೀಶ್ (42) ವಿಶ್ವನಾಥ (31) ಹಣ ಕಳೆದುಕೊಂಡ ರೈತರು. ಇಬ್ಬರೂ ರೈತರು ವೀಳ್ಯದೆಲೆ ಮಾರಾಟ ಮಾಡಿ, ಗ್ರಾಮಕ್ಕೆ ವಾಪಸ್ಸಾಗುವಾಗ ತಡ ರಾತ್ರಿ ಈ ಘಟನೆ ನಡೆದಿದೆ. ಹರಿಹರ ತಾಲೂಕಿನ ಬೆಳ್ಳೂಡಿ- ರಾಮತೀರ್ಥ ಗ್ರಾಮಗಳ ನಡುವಿನ ಸೇತುವೆ ಮೇಲೆ ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳು ರೈತರಿಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ 4.69 ಲಕ್ಷ ರೂಪಾಯಿ ದೋಚಿದ್ದಾರೆ.

ಇಬ್ಬರು ರೈತರು ಹೋಗುತ್ತಿದ್ದ ವೇಳೆ ಮತ್ತೊಂದು ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ಇದ್ದಕ್ಕಿದ್ದಂತೆ ರೈತರ ಬೈಕ್​ಗೆ ಅಡ್ಡ ಹಾಕಿದ್ದಾರೆ. ಅಷ್ಟರಲ್ಲಿ ಒಟ್ಟು ನಾಲ್ವರು ಅಲ್ಲಿ ಜಮಾಯಿಸಿದ್ದಾರೆ. ಅವರೆಲ್ಲ ಚಾಕು ತೊರಿಸಿ, ರೈತರನ್ನು ಹೆದರಿಸಿದ್ದಾರೆ. ರೈತರಿಬ್ಬರೂ ತೀವ್ರ ಪ್ರತಿರೋಧ ವ್ಯಕ್ತಪಡಿಸಿದಾಗ ಕಣ್ಣಿಗೆ ಖಾರದ ಪುಡಿ ಎರಚಿ, ಹಣ ದೋಚಿ ಪರಾರಿಯಾಗಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಶಾಲನಗರದ ಮೊಬೈಲ್ ಅಂಗಡಿಯಲ್ಲಿ ಲಕ್ಷಾಂತರ ರೂ. ಮೊಬೈಲ್​ಗಳ ಕಳವು ರಾತ್ರಿ ವೇಳೆ ಮೇಲ್ಚಾವಣಿ ಕೊರೆದು ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನಲ್ಲಿ ನಡೆದಿದೆ. ಕುಶಾಲನಗರದ ಕೃಷ್ಣ ಮೊಬೈಲ್ ಅಂಗಡಿಯಲ್ಲಿ 1 ಲಕ್ಷ ರೂಪಾಯಿ ನಗದು, ಲಕ್ಷಾಂತರ ರೂ. ಮೌಲ್ಯದ ಮೊಬೈಲ್​ಗಳನ್ನು ಕಳವು ಮಾಡಲಾಗಿದೆ. ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೊಡಿಗೆಹಳ್ಳಿಯಲ್ಲಿ ಯುವಕನ ಮೇಲೆ ಹಲ್ಲೆ; ಪ್ರಭಾತ್ ಶಾಖೆ ಮುಚ್ಚುವಂತೆ ದುಷ್ಕರ್ಮಿಗಳಿಂದ ಧಮ್ಕಿ

Crime Update: ಊಟ ಖಾಲಿ ಎಂದಿದ್ದಕ್ಕೆ ಚಾಕು ಇರಿತ, ಬೈಕ್​ಗಳು ಮುಖಾಮುಖಿ ಇಬ್ಬರು ಸಾವು, ಪ್ರಿಯಕರನಿಂದ ಯುವತಿಯ ಹತ್ಯೆ

Published On - 12:19 pm, Sat, 20 November 21

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