ಬದಲಾಯಿತು ವಿಚಾರಣೆ ಭಾಷೆ; ಪೊಲೀಸರ ಕಾಲಿಗೆ ಬಿದ್ದ ಕೊಲೆ ಆರೋಪಿ ದರ್ಶನ್?

ಮೊದಲ ಐದು ದಿನದ ಪೊಲೀಸ್ ಕಸ್ಟಡಿಯಲ್ಲಿ ದರ್ಶನ್ ತುಟಿ ಬಿಚ್ಚಿರಲಿಲ್ಲ. ಏನೇ ಕೇಳಿದ್ರು ಗೊತ್ತಿಲ್ಲ, ನಾನು ಮಾಡಿಲ್ಲ ಎಂದು ಉತ್ತರ ಕೊಡುತ್ತಿದ್ದರು. ದರ್ಶನ್ ಪೊಲೀಸರಿಗೆ ಉಡಾಫೆಯಿಂದ ಉತ್ತರ ಕೊಡುತ್ತಿದ್ದರು. ಎರಡನೇ ಬಾರಿ ಕಸ್ಟಡಿಗೆ ಪಡೆದಾಗ ನಟ ದರ್ಶನ್ ಪೇಚಾಟ ಶುರುವಾಗಿದೆ.

ಬದಲಾಯಿತು ವಿಚಾರಣೆ ಭಾಷೆ; ಪೊಲೀಸರ ಕಾಲಿಗೆ ಬಿದ್ದ ಕೊಲೆ ಆರೋಪಿ ದರ್ಶನ್?
ದರ್ಶನ್
Follow us
Kiran HV
| Updated By: ರಾಜೇಶ್ ದುಗ್ಗುಮನೆ

Updated on:Jun 17, 2024 | 1:18 PM

ನಟ ದರ್ಶನ್ (Darshan) ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಸಿಕ್ಕಿ ಬಿದ್ದಿದ್ದಾರೆ. ಅವರು ಕೊಲೆ ಮಾಡಿದ್ದಾರೆ ಎಂದು ಸಾಬೀತು ಮಾಡಲು ಅನೇಕ ಸಾಕ್ಷಿಗಳು ಸಿಗುತ್ತಿವೆ ಎನ್ನಲಾಗಿದೆ. ಮೊದಲ ಐದು ದಿನದ ವಿಚಾರಣೆ ವೇಳೆ ದರ್ಶನ್ ಅವರು ತುಟಿ ಬಿಚ್ಚಿರಲಿಲ್ಲ ಎನ್ನಲಾಗಿದೆ. ಇತರರ ಹೇಳಿಕೆ ಇಟ್ಟುಕೊಂಡು ವಿಚಾರಣೆ ಮಾಡಲಾಗುತ್ತಿತ್ತು. ಈಗ ದರ್ಶನ್ ಅವರು ನಿಧಾನವಾಗಿ ಬಾಯ್ಬಿಡುತ್ತಿದ್ದಾರೆ ಎನ್ನಲಾಗಿದೆ. ಪೊಲೀಸರ ಕಾಲಿಗೂ ಬೀಳೋಕೆ ಅವರು ಹೋಗಿದ್ದಾರೆ ಎಂದು ವರದಿ ಆಗಿದೆ.

ಮೊದಲ ಐದು ದಿನದ ಪೊಲೀಸ್ ಕಸ್ಟಡಿಯಲ್ಲಿ ದರ್ಶನ್ ತುಟಿ ಬಿಚ್ಚಿರಲಿಲ್ಲ. ಏನೇ ಕೇಳಿದ್ರು ಗೊತ್ತಿಲ್ಲ, ನಾನು ಮಾಡಿಲ್ಲ ಎಂದು ಉತ್ತರ ಕೊಡುತ್ತಿದ್ದರು. ದರ್ಶನ್ ಪೊಲೀಸರಿಗೆ ಉಡಾಫೆಯಿಂದ ಉತ್ತರ ಕೊಡುತ್ತಿದ್ದರು. ಎರಡನೇ ಬಾರಿ ಕಸ್ಟಡಿಗೆ ಪಡೆದಾಗ ನಟ ದರ್ಶನ್ ಪೇಚಾಟ ಶುರುವಾಗಿದೆ. ಪೊಲೀಸ್ ಭಾಷೆಯಲ್ಲೇ ತನಿಖೆ ನಡೆಸಿದಾಗ ದರ್ಶನ್ ಸೈಲಂಟ್ ಆಗಿದ್ದಾರಂತೆ ‘ಸರ್ ನನ್ನ ಬಿಟ್ಟು ಬಿಡಿ’ ಎಂದು ಪೊಲೀಸರ ಕಾಲಿಗೆ ಬೀಳಲು ಹೋಗಿದ್ದಾರೆ ಎಂದು ವರದಿ ಆಗಿದೆ.

