ನಮಗೆ ಹಣ ಬೇಡ ಅಕ್ಕಿಬೇಕು ಎಂದು ಸರ್ಕಾರಕ್ಕೆ ಮಹಿಳೆಯರ ಮನವಿ

ಕಾಂಗ್ರೆಸ್ ಪಕ್ಷ ಎಲೆಕ್ಷನ್ ಟೈಮಲ್ಲಿ ಪ್ರತಿಯೊಬ್ಬರಿಗೂ ಉಚಿತವಾಗಿ ಹತ್ತು ಕೆಜಿ ಅಕ್ಕಿಯನ್ನು ನೀಡ್ತಿವಿ ಅನ್ನೋ ಭರವಸೆ ಕೊಟ್ಟು ಈಗ ಅಕ್ಕಿ ಸಿಗದೆ ಪ್ರತಿಯೊಬ್ಬರ ಅಕೌಂಟ್ ಗೆ ಹಣ ಹಾಕ್ತಿದ್ದು ಮಹಿಳೆಯರು ಇದೀಗ ನಮಗೆ ಹಣ ಬೇಡ ಅಕ್ಕಿಬೇಕು ಎಂದು ಮನವಿ ಮಾಡ್ತಿದ್ದಾರೆ.

ನಮಗೆ ಹಣ ಬೇಡ ಅಕ್ಕಿಬೇಕು ಎಂದು ಸರ್ಕಾರಕ್ಕೆ ಮಹಿಳೆಯರ ಮನವಿ
ಸಾಂದರ್ಭಿಕ ಚಿತ್ರ
Follow us
Kiran Surya
| Updated By: ಆಯೇಷಾ ಬಾನು

Updated on: Jan 08, 2024 | 9:02 AM

ಬೆಂಗಳೂರು, ಜ.08: ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಪಂಚ ಗ್ಯಾರೆಂಟಿಗಳನ್ನು ಘೋಷಿಸಿತ್ತು. ಅದರಲ್ಲಿ ಬಹು ಮುಖ್ಯ ಗ್ಯಾರೆಂಟಿ ಅನ್ನ ಭಾಗ್ಯ(Anna Bhagya). ಇಂದಿನಿ ಸಿಎಂ ಸಿದ್ದರಾಮಯ್ಯ (Siddaramaiah) ಎಲೆಕ್ಷನ್ ಪ್ರಚಾರದಲ್ಲಿ ಹತ್ತು ಕೆ.ಜಿ ಅಕ್ಕಿ ಬೇಕಾ ಹಾಗಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಚುನಾವಣಾ ಪ್ರಚಾರದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ರು. ಆದರೆ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದ್ರು ಐದು ಕೆಜಿ ಅಕ್ಕಿ ನೀಡದೆ ಬದಲಿಗೆ ಹಣ ನೀಡುತ್ತಿದ್ದು ಇದೀಗ ಗೃಹಿಣಿಯರು ನಮಗೆ ಹಣ ಬೇಡ ಅಕ್ಕಿ ಬೇಕು ಎಂದು ಮನವಿ ಮಾಡ್ತಿದ್ದಾರೆ.

ರಾಜ್ಯದ ಜನರಿಗೆ ಅಕ್ಕಿ ಬದಲು ಹಣ ನೀಡ್ತಿರುವ ರಾಜ್ಯ ಸರ್ಕಾರಕ್ಕೆ ಜನರು ಹಣ ಬೇಡ ಅಕ್ಕಿ ನೀಡಿ ಎಂದು ಮನವಿ ಮಾಡಿದ್ದಾರೆ. ನಮಗೆ ಹಣ ಬೇಡ ಅಕ್ಕಿಯೇ ಕೊಡಿ ಎಂದು ರಾಜ್ಯದ ಜನತೆ ಅಭಿಮತದಿಂದ ಮನವಿ ಮಾಡಿದೆ. ಈ ಬಗ್ಗೆ ಒಂದಲ್ಲ‌ ಎರಡು ಸರ್ವೆಗಳು ನಡೆದಿದ್ದು ಅಕ್ಕಿಗೆ ಡಿಮ್ಯಾಂಡ್ ಹೆಚ್ಚಿದೆ. ಆಹಾರ ಇಲಾಖೆಯ ಅಧಿಕಾರಿ, ಸಿಬ್ಬಂದಿಯಿಂದ ಒಂದು ಸರ್ವೆ. ಸಿಎಂ ಕಚೇರಿಯ ಮೂಲಕ ಎನ್ ಜಿ ಒ ಮೂಲಕ ಮತ್ತೊಂದು ಸರ್ವೆ ನಡೆಸಲಾಗಿತ್ತು. ಈ ಎರಡು ಸರ್ವೆಯಲ್ಲಿ ಶೇ.60ಕ್ಕಿಂತಲೂ ಹೆಚ್ಚು ಮಂದಿ ಹಣ ಬೇಡ ಅಕ್ಕಿ ಕೊಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ದೊರೆಯುತ್ತಿಲ್ಲ. ಇದೇ ಕಾರಣಕ್ಕೆ ವರದಿಯನ್ನು ಬಿಡುಗಡೆ ಮಾಡುತ್ತಿಲ್ಲ. ಮತ್ತೂಂದೆಡೆ ಮಳೆ ಕೊರತೆಯಿಂದ ಭತ್ತದ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ. ಈ ಅಂಶಗಳ ಹಿನ್ನೆಲೆಯಲ್ಲಿ ತಾನೇ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ವರದಿಯನ್ನು ಬಿಡುಗಡೆಗೊಳಿಸಿಲ್ಲ. ಈ ಬಗ್ಗೆ ಮಹಿಳೆಯರು ನಮಗೆ ಹಣ ಬೇಡ ದಯವಿಟ್ಟು ಸರ್ಕಾರ ಅಕ್ಕಿ ಕೊಡಲಿ ಎಂದು ಮನವಿ ಮಾಡುತ್ತಿದ್ದಾರೆ.

