ಕಸ, ವಾಮಾಚಾರ ಆರೋಪ; ಮಾರಾಮಾರಿ, ನಿವೃತ್ತ ಎಎಸ್ಐ ಕುಟುಂಬಸ್ಥರ ಮೇಲೆ ಪೀಣ್ಯ ಠಾಣೆಯಲ್ಲಿ ಎಫ್ಐಆರ್
ಕಳೆದ ಗುರವಾರ ಅನಿತಾ ಕುಟುಂಬ ಮಂತ್ರಾಲಯಕ್ಕೆ ತೆರಳಿತ್ತು. ಈ ವೇಳೆ ಶುಕ್ರವಾರ ಬೆಳಗ್ಗೆ ಲಕ್ಷ್ಮಮ್ಮ ನಿಂಬೆಹಣ್ಣು ಹಾಕಿ ವಾಮಾಚಾರ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರು: ಜಗಳ ಶುರು ಆಗುವುದಕ್ಕೆ ಚಿಕ್ಕ ಕಾರಣಗಳು ಸಾಕು. ಆದ್ರೆ ಆ ಜಗಳದ ಪರಿಣಾಮ ಮಾತ್ರ ತುಂಬ ಕೆಟ್ಟ ರೀತಿಯಲ್ಲಾಗಿರುತ್ತೆ. ಸದ್ಯ ಕಸ(Garbage) ಹಾಕುವ ಬಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜೊತೆಗೆ ನಿವೃತ್ತ ಎಎಸ್ಐ ಪತ್ನಿಯಿಂದ ಗಾರ್ಮೆಂಟ್ಸ್ ಮುಂದೆ ವಾಮಾಚಾರ(Black Magic) ಮಾಡಲಾಗಿದೆ ಎಂಬ ಆರೋಪ ಸಹ ಕೇಳಿ ಬಂದಿದೆ. ಅನಿತಾ ಹಾಗೂ ಕುಟುಂಬಸ್ಥರ ಮೇಲೆ ಜವರೇಗೌಡ ಫ್ಯಾಮಿಲಿಯಿಂದ ಹಲ್ಲೆ ಆರೋಪ ಹಿನ್ನೆಲೆ ನಿವೃತ್ತ ಎಎಸ್ಐ ಜವರೇಗೌಡ, ಮಕ್ಕಳಾದ ಆನಂದ್ ಪಾಪು, ಮಗಳು ಕೋಮಲ ಮೇಲೆ ಎಫ್ಐಆರ್(FIR) ದಾಖಲಾಗಿದೆ.
ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನನಾಯಕನ ಪಾಳ್ಯದಲ್ಲಿ ಕಳೆದ ಮೂರುವರೆ ವರ್ಷದ ಹಿಂದೆ ಒಂದು ಗಾರ್ಮೆಂಟ್ಸ್ ಆರಂಭವಾಗಿತ್ತು. ಅದನ್ನು ಅನಿತಾ ಎಂಬುವವರು ನಡೆಸುತ್ತಿದ್ದಾರೆ. ರೆಸಿಡೆನ್ಸಿಯಲ್ ಏರಿಯಾದಲ್ಲಿ ಗಾರ್ಮೆಂಟ್ಸ್ ಹೊಂದಿದ್ದರಿಂದ ಮಾಜಿ ಎಎಸ್ಐ ಜವರೇಗೌಡ, ಅನಿತಾರಿಗೆ ಪ್ರಶ್ನೆ ಮಾಡಿದ್ದರು. ಹೀಗಾಗಿ ಇತ್ತೀಚೆಗೆ ಗಾರ್ಮೆಂಟ್ಸ್ ಶಿಫ್ಟ್ ಮಾಡಲು ಅನಿತಾ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅಲ್ಲದೇ ಎಎಸ್ಐ ಮನೆ ಹಿಂದೆ ಖಾಲಿ ಜಾಗ ಕೂಡ ಇದೆ. ಆ ಖಾಲಿ ಜಾಗದಲ್ಲಿ ಸ್ಥಳೀಯರು ಕಸ ತಂದು ಹಾಕುತ್ತಿದ್ದರು. ಗಾರ್ಮೆಂಟ್ಸ್ ಆರಂಭವಾದ ಮೇಲೆ ಆ ಖಾಲಿ ಜಾಗಕ್ಕೆ ರಸ್ತೆ ಹಾಕಿಸಲಾಗಿತ್ತು. ಹಾಗಾಗಿ ಜನ ಬಂದು ಕಸ ಹಾಕ್ತಿದ್ದಾರೆಂದು ಕೋಪಗೊಂಡಿದ್ದ ಎಎಸ್ಐ ಕುಟುಂಬ ಅನಿತಾರ ಜೊತೆ ಜಗಳವಾಡಿತ್ತು. ಇದರ ನಡುವೆ ಕಳೆದ ಗುರವಾರ ಅನಿತಾ ಕುಟುಂಬ ಮಂತ್ರಾಲಯಕ್ಕೆ ತೆರಳಿತ್ತು. ಈ ವೇಳೆ ಶುಕ್ರವಾರ ಬೆಳಗ್ಗೆ ಲಕ್ಷ್ಮಮ್ಮ ನಿಂಬೆಹಣ್ಣು ಹಾಕಿ ವಾಮಾಚಾರ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ ಅನಿತಾ ಕುಟುಂಬ ಇದನ್ನು ಪ್ರಶ್ನಿಸಿದೆ. ಈ ವೇಳೆ ಇಬ್ಬರು ಕುಟುಂಬಸ್ಥರ ಮಧ್ಯೆ ಮಾರಾಮಾರಿಯಾಗಿದೆ.
ಅನಿತಾ ಕುಟುಂಬಸ್ಥರ ಮೇಲೆ ಜವರೇಗೌಡ ಕುಟುಂಬ ಹಲ್ಲೆ ಮಾಡಿದ್ದಾರೆಂಬ ಆರೋಪ ಹಿನ್ನೆಲೆ ನಿವೃತ್ತ ಎಎಸ್ಐ ಜವರೇಗೌಡ, ಮಕ್ಕಳಾದ ಆನಂದ್ ಪಾಪು, ಮಗಳು ಕೋಮಲ ಮೇಲೆ ಎಫ್ಐಆರ್ ದಾಖಲಾಗಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ನಾಯ್ಕರ ಬೆವರ ಶ್ರಮಕ್ಕೆ ಭಾಗೀರಥಿ ಒಲಿದಳು, ಇದೀಗ ಶ್ರಮದ ಬದುಕಿಗೆ ಪದ್ಮಶ್ರೀ ಗೌರವ!