ಬೀದರ್ ಪೊಲೀಸರ ಸಾಧನೆ: ಜಿಲ್ಲೆಯಲ್ಲಿ ಕಡಿಮೆ ಆಯ್ತು ಕ್ರೈಂ
ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ಕ್ರೈಂ ರೇಟ್ ಜಾಸ್ತಿಯಾಗುತ್ತಿತ್ತು. ಕಳ್ಳತನ, ಗಾಂಜಾ ಸಾಗಾಟ, ಅಫೀಮು ಮಾರಾಟ, ಬೈಕ್ ಕಳ್ಳತನ, ಮನೆಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಸಾಗಿತ್ತು. ಆದರೆ ಪೊಲೀಸರು ಅಕ್ರಮ ಧಂದೆಯಲ್ಲಿ ತೊಡಗಿಕೊಂಡವರ ವಿರುದ್ಧ ಬೆನ್ನು ಬಿದ್ದಿದ್ದು ಅಕ್ರಮ ಧಂದೆಕೋರರಿಗೆ ನಡುಕ ಶುರುವಾಗಿದೆ.
ಬೀದರ್, ಜೂನ್.17: ಒಂದೂವರೆ ವರ್ಷದಿಂದ ಅಕ್ರಮ ಧಂದೆಕೋರರಿಗೆ ನಡುಕ ಹುಟ್ಟಿಸಿದ್ದ ಬೀದರ್ ಪೋಲೀಸರು (Bidar Police) ರಾಜ್ಯದಲ್ಲಿ ಅತಿ ಹೆಚ್ಚು ಗಾಂಜಾ ಸಾಗಾಟಗಾರರ ಮನೆಗಳ್ಳತನ ಮಟ್ಕಾ ಧಂದೆಕೂರರ ಹೆಡೆಮುರಿ ಕಟ್ಟುವ ಮೂಲಕ ದಾಖಲೆ ಮಾಡಿದ್ದಾರೆ. ಮಟ್ಕಾ ಕೇಸ್, ಕಳ್ಳತನ ಪ್ರಕರಣ, ಗ್ಯಾಮಲಿಂಗ್ ನಲ್ಲಿ ಭಾಗಿಯಾದವರ ಹೆಡೆ ಮುರಿ ಕಟ್ಟಿದ್ದಾರೆ. ತೆಲಗಾಂಣ ಹಾಗೂ ಮಹಾರಾಷ್ಟ್ರ ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಬಿದರ್ ಜಿಲ್ಲೆಯಲ್ಲಿ 2023ರ ಜನವರಿ ಯಿಂದ 2024ರ ಮೇ ರವೆಗೆ ಅಂದರೆ ಕಳೆದ ಒಂದೂವರೆ ವರ್ಷದಲ್ಲಿ ಜಿಲ್ಲೆಯಲ್ಲಿ ಸಂಘಟಿತ ಅಪರಾಧ ಪ್ರಕರಣವನ್ನ ರಾಜ್ಯದಲ್ಲಿಯೇ ಅತಿ ಹೆಚ್ಚು ಬೇಧಿಸುವ ಮೂಲಕ ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆದುಕೊಂಡಿದ್ದಾರೆ.
