ಕೆಎಸ್ ಲೇಔಟ್​ನಲ್ಲಿ ತಂದೆಯ ತಿಥಿ ಕಾರ್ಯಕ್ಕೆಂದು ಅಡುಗೆ ಮಾಡುವಾಗ ಗ್ಯಾಸ್ ಸೋರಿಕೆಯಾಗಿ ಮಗಳ ದಾರುಣ ಸಾವು

ಗ್ಯಾಸ್ ಸೋರಿಕೆಯಾಗಿ ಬೆಂಕಿಯ ತೀವ್ರತೆಗೆ ಗ್ಯಾಸ್ ಫ್ಲೇಮ್ ದೊಡ್ಡದಾಗಿ ಹೊತ್ತಿಕೊಂಡಿದೆ. ಈ ಪರಿಣಾಮ ಅಡುಗೆ ಮಾಡ್ತಿದ್ದ ಮೃತನ ಮಗಳು ಪರಮೇಶ್ವರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೆಎಸ್ ಲೇಔಟ್​ನಲ್ಲಿ ತಂದೆಯ ತಿಥಿ ಕಾರ್ಯಕ್ಕೆಂದು ಅಡುಗೆ ಮಾಡುವಾಗ ಗ್ಯಾಸ್ ಸೋರಿಕೆಯಾಗಿ ಮಗಳ ದಾರುಣ ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Feb 17, 2022 | 12:25 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನ ಕಲಕುವ ಘಟನೆಯೊಂದು ನಡೆದಿದೆ. ತಂದೆಯ ತಿಥಿ ಕಾರ್ಯದ ದಿನವೇ ಮಗಳ ದಾರುಣ ಸಾವಾಗಿದೆ. ತಿಥಿ ಕಾರ್ಯಕ್ಕೆಂದು ಅಡುಗೆ ಮಾಡುವಾಗ ಗ್ಯಾಸ್ ಸೋರಿಕೆಯಾಗಿ ಅನಾಹುತ ಸಂಭವಿಸಿದ್ದು ಪರಮೇಶ್ವರಿ(42) ಮೃತಪಟ್ಟಿದ್ದಾರೆ.ನಗರದ ಕೆಎಸ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಮನೆಯೊಂದರಲ್ಲಿ ತಿಥಿ ಕಾರ್ಯಕ್ಕೆಂದು ಸಿದ್ಧತೆ ನಡೆದಿತ್ತು.

ಮನೆ ಚಿಕ್ಕದಿದ್ದ ಕಾರಣ ಕೋಣೆಯೊಂದರಲ್ಲಿ ಸ್ಟವ್ ಇಟ್ಟು ಅಡುಗೆ ಮಾಡಲು ಮೃತರ ಕುಟುಂಬಸ್ಥರು ತಯಾರಿ ನಡೆಸಿದ್ದರು. ತಿಥಿ ಕಾರ್ಯಕ್ಕೆ ನಾನ್ ವೆಜ್ ಅಡುಗೆ ಮಾಡಲು ಕುಟುಂಬಸ್ಥರು‌ ಸಿಲಿಂಡರ್ ತರಿಸಿದ್ದರು. ಇದೇ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿಯ ತೀವ್ರತೆಗೆ ಗ್ಯಾಸ್ ಫ್ಲೇಮ್ ದೊಡ್ಡದಾಗಿ ಹೊತ್ತಿಕೊಂಡಿದೆ. ಈ ಪರಿಣಾಮ ಅಡುಗೆ ಮಾಡ್ತಿದ್ದ ಮೃತನ ಮಗಳು ಪರಮೇಶ್ವರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಆರು ಮಂದಿಗೆ ಗಾಯಗಳಾಗಿದ್ದು, ವಿಕ್ಟೋರಿಯಾ ಬರ್ನಿಂಗ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯುವತಿ ರಕ್ಷಣೆ ಮಾಡಲು ಹೋಗಿ ಯುವಕ ನೀರುಪಾಲು ವಿಜಯನಗರ: ಸಾಲದ ಸುಳಿಗೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದಿದೆ. ಜಮೀನಿನಲ್ಲಿ ಮರಕ್ಕೆ‌ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗರಗದ ನಾಗರಾಜ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದ ನಾಗರಾಜ, ಸಾಲಕ್ಕೆ ಸೋತು ಸಾವಿಗೆ ಶರಣಾಗಿದ್ದಾರೆ. ಕೂಟ್ಟೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬಳ್ಳಾರಿ: ಕೆರೆ ನೋಡಲು ಹೋಗಿದ್ದಾಗ ಕಾಲು ಜಾರಿ ಬಿದ್ದಿದ್ದ ಯುವತಿ ರಕ್ಷಣೆ ಮಾಡಲು ಹೋಗಿ ಯುವಕ ನೀರುಪಾಲು ಆದ ದುರ್ಘಟನೆ ನಡೆದಿದೆ. ಸಂಡೂರು ತಾಲೂಕಿನ ಹೊಸದರೋಜಿ ಕೆರೆಯಲ್ಲಿ ಮುಳುಗಿ ಬಿಬಿಎ ವಿದ್ಯಾರ್ಥಿ ಸಂದೀಪ್ ಸಾವನ್ನಪ್ಪಿದ್ದಾರೆ. ಯುವತಿಯನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಅಡುಗೆ ಮನೆಯನ್ನು ನೀಟ್​ಆಗಿ ಇರಿಸಿಕೊಳ್ಳಲು ಹೀಗೆ ಮಾಡಿ