ಬಿಜೆಪಿ ಶಾಸಕ ಪ್ರಭು ಚೌಹಾಣ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು
Prabhu Chauhan hospitalized: ಬಿಜೆಪಿ ಲೋಕಸಭಾ ಚುನಾವಣಾ ಟಿಕೆಟ್ ಪಟ್ಟಿ ಕರ್ನಾಟಕದ ಹಲವು ನಾಯಕರ ಎದೆಬಡಿತ ಹೆಚ್ಚಿಸಿದೆ. ವಿರೋಧಿ ಭಗವಂತ ಖೂಬಾಗೆ ಮತ್ತೆ ಬೀದರ್ ಟಿಕೆಟ್ ಸಿಕ್ಕಿದೆ. ಇದರ ಮಧ್ಯೆ ಬಿಜೆಪಿ ಶಾಸಕ ಪ್ರಭು ಚೌಹಾಣ್ ಅವರ ಆರೋಗ್ಯವೇ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಬೈ (ಮಾರ್ಚ್.14) :ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಔರಾದ್ ವಿಧಾನಸಭ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚೌಹಾಣ್ (Prabhu Chauhan) ಆರೋಗ್ಯದಲ್ಲಿ ಏರುಪೇರಾಗಿದ್ದು, ಇದೀಗ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 3 ದಿನದ ಹಿಂದೆ ಔರಾದ್ ನಿವಾಸದಲ್ಲಿದ್ದ ವೇಳೆ ಪ್ರಭು ಸೌ ಅವರ ಎದೆ ಬಡಿತದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮುಂಬೈನ ಬಾಂದ್ರಾದ ಹೋಲಿ ಫ್ಯಾಮಿಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಾ.ಎಸ್ ಲೋಖಂಡವಾಲಾ ನೇತೃತ್ವದಲ್ಲಿ ಪ್ರಭು ಚೌಹಾಣ್ ಗೆ ಕಿರು ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯ ಪ್ರಭು ಚೌಹಾಣ್ ಆರೋಗ್ಯ ಸ್ಛಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಭಗವಂತ ಖೂಬಾಗೆ ಟಿಕೇಟ್ ನೀಡದಂತೆ ಬಿವೈ ವಿಜಯೇಂದ್ರ ಕಾಲಿಗೆ ಬಿದ್ದ ಪ್ರಭು ಚೌಹಾಣ್
ಬೀದರ್ ಕ್ಷೇತ್ರದಿಂದ ಭಗವಂತ್ ಖೂಬಾಗೆ ಟಿಕೆಟ್ ನೀಡಬೇಡಿ ಎಂದು ಪ್ರಭು ಚೌಹಾಣ್ ಪಟ್ಟು ಹಿಡಿದಿದ್ದರು. ಅಲ್ಲದೇ ಖುದ್ದು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಕಾಲಿಗೆ ಬಿದ್ದು ಬೇಡಿಕೊಂಡಿದ್ದರು. ಆದ್ರೆ, ಬಿಜೆಪಿ ಹೈಕಮಾಂಡ್, ಮತ್ತೆ ಬೀದರ್ ಟಿಕೆಟ್ ಭಗವಂತ್ ಖೂಬಾಗೆ ನೀಡಿದೆ.
ಭಗವಂತ್ ಖೂಬಾಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಪ್ರಭು ಚೌಹಾಣ್ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಶಾಕ್ ನಡುವೆ ಚೌಹಾಣ್ ಎದೆಬಡಿತದಲ್ಲಿ ಏರುಪೇರಾಗಿದೆ. ತಕ್ಷಣ ಚವ್ಹಾಣ್ ಅವರನ್ನು ಬಾಂದ್ರಾದಲ್ಲಿರುವ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:33 pm, Thu, 14 March 24