ಮಟ್ಕಾ, ಗ್ಯಾಮ್ಲಿಂಗ್, ಕಳ್ಳತನ, ದರೋಡೆ, ಎನ್ಡಿಪಿಎಸ್ ಕೇಸ್ ಹೀಗೆ ಬೇರೆ ಬೇರೆ ಅಪರಾಧ ಪ್ರಕರಣವನ್ನ ಪತ್ತೆ ಮಾಡಿದ್ದಾರೆ. 2023ರ ಒಂದು ವರ್ಷದ ಅವಧಿಯಲ್ಲಿ 10,385 ಕೇಸ್ ದಾಖಲಿಸಿ, 3,254 ಆರೋಪಿಗಳನ್ನ ಬಂಧಿಸುವಲ್ಲಿ ಬೀದರ್ ಪೋಲೀಸರು ಯಶಸ್ವಿಯಾಗಿದ್ದಾರೆ. ಇನ್ನೂ ಬಂಧಿತರಿಂದ 55 ಕೋಟಿ 11 ಲಕ್ಷ 27 ಸಾವಿರದ 862 ರೂಪಾಯಿ ಮೌಲ್ಯದ ವಸ್ತುಗಳು ಜಪ್ತಿ ಮಾಡಿದ್ದಾರೆ. ಬೀದರ್ ಜಿಲ್ಲೆಗೆ ಒಂದೂವರೆ ವರ್ಷದ ಹಿಂದೆ ಹೊಸದಾಗಿ ಎಸ್ಪಿ ಚನ್ನಬಸವಣ್ಣ ಲಂಗೋಟಿ ಜಿಲ್ಲೆಗೆ ಆಗಮಿಸುತ್ತಿದ್ದಂತೆ ರೌಡಿ ನಿಗ್ರಹ ದಳ ರಚನೆ ಮಾಡಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದವರ ಹಡೆ ಮುರಿಕಟ್ಟುತ್ತಿದ್ದಾರೆ. ಒಂದೂವರೆ ವರ್ಷದ ಅವಧಿಯಲ್ಲಿ ವಿವಿಧ ಅಪರಾಧ ಪ್ರಕರಣದಲ್ಲಿ ಭಾಗಿಯಾದ ಮಟ್ಕಾ, ಕಳ್ಳತನ, ಗ್ಯಾಮಲಿಂಗ್, ಮದ್ಯಮಾರಾಟ, ಗಾಂಜಾ ಸಗಾಟ, ಅಕ್ಕಿ ಸಾಗಾಟ ಹೀಗೆ ವಿವಿಧ ಪ್ರಕರಣದಲ್ಲಿ ಭಾಗಿಯಾದವರಿಗೆ ಜೈಲಿಗೆ ಕಳುಹಿಸಿಕೊಡುತ್ತಿದ್ದು ಅಕ್ರಮ ಧಂದೆ ಕೋರರಿಗೆ ನಡುಕ ಹುಟ್ಟುವಂತೆ ಮಾಡಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಎರಡು ವರ್ಷದ ಹಿಂದೆ ಹೋಲಿಕೆ ಮಾಡಿದರೆ ಸದ್ಯ ಜಿಲ್ಲೆಯಲ್ಲಿ ಕ್ರೈಂ ರೇಟ್ ಕುಸಿಯುತ್ತಿದೆ, ರಸ್ತೆ ಅಪಘಾತಗಳು, ಈ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇಕಡಾ 50ರಷ್ಟು ಕಡಿಮೆಯಾಗಿವೆ. ಇನ್ನೂ ಜಿಲ್ಲೆಯಲ್ಲಿ ಮಟ್ಕಾ ಧಂದೆ ಗಲ್ಲಿ ಗಲ್ಲಿಯೂ ನಡೆದಿತ್ತು, ಅಕ್ರಮ ಧಂದೆಯಲ್ಲಿ ತೊಡಗಿದವರ ವಿರುದ್ದ ಪೊಲೀಸರು ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತಿದಂತೆ ಜಿಲ್ಲೆಯಲ್ಲಿ ಕ್ರೈಂ ರೇಟ್ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದಕ್ಕೆ ಪ್ರಮುಖವಾದ ಕಾರಣ ಬೀದರ್ ಜಿಲ್ಲೆಯನ ಪೊಲೀಸರು ಎಕ್ಟಿವ್ ಆಗಿ ಕೆಲಸ ಮಾಡುತ್ತಿದ್ದು ಜಿಲ್ಲೆಯ ಎಸ್ಪಿ ಕೂಡಾ ಅಕ್ರಮ ಧಂದೆಕೋರರ ಬೆನ್ನುಬಿದ್ದು ಅಕ್ರಮ ಧಂದೆ ಕೋರರಿಗೆ ನಡುಕ ಶುರುವಾಗಿದೆ.
ಇದನ್ನೂ ಓದಿ:ಬದಲಾಯಿತು ವಿಚಾರಣೆ ಭಾಷೆ; ಪೊಲೀಸರ ಕಾಲಿಗೆ ಬಿದ್ದ ಕೊಲೆ ಆರೋಪಿ ದರ್ಶನ್?
