ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಬಂದ್​ಗೆ ಆಗ್ರಹಿಸಿ ಪ್ರತಿಭಟನೆ; ಬಿ ಶ್ರೀರಾಮುಲು ಮನೆಗೆ ಮುತ್ತಿಗೆ ಹಾಕಿದ ಭಾರತ್ ಟ್ರಾನ್ಸ್​ಪೋಟ್ ಅಸೋಸಿಯೇಷನ್

ಕ್ಯಾಬ್​ಗಳನ್ನ ಇಲ್ಲಿಂದ ತೆರವು ಮಾಡುವಂತೆ ಪೊಲೀಸರು ಮನವಿ ಮಾಡುತ್ತಿದ್ದಾರೆ. ಆದರೆ ಪ್ರತಿಭಟನಾ ನಿರತರು ಶ್ರೀರಾಮುಲು ಬಂದು ನಮ್ಮ ಬೇಡಿಕೆಗಳನ್ನು ಹೀಡೆರಿಸುವವರೆಗೂ ಇಲ್ಲಿಂದ ಕ್ಯಾಬ್ ತೆಗೆಯುವುದಿಲ್ಲ ಅಂತ ಚಾಲಕರು ಪಟ್ಟು ಹಿಡಿದಿದ್ದಾರೆ.

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಬಂದ್​ಗೆ ಆಗ್ರಹಿಸಿ ಪ್ರತಿಭಟನೆ; ಬಿ ಶ್ರೀರಾಮುಲು ಮನೆಗೆ ಮುತ್ತಿಗೆ ಹಾಕಿದ ಭಾರತ್ ಟ್ರಾನ್ಸ್​ಪೋಟ್ ಅಸೋಸಿಯೇಷನ್
ಸಚಿವ ರಾಮುಲು ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
Follow us
TV9 Web
| Updated By: sandhya thejappa

Updated on:Feb 15, 2022 | 11:28 AM

ಬೆಂಗಳೂರು: ಸಾರಿಗೆ ಇಲಾಖೆ ಸಚಿವ ಬಿ ಶ್ರೀರಾಮುಲು (B Sri Ramulu) ಮನೆಗೆ ಇಂದು (ಫೆ.15) ಭಾರತ್ ಟ್ರಾನ್ಸ್​ಪೋರ್ಟ್​ ಅಸೋಸಿಯೇಷನ್ (Bharath Transport Association) ಮುತ್ತಿಗೆ ಹಾಕಿದೆ. ಅಲ್ಲದೆ ಸಚಿವ ರಾಮುಲು ಮನೆ ಮುಂದೆ ನೂರಾರು ಕಾರು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಸೆವೆನ್ ಮಿನಿಸ್ಟರ್ ಕ್ವಾರ್ಟಸ್​ನಲ್ಲಿರು ವ ಮನೆ ಮುಂದೆ ಧರಣಿ ನಡೆಸಿ, ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಕೂಡಲೇ ಬಂದ್ ಮಾಡಬೇಕು. ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸ್ಕೀಮ್ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಬೇಡಿಕೆ ಈಡೇರುವವರೆಗೆ ಸ್ಥಳದಿಂದ ಕದಲುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.

ಕ್ಯಾಬ್​ಗಳನ್ನ ಇಲ್ಲಿಂದ ತೆರವು ಮಾಡುವಂತೆ ಪೊಲೀಸರು ಮನವಿ ಮಾಡುತ್ತಿದ್ದಾರೆ. ಆದರೆ ಪ್ರತಿಭಟನಾ ನಿರತರು ಶ್ರೀರಾಮುಲು ಬಂದು ನಮ್ಮ ಬೇಡಿಕೆಗಳನ್ನು ಹೀಡೆರಿಸುವವರೆಗೂ ಇಲ್ಲಿಂದ ಕ್ಯಾಬ್ ತೆಗೆಯುವುದಿಲ್ಲ ಅಂತ ಚಾಲಕರು ಪಟ್ಟು ಹಿಡಿದಿದ್ದಾರೆ.

ಒಂದು ವಾರ ಸಮಯ ನೀಡಿ- ರಾಮುಲು: ಇನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಸಚಿವ ಶ್ರೀರಾಮುಲು, ರ್ಯಾಪಿಡ್ ಬೈಕ್, ಟ್ಯಾಕ್ಸಿ ನಮ್ಮ ಗಮನಕ್ಕೆ ಬಂದಿದೆ. ಚಾಲಕರು ಅನ್ಯಾಯವಾಗುತ್ತಿದೆ ಎಂದು ಗಮನಕ್ಕೆ ತಂದಿದ್ದಾರೆ. ಸೋಮವಾರ ಎಲ್ಲಾ ಅಧ್ಯಕ್ಷರು, ಕಾನೂನು ಸಲಹೆಗಾರರನ್ನ ಕರೆದು ಮಾತನಾಡುತ್ತೇನೆ. ಎಲೆಕ್ಟ್ರಿಕ್ ಬೈಕ್ ಬಗ್ಗೆ ಮಾತನಾಡುತ್ತೇನೆ. ಯಾವ ಚಾಲಕರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಇದನ್ನೆ ನಂಬಿ ಜೀವನ ಮಾಡುತ್ತಿರುವ ಚಾಲಕರ ಸಮಸ್ಯೆ ಬಗೆಹರಿಸುತ್ತೇನೆ. ನಿರುದ್ಯೋಗಿಗಳು ಎನೋ ಒಂದು ಲಾಭ ಬರುತ್ತೆ ಅಂತಾ ಕೆಲಸ ಮಾಡುತ್ತಾರೆ. ಆದ್ರೆ ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ ಅಂತ ತಿಳಿಸಿದರು.

ಕಾನೂನುಬಾಹಿರವಾಗಿ ಸಂಚಾರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ರ್ಯಾಪಿಡೋ ಬೈಕ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ನಾನು ಬಂದ ನಂತರ ಅನೇಕ ಕೆಲಸವನ್ನ ಮಾಡಿದ್ದೇನೆ. ಅದೇ ರೀತಿ ಈಗ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ ಶ್ರೀರಾಮುಲು, ಸೋಮವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ವೈಟ್ ಬೋರ್ಡ್ ನಿಂದ ಅನಾಹುತವಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಒಂದು ವಾರ ಸಮಯವಕಾಶ ಕೊಡಿ ಇದರ ಬಗ್ಗೆ ಚರ್ಚೆ ಮಾಡಿ ರದ್ದು ಮಾಡುವ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ

ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರುವ ನೂತನ ಕಟ್ಟಡದಲ್ಲಿ ಇಲ್ಲ ಶೌಚಾಲಯ; ಅಧಿಕಾರಿಗಳು ಕಂಗಾಲು

ನೆಟ್​ಫ್ಲಿಕ್ಸ್​ ಜತೆ ಕೈ ಜೋಡಿಸಲಿರುವ ರಾಮ್​ ಚರಣ್​? ಹೊಸ ಡೀಲ್​ ಸಲುವಾಗಿ ಮುಂಬೈನಲ್ಲಿ ಮಾತುಕತೆ

Published On - 11:27 am, Tue, 15 February 22