ಬೆಂಗಳೂರಿನಲ್ಲಿ ತಪ್ಪದ ಗುಂಡಿ ಗಂಡಾಂತರ; ಸ್ವಲ್ಪ ಯಾಮಾರಿದ್ರೂ ಅಪಘಾತ ಖಚಿತ

ಸಿಲಿಕಾನ್​ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿಂದಲೇ ಕೂಡಿದ್ದು, ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸುವ ಪರಿಸ್ಥಿತಿ ಎದುರಾಗಿದೆ. ಬಿಬಿಎಂಪಿ ಹೆಡ್ ಆಫೀಸ್​ಗೂ ಕೂದಲೆಳೆ ಅಂತರದಲ್ಲಿರುವ ಡಬಲ್ ರೋಡ್ ಬಳಿ ಸಾಲು ಸಾಲು ಗುಂಡಿಗಳು ಬಿದ್ದಿದ್ದು, ಯಾವೊಬ್ಬ ಅಧಿಕಾರಿಗಳು ಕೂಡ ಸರಿಪಡಿಸುವ ಕೆಲಸ ಮಾಡಿಲ್ಲ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಬೆಂಗಳೂರಿನಲ್ಲಿ ತಪ್ಪದ ಗುಂಡಿ ಗಂಡಾಂತರ; ಸ್ವಲ್ಪ ಯಾಮಾರಿದ್ರೂ ಅಪಘಾತ ಖಚಿತ
ಬೆಂಗಳೂರಿನಲ್ಲಿ ತಪ್ಪದ ಗುಂಡಿ ಗಂಡಾಂತರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 04, 2024 | 4:00 PM

ಬೆಂಗಳೂರು, ಅ.04: ರಾಜ್ಯ ರಾಜಧಾನಿ ಬೆಂಗಳೂರಿನ(Bengaluru) ರಸ್ತೆಗಳು ಗುಂಡಿಗಳಿಂದಲೇ ಕೂಡಿದ್ದು, ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸುವ ಪರಿಸ್ಥಿತಿ ಎದುರಾಗಿದೆ. ಹೌದು, ಸಿಟಿಯ ಹೃದಯ ಭಾಗ ನಗರದ ಡಬಲ್ ರೋಡ್ ಬಳಿ ಸಾಲು ಸಾಲು ಗುಂಡಿಗಳು ಬಿದ್ದಿವೆ. ಜೊತೆಗೆ ಇದು  ಬಿಬಿಎಂಪಿ ಹೆಡ್ ಆಫೀಸ್​ಗೂ ಕೂದಲೆಳೆ ಅಂತರದಲ್ಲಿದೆ. ಹೀಗಿದ್ದರೂ ಯಾವೊಬ್ಬ ಅಧಿಕಾರಿಯು ಇತ್ತ ಕಡೆ ಗಮನಹರಿಸಿಲ್ಲ. ರಸ್ತೆಗಳನ್ನ ಸುಸ್ಥಿತಿಯಲ್ಲಿಡಬೇಕಿದ್ದ ಪಾಲಿಕೆಯೇ ಒಂದಷ್ಟು ದಿನ ಗುಂಡಿ ಮುಚ್ಚುವ ಕೆಲಸ ಮಾಡಿ ಮೌನಕ್ಕೆ ಜಾರಿದ್ದು, ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