ಅಕ್ಕಿ ಬದಲು ಹಣ ಹಾಕಿದ ಲೆಕ್ಕ

ತಿಂಗಳು ಫಲಾನುಭವಿಗಳ ಸಂಖ್ಯೆ ಫಲಾನುಭವಿಗಳ ಸಂಖ್ಯೆ
ಜುಲೈ 3 ಕೋಟಿ 45 ಲಕ್ಷ ₹566 ಕೋಟಿ
ಆಗಸ್ಟ್ 3 ಕೋಟಿ 69 ಲಕ್ಷ 605 ಕೋಟಿ
ಸೆಫ್ಟಂಬರ್  

3 ಕೋಟಿ 82 ಲಕ್ಷ

 

627 ಕೋಟಿ
ಆಕ್ಟೋಬರ್ 3 ಕೋಟಿ 92 ಲಕ್ಷ  

644 ಕೋಟಿ

 

ನವೆಂಬರ್ ನವೆಂಬರ್3 ಕೋಟಿ 97 ಲಕ್ಷ

 

651 ಕೋಟಿ
ಡಿಸೆಂಬರ್  

3 ಕೋಟಿ 99 ಲಕ್ಷ

 

655 ಕೋಟಿ

ಇನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರ ಅಕ್ಕಿ ಕೊಡಲು ಸಾಧ್ಯವಿಲ್ಲದ ಕಾರಣ ಪ್ರತಿ ವ್ಯಕ್ತಿಗೆ 170 ರೂಪಾಯಿ ನೀಡ್ತಿದೆ. 6 ತಿಂಗಳಿಗೆ ಅಕ್ಕಿ ಬದಲು ಸರ್ಕಾರದಿಂದ ಜನರ ಖಾತೆಗೆ ₹3751 ಕೋಟಿ ಹಣ ವರ್ಗಾವಣೆ ಆಗಿದೆ. ಪಡಿತರ ವಿತರಣಕರ ವಿರೋಧದ ನಡುವೆ ಆರು ತಿಂಗಳಿನಿಂದ ಜನರ ಖಾತೆಗೆ ಹಣ ಹಾಕಲಾಗ್ತಿದೆ.

ಜನರ ಅಭಿಪ್ರಾಯವೇನು?

ಪ್ರಸ್ತುತ ನೀಡುತ್ತಿರುವ ನಗದು ಅನ್ಯ ಉದ್ದೇಶಗಳಿಗೆ ಬಳಕೆ ಆಗುತ್ತಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ನೀಡಿದರೆ, ತಿಂಗಳ ಪೂರ್ತಿ ಮನೆಮಂದಿಯ ಹಸಿವು ನೀಗುತ್ತದೆ. ಕೆಲವೆಡೆ ಸೋರಿಕೆ ಆಗಬಹುದು ಅಥವಾ ಹಲವರು ಬೇರೆಯವರಿಗೆ ಮಾರಾಟವೂ ಮಾಡಬಹುದು. ಆದರೆ ಅತಿಹೆಚ್ಚು ಜನರಿಗೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರನ್ನು ಕೇಳಿದ್ರೆ ಕೆಲವಡೆ ಅಕ್ಕಿ ಬೇಕು ಕೆಲವಡೆ ಹಣ ಬೇಕು ಅಂತ ಕೇಳ್ತಿದ್ದಾರೆ. ರಾಜ್ಯದಲ್ಲಿ ಶೇ 70 ರಿಂದ 80% ಜನ ಅಕ್ಕಿ ಬೇಕು ಅಂತ ಕೇಳ್ತಿದ್ದಾರೆ. ಅಕ್ಕಿ ಕೊಡಬೇಕು ಅನ್ನೋ ಯೋಚನೆಯಿದೆ. ಆದಷ್ಟು ಬೇಗ ಅಕ್ಕಿಯನ್ನೆ ಕೊಡುವ ಕೆಲಸ ಮಾಡ್ತೀವಿ. ಆಂಧ್ರ ಪ್ರದೇಶ ತೆಲಂಗಾಣದಿಂದ ಸೇರಿದಂತೆ ಹಲವಡೆಯಿಂದ ಅಕ್ಕಿ ಖರೀದಿಗೆ ಮುಂದಾಗಿದ್ದೇವೆ. ಆದರೆ ಸಮರ್ಪಕವಾಗಿ ಬೆಲೆ ನಿಗದಿಯಾಗ್ತಿಲ್ಲ ಈ ಬಾರಿ ಉತ್ಪಾದನೆಯು ಕಡಿಮೆಯಾಗಿದೆ. ಆದಷ್ಟು ಬೇಗ ಅಕ್ಕಿ ಕೊಡುವ ಪ್ರಯತ್ನವನ್ನ ನಾವು ಮಾಡ್ತೀವಿ. ಅಲ್ಲಿಯವರೆಗೂ ನಾವು ಹೇಳಿದಂತೆ ಹಣ ಹಾಕ್ತಿವಿ ಎಂದು ತಿಳಿಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್