ಬೆಂಗಳೂರು: ಯಾವುದೇ ರೀತಿಯ ತನಿಖೆ ಮಾಡ್ಬೇಡಿ: ಡೆತ್​ನೋಟ್​ ಬರೆದಿಟ್ಟು ಯುವತಿ ಆತ್ಮಹತ್ಯೆ

ಆಂಧ್ರ ಪ್ರದೇಶದ ಕಡಪ ಮೂಲದ ಯುವತಿಯೊಬ್ಬರು ಪಿಜಿಯ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ(ಅ.03) ಸಂಜೆ ಏಳು ಗಂಟೆಯಲ್ಲಿ ವೈಟ್​ಫೀಲ್ಡ್​(Whitefield)ನ ಪ್ರಶಾಂತ್ ಲೇಔಟ್​ನಲ್ಲಿ ನಡೆದಿದೆ. ಮೃತ ಯುವತಿ ಆತ್ಮಹತ್ಯೆ ಮಾಡಿಕೊಳ್ಳವ ಮುನ್ನ ಡೆತ್​ನೋಟ್​ ಬರೆದಿಟ್ಟಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರು: ಯಾವುದೇ ರೀತಿಯ ತನಿಖೆ ಮಾಡ್ಬೇಡಿ: ಡೆತ್​ನೋಟ್​ ಬರೆದಿಟ್ಟು ಯುವತಿ ಆತ್ಮಹತ್ಯೆ
ಗೌತಮಿ, ಆತ್ಮಹತ್ಯೆ ಮಾಡಿಕೊಂಡ ಯುವತಿ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Oct 04, 2024 | 4:55 PM

ಬೆಂಗಳೂರು, ಅ.04: ಡೆತ್​​ನೋಟ್ ಬರೆದಿಟ್ಟು ಪಿಜಿಯ ಐದನೇ ಮಹಡಿಯಿಂದ ಹಾರಿ ಆಂಧ್ರ ಪ್ರದೇಶದ ಕಡಪ ಮೂಲದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ(ಅ.03) ಸಂಜೆ ಏಳು ಗಂಟೆಯಲ್ಲಿ ವೈಟ್​ಫೀಲ್ಡ್​(Whitefield)ನ ಪ್ರಶಾಂತ್ ಲೇಔಟ್​ನಲ್ಲಿ ನಡೆದಿದೆ. ಗೌತಮಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಬೆಂಗಳೂರಿನಲ್ಲಿ ನೆಲಸಿದ್ದ ಮೃತ ಯುವತಿ, ಟಿಸಿಎಸ್​ನಲ್ಲಿ ಕೆಲಸ ಮಾಡುತ್ತಿದ್ದರು.

ಡೆತ್​ನೋಟ್​ನಲ್ಲಿ ಏನಿದೆ?

ಇನ್ನು ಸಾಯುವ ಮುನ್ನ ಡೆತ್​ನೋಟ್​ ಬರೆದಿಟ್ಟಿರುವ ಯುವತಿ, ‘ನನ್ನ ಮೃತ ದೇಹವನ್ನು ಪಿಎಂ(ಪೋಸ್ಟ್​ ಮಾರ್ಟಂ) ಮಾಡಬೇಡಿ. ಯಾವುದೇ ರೀತಿಯ ತನಿಖೆ ಸಹ ನಡೆಸಬೇಡಿ. ನನ್ನ ಪೋಷಕರಿಗೆ‌ ನನ್ನ ಮೃತ ದೇಹ ನೀಡಿ ಎಂದು ಡೆತ್ ನೋಟ್​ನಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಸೋದರತ್ತೆ ಬೆದರಿಕೆಗೆ ಹೆದರಿ ಅಳಿಯ ಆತ್ಮಹತ್ಯೆ! 17 ಗುಂಟೆ ಸೈಟ್ ವಿವಾದ, ಡೆತ್ ನೋಟ್​ನಲ್ಲಿತ್ತು ರಹಸ್ಯ

ಟಿಪ್ಪರ್ ಹರಿದು ಸ್ಕೂಟಿ ಸವಾರ ಸ್ಥಳದಲ್ಲಿಯೇ ಸಾವು

ಹಾವೇರಿ: ಟಿಪ್ಪರ್ ಹರಿದು ಸ್ಕೂಟಿ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ನಡೆದಿದೆ. 60 ವರ್ಷದ ನಾಗರಾಜ್ ಮುದೋಳಮಠ  ಮೃತ ಸ್ಕೂಟಿ ಸವಾರ. ರಸ್ತೆ ಕ್ರಾಸ್ ಮಾಡುವಾಗ ಈ ದುರ್ಘಟನೆ ನಡೆದಿದ್ದು, ಟಿಪ್ಪರ್ ಡಿಕ್ಕಿಯಾದ ರಭಸಕ್ಕೆ ದೇಹದ ಭಾಗವು ಛಿದ್ರವಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಡಾ.ಗಿರೇಶ ಬೋಜಣ್ಣನವರ್ ಭೇಟಿ ನೀಡಿ ಪರಿಶೀಲನೆ ‌ನಡೆಸಿದ್ದಾರೆ. ಈ ಕುರಿತು ರಾಣೇಬೆನ್ನೂರು ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:51 pm, Fri, 4 October 24