ತಪ್ಪದ ಗುಂಡಿ ಗಂಡಾಂತರ

ಇನ್ನು ಇತ್ತೀಚೆಗಷ್ಟೇ 14 ಸಾವಿರ ಗುಂಡಿಗಳನ್ನು ಮುಚ್ಚಲಾಗಿತ್ತು ಎಂದು ಪಾಲಿಕೆ ಹೇಳಿಕೊಂಡಿತ್ತು. ಇದಾದ ಒಂದೇ ಒಂದು ಮಳೆಗೆ ಮತ್ತೆ ಡಾಂಬರು ಕಿತ್ತುಹೋಗಿದೆ. ಇದೇ ಗುಂಡಿಯಿಂದ ಎರೆಡು ಬಾರಿ ಬಿದ್ದಿದ್ದೇವೆ ಎಂದು ವಾಹನ ಸವಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. ನಾವು ಟ್ಯಾಕ್ಸ್ ಕಟ್ಟುತ್ತೇವೆ. ಆದರೆ, ನಮ್ಮ ರಸ್ತೆಗಳ ಪರಿಸ್ಥಿತಿ ಮಾತ್ರ ಸುಧಾರಿಸುತ್ತಿಲ್ಲ. ಇನ್ನು ಈ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ​ ಆದೇಶಕ್ಕೂ ಬಿಬಿಎಂಪಿ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್​ ಅವರು ಅಲ್ಲಲ್ಲಿ ಗುಂಡಿ ಮುಚ್ಚಿದ ಫೋಟೋ ಹಾಕುತ್ತಾರೆ. ಆದರೆ, ವಾಸ್ತವವಾಗಿ ಇವರ ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ.

ಇದನ್ನೂ ಓದಿ:ಬೆಂಗಳೂರು: ಮಳೆಯಿಂದಾಗಿ ಮತ್ತೆ ಬಾಯ್ದೆರೆದ ರಸ್ತೆಗುಂಡಿಗಳು, 15 ದಿನದ ಮಳೆಗೆ 5,500 ರಸ್ತೆಗುಂಡಿ ಸೃಷ್ಟಿ

ಇನ್ನು ಇತ್ತೀಚೆಗೆ 14 ಸಾವಿರ ಗುಂಡಿಗಳನ್ನು ಮುಚ್ಚಿದ್ದೇವೆ ಅಂತಿದ್ದ ಪಾಲಿಕೆ, ಇದೀಗ ಇನ್ನೂ ನೂರಾರು ಗುಂಡಿಗಳಿವೆ ಅದನ್ನೆಲ್ಲ ಮುಚ್ಚುವ ಕೆಲಸ ಮಾಡುತ್ತೇವೆ ಎಂದು ಹಳೆ ಕತೆ ಹೇಳುತ್ತಿದೆ. ಈಗಾಗಲೇ ಮುಚ್ಚಿದ್ದ ಗುಂಡಿಗಳು ಮತ್ತೆ ಓಪನ್ ಆಗಿದ್ದು,ಇದನ್ನು ಕಮಿಷನರ್ ತುಷಾರ್ ಗಿರಿನಾಥ್ ಕೂಡ ಒಪ್ಪಿಕೊಂಡಿದ್ದಾರೆ. ಜೊತೆಗೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ
ವಿಡಿಯೋ: ಅಲ್ಲೂರಿ ಜಿಲ್ಲೆಯ ನದಿಯಲ್ಲಿ ತೇಲಿಬಂದ ಆಂಜನೇಯ ಸ್ವಾಮಿ ವಿಗ್ರಹ!
ವಿಡಿಯೋ: ಅಲ್ಲೂರಿ ಜಿಲ್ಲೆಯ ನದಿಯಲ್ಲಿ ತೇಲಿಬಂದ ಆಂಜನೇಯ ಸ್ವಾಮಿ ವಿಗ್ರಹ!
ಕುಮಾರಸ್ವಾಮಿ ವಿರುದ್ಧ ಎಫ್​ಐಆರ್: ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದೇನು?
ಕುಮಾರಸ್ವಾಮಿ ವಿರುದ್ಧ ಎಫ್​ಐಆರ್: ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದೇನು?
ಮೈಸೂರು ದಸರಾ: ಹೇಗಿದೆ ನೋಡಿ ಹಳೇ ಬೈಕ್​ಗಳ ಸವಾರಿ!
ಮೈಸೂರು ದಸರಾ: ಹೇಗಿದೆ ನೋಡಿ ಹಳೇ ಬೈಕ್​ಗಳ ಸವಾರಿ!
ಮೃಗಗಳಂತೆ ವರ್ತಿಸಿದ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀತಿ ಪಾಠ
ಮೃಗಗಳಂತೆ ವರ್ತಿಸಿದ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀತಿ ಪಾಠ
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?