ಬೀದರ್ ಜಿಲ್ಲೆಗೆ ಎಸ್ಪಿಯಾಗಿ ಬಂದಿರುವ ಚನ್ನಬಸವಣ್ಣ ಎಸ್.ಎಲ್. ಅವರು, ಇವರು ಜಿಲ್ಲೆಗೆ ಬಂದಾಗಿನಿಂದಲೂ ಹೊಸ ಹೊಸ ಬದಲಾವಣೆಗಳನ್ನ ಮಾಡುವುದರ ಮೂಲಕ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ರಸ್ತೆ ಅಪಘಾತಗಳನ್ನ ಕಡಿಮೆ ಮಾಡುವ ಉದ್ದೇಶದಿಂದ ಹತ್ತಾರು ಟ್ರಾಫಿಕ್ ಜಾಗೃತಿ ಮೂಡಿಸುವುದರ ಜೊತೆಗೆ ದಂಡದ ಬದಲು ಹೆಲ್ಮೇಟ್ ಕೊಡುವುದರ ಮೂಲಕ ರಸ್ತೆ ಅಪಘಾತದಿಂದಾಗಿ ಮೃತಪಡುವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವಂತೆ ಮಾಡಿದರು. ಈಗ ಮತ್ತೊಂದು ಹೊಸ ಪ್ರಯೋಗವನ್ನ ಮಾಡುವುದರ ಮೂಲಕ ಸಾರ್ವಜನಿಕರಿಗೆ ಇನಷ್ಟು ಹತ್ತಿರವಾಗಿದ್ದಾರೆ. ಇನ್ನೂ ಕಳೆದ ಆರು ತಿಂಗಳ ಅವಧಿಯಲ್ಲಿ ಗ್ಯಾಬ್ಲಿಂಗ್ 76, ಮಟ್ಕಾ 103 ಕೇಸ್, 66 ಅಬಕಾರಿ ಕೇಸ್ ಹೀಗೆ ಒಟ್ಟು 322 ಕೇಸ್ ಈ ಆರು ತಿಂಗಳಲ್ಲಿ ಪತ್ತೆ ಹಚ್ಚಿದ್ದು ಅದರಲ್ಲಿ ವಿಶೇಷವಾಗಿ 2 ಗಾಂಜಾ ಕೇಸ್ ಪತ್ತೆ ಮಾಡಿದ್ದು ಅದರ ಮೌಲ್ಯವೇ 29 ಕೋಟಿ ರೂಪಾಯಿಗೂ ಆಧಿಕ ಇದೆ, ಒಟ್ಟು ಈ ವರ್ಷ 6 ತಿಂಗಳ ಅವಧಿಯಲ್ಲಿಯೇ 34 ಕೋಟಿ ರೂಪಾಯಿಗೂ ಅಧಿಕ ಹಣ ವಸೂಲಿ ಮಾಡಿದ್ದೇವೆಂದು ಎಸ್ಪಿ ಚನ್ನಬಸವಣ್ಣ ಲಂಗೋಟಿ ತಿಳಿಸಿದ್ದಾರೆ.
ಬೀದರ್ ಜಿಲ್ಲೆಗೆ ಕಡಕ್ ಎಸ್ಪಿ ಎಂಟ್ರಿ ಕೊಡುತ್ತಿದ್ದಂತೆ ಕಳ್ಳ ಖದೀಮರು, ಧೋ ನಂಬರ್ ಧಂದೆಯಲ್ಲಿ ತೊಡಗಿದ್ದವರಿಗೆ ನಡುಕ ಶುರುವಾಗಿದೆ. ಒಂದು ವರ್ಷದ ಅವಧಿಯಲ್ಲಿ ನೂರಾರು ಕೇಸ್ ಗಳನ್ನ ಪತ್ತೆ ಹಚ್ಚಿ ನೂರಾರು ಆರೋಪಿಗಳನ್ನ ಜೈಲಿಗಟ್ಟಿ ಪದೇ ಪದೇ ಕ್ರೈಂನಲ್ಲಿ ಭಾಗಿಯಾದವರ ಮೇಲೆ ನಿರ್ಧಾಕ್ಷ್ಯಣ್ಯವಾಗಿ ರೌಡಿ ಶೀಟ್ ಓಪನ್ ಮಾಡುತ್ತಿರುವುದರಿಂದ ಕ್ರೈಂ ಜಿಲ್ಲೆಯಲ್ಲಿ ಕಂಟ್ರೋಲ್ ಗೆ ಬಂದಿದೆ ಅನ್ನುವುದರಲ್ಲಿ ತಪ್ಪೇನಿಲ್ಲ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