ದರ್ಶನ್ ಸ್ಟಾರ್ ಹೀರೋ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರಿಗೆ ಸಮಾಜದಲ್ಲಿ ಒಳ್ಳೆಯ ಹೆಸರಿತ್ತು. ಈ ಕಾರಣಕ್ಕೆ ದರ್ಶನ್​ ಅವರನ್ನು ಸರಳವಾಗಿ ಪ್ರಶ್ನೆ ಮಾಡುವ ಆಲೋಚನೆ ಪೊಲೀಸರಿಗೆ ಇತ್ತು. ಆದರೆ, ಇದಕ್ಕೆಲ್ಲ ಪೊಲೀಸರಿಗೆ ಸಿಕ್ಕಿದ್ದು ಉಡಾಫೆಯ ಉತ್ತರ. ಹೀಗಾಗಿ, ತಮ್ಮ ಸ್ಟೈಲ್​ನಲ್ಲಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: ದರ್ಶನ್ ಪ್ರಕರಣ: ನಟ ಚಿಕ್ಕಣ್ಣಗೂ ನೋಟಿಸ್ ಕೊಡಲಿದ್ದಾರೆ ಪೊಲೀಸರು

ಎರಡನೇ ಬಾರಿ ಕಸ್ಟಡಿಗೆ ಹೋದಾಗ ಪೊಲೀಸ್ ಸ್ಟೈಲ್‌ನಲ್ಲಿ ಪ್ರಶ್ನೆ ಮಡಲಾಗಿದೆ. ಸರ್ ನನ್ನ ಬಿಟ್ಟು ಬಿಡಿ ಎಂದು ಪರಿಪರಿಯಾಗಿ ದರ್ಶನ್ ಕೇಳಿಕೊಂಡಿದ್ದಾರಂತೆ. ‘ಸರ್ ನಿಮಗೆ ಕೈ ಮುಗಿದು ಕೇಳಿಕೊಳ್ತೇನೆ ನನ್ನ ಬಿಟ್ಟು ಬಿಡಿ’ ಎಂದು ಅವರು ಕೇಳಿದ್ದಾರಂತೆ. ಪ್ರಶ್ನೆಗಳಿಗೆ ಉತ್ತರಿಸದೆ ತಪ್ಪಾಗಿದೆ ನನ್ನ ಬಿಟ್ಟು ಬಿಡಿ ಎಂದು ಕಾಲಿಗೆ ಬಿದ್ದಿದಾರಂತೆ.

ದರ್ಶನ್ ನೋಡಲು ಯಾರೂ ಬಂದಿಲ್ಲ..

ದರ್ಶನ್ ಅವರು ಕುಟುಂಬದವರನ್ನು ತಮ್ಮಿಂದ ದೂರವೇ ಇಟ್ಟಿದ್ದರು. ಪತ್ನಿ ಜಯಲಕ್ಷ್ಮಿ ಅವರನ್ನು ದೂರ ಇಟ್ಟಿದ್ದರು. ತಾಯಿ ಮೀನಾ ತುಗೂದೀಪ ಕೂಡ ದರ್ಶನ್ ಜೊತೆ ಇಲ್ಲ. ಹೀಗಾಗಿ ಅವರ್ಯಾರೂ ದರ್ಶನ್ ಅವರನ್ನು ನೋಡಲು ಬಂದಿಲ್ಲ. ಇನ್ನು ಆಪ್ತರು ಎನಿಸಿಕೊಂಡ ಕೆಲವರು ಕೂಡ ದರ್ಶನ್​ನಿಂದ ದೂರವೇ ಇದ್ದಾರೆ. ಇನ್ನು ಕೆಲವು ಆಪ್ತರು ಜೈಲಿನಲ್ಲೇ ಇದ್ದಾರೆ. ಹೀಗಾಗಿ, ಅವರನ್ನು ನೋಡೋಕೆ ಯಾರೆಂದರೆ ಯಾರೂ ಬಂದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:15 pm, Mon, 17 June 